ದಶಕಗಳ ವರ್ಷಗಳ ಹಿಂದೆ, ಉತ್ತರ ಕರ್ನಾಟಕ ಭಾಗದ ಒಂದು ಹಳ್ಳಿ. ಸುಂದರವಾದ ಮಣ್ಣ, ತಂಪಾದ ಗಾಳಿ, ಮಂಜಿನಿಂದ ಆಡುತ್ತಿದ್ದ ಬೆಳಿಗ್ಗೆ ಹಳ್ಳಿಯ ಮಧ್ಯ ಭಾಗದಲ್ಲಿ ಎತ್ತರವಾಗಿ ನಿಂತಿದ್ದ ಒಂದು ದೊಡ್ಡ ಬ್ರಾಹ್ಮಣರ ಮನೆ ಬೃಹತ್ ಪ್ರವೇಶ ಬಾಗಿಲು, ಅದರ ಮೇಲೆ ಮರದ ನೈಸರ್ಗಿಕ ಕೆತ್ತನೆ, ಒಳಗೆ ಬೆಳಕು ಹರಿಯುವ ಅಂಗಳ, ಅಂಗಳಕ್ಕೆ ವ್ಯಾಪಕವಾದ ಜಂಧರ..... ಈ ಮನೆ ಕೇವಲ ಕಟ್ಟಡವಲ್ಲ,ಒಂದು ಸಂಸ್ಕೃತಿಯ ಜೀವಂತ ನಿಲಯ.
ಮನೆಯ ಮುಂದೆಯೇ ನಿಂತಿದ್ದ ದೊಡ್ಡ ಬೇವಿನ ಮರ, ಬೆಳಿಗ್ಗೆ - ಸಂಜೆ ಹಳ್ಳಿ ಮಕ್ಕಳ ಕೂಗು ಹೊಗಳುವುದಕ್ಕೆ ಸಾಕ್ಷಿಯಾಗಿತ್ತು.ಅದರ ಪಕ್ಕದಲ್ಲೇ ತುಳಸಿ ಗಿಡ ಪ್ರತಿದಿನ ಬೆಳಿಗ್ಗೆ ಅಮ್ಮನ ಕೈಯಲ್ಲಿ ಹಾಲುಬಾಳಿದ ನೀರು,ಮಂಗಳಾರತಿ. ಮನೆಗೆ ಪ್ರವೇಶಿಸಿದವರಿಗೆ ಮೊದಲು ಕಾಣುತ್ತಿದ್ದುದು ತುಳಸಿ ಮತ್ತು ಬೆಳಗಿನ ಸುವಾಸನೆ.
ಒಳಗೆ ಬಂದಾಗ ಅಂಗಳ ಅದರ ಮಧ್ಯದಲ್ಲಿ ಬಿಳಿ ಮಣ್ಣಿನಿಂದ ಗೋಡೆ ಬಿದ್ದಂಥ ನೆಲ,ಗಾಳಿಯು ಸಹ ಶುದ್ಧತೆಯನ್ನು ಹೊತ್ತಂತೆ ತೋರುತ್ತಿತ್ತು ಅಂಗಳದ ಬದಿಯಲ್ಲೇ ಕಟ್ಟಿದ ಕಟ್ಟೆ, ಅದೇ ನಮ್ಮ ಮನೆಯ ತಾತರ ಆಸನ ಕಣ್ಣುಗಳು ಚನ್ನಾಗಿ ಕಾಣದೆ ಹೋದರೂ,ಕಿವಿಗಳು ಸದಾ ಜಾಗೃತ. ಯಾರಾದರೂ ಬಾಗಿಲು ತೆರೆದರೆ ತಕ್ಷಣ ಜೋರಾಗಿ ಕೇಳುವರು, "ಯಾರು? ನಮ್ಮ ಮನೆಯಲ್ಲಿ ಯಾರು ಬಂದದ್ದು?"
ಅವರ ಆ ಘರ್ಜನೆಯಲ್ಲೇ ಒಂದು ಮಮತೆ ಇದೆ, ಕಾಳಜಿಯಿದೆ, ಮನೆಗೆ ಬಂದವರು ಅತಿಥಿಯಲ್ಲಾ ಆತ್ಮೀಯರು ಎಂಬ ಅನಿಸಿಕೆಯಿದೆ.
ತಾತ ಅಂಗಳದ ಕಟ್ಟೆಯ ಮೇಲೆ ಕುಳಿತು ಜಪ ಮಾಡುತ್ತಿದ್ದರು. ಮಂತ್ರದ ಶಬ್ದ "ಸೂರ್ಯ ನಾರಾಯಣ, ಸೂರ್ಯ ನಾರಾಯಣ" ಎಂದು ಮನೆಯ ಸುತ್ತಲೂ ಹರಡುತ್ತಿತ್ತು.
ಅಂಗಳದ ಒಳಗೆ ಬಂದರೆ ಅನೇಕ ಮನೆಯ ಕೋಣೆಗಳು, ಪ್ರತಿಯೊಂದು ಕೋಣೆಯು ತನ್ನದೇ ಕಥೆಯನ್ನು ಹೊಂದಿತು. ದೊಡ್ಡ ದೇವರ ಮನೆ, ಅದರೊಳಗೆ ತೈಲದೀಪ, ಅರಿಶಿನ ಕುಂಕುಮ ಪರಿಮಳ,ಪಿತ್ತಲದ ಗಂಟೆ ಇವೆಲ್ಲವೂ ಮನೆತನದ ಭಕ್ತಿ,ಬಾಂಧವ್ಯದ ಗುರುತು. ಪ್ರತಿಯೊಂದು ಬೆಳಿಗ್ಗೆ,ಅಮ್ಮದೇವರ ಮನೆಗೆ ಹೋಗುವ ಮೊದಲು ತಲೆಗೆ ಸ್ನಾನ, ಹೂವಿನ ಮುತ್ತಿನ ಮಾಲೆ, ನೈವೇದ್ಯ ಇದು ಮನೆಯ ನಿತ್ಯ ವಿಧಿ.
ಮನೆಯ ಒಂದು ಬದಿಯಲ್ಲಿ ದೊಡ್ಡ ಹಣ್ಣು ಹಸಿರು, ಗಿಡಗಳ ತೋಟ, ಮಲ್ಲಿಗೆ,ಬಾಳೆ, ಸೀತಾಫಲ, ದಾಳಿಂಬೆ ಎಲ್ಲವೂ ಅಪಾರ ಪೋಷಕತೆಯನ್ನು ನೀಡುತ್ತಿದ್ದವು.
ತೋಟದ ತುದಿಯಲ್ಲಿ ದೊಡ್ಡಿ ಕಪ್ಪು ಮಣ್ಣಿನ ಗೋಡೆಗಳಿಂದ ನಿರ್ಮಿಸಲಾಗಿದೆ. ದೊಡ್ಡಿಯ ಒಳಗೆ ಭಾವಿ, ತಂಪಾದ,ಮೃದುವಾದ ನೀರನ್ನು ಮನೆಗೆ ಪೂರೈಸುವ ಜೀವಧಾರೆ. ಪ್ರತಿಬಾರಿಯೂ ಅಮ್ಮ ಅಥವಾ ಅಕ್ಕರು ಭಾವಿಗೆ ಹೋಗಿ ನೀರು ತೆಗೆದಾಗ,ಎಳೆತದ ರೆಪ್ಪೆಯ ಸಡ್ಡು ಅಂಗಳದ ತನಕ ಕೇಳಿ ಬರುತ್ತಿತ್ತು.
ಮನೆಯ ಹಿಂಭಾಗದಲ್ಲಿ ಹಸುಗಳ ಕೊಟ್ಟಿಗೆ. ಹಾಲಿನ ಪರಿಮಳ, ಪಶುಗಳ ನಾದ, ಬೆಳಗಿನ ಮತ್ತು ಸಂಜೆಯ ಹಾಲು ಹೆಚ್ಚುವ ಶಬ್ದ ಇವು ಮನೆತನದ ದೈನಂದಿನ ಸಂಗೀತ. ಹಸುವಿನ ಮೇಲೆ ಇರುವ ಮಮತೆ ಮನೆಯ ಸಾಂಸ್ಕೃತಿಕ ಮೌಲ್ಯದ ಪ್ರಮುಖ ಭಾಗವಾಗಿತ್ತು.ಮನೆ ಮಕ್ಕಳು ಕೂಡ ಹಸುವಿನ ಬಳಿ ಹೋಗಿ ಬಿಸಿಬಿಸಿಯಾದ ಮಳೆಯಿಂದ ಕೈ ರೂಪಿಸಿ, ಹಸುವಿನ ಕತ್ತಿನ ಮೇಲೆ ಮಿಡಿಯುತ್ತಿದ್ದರು.
ಮನೆಯ ಅಡುಗೆ ಮನೆ ಇಲ್ಲಿ ಇದ್ದುದು ಮಡಿಕೆಗಳ ಶಬ್ದ, ಎಣ್ಣೆ ಸೂಟ್ ವಾಸನೆ, ಅಪ್ಪಟ ದೇಶಿ ಪದಾರ್ಥ ರುಚಿ. ಅಮ್ಮ ಮುಂಜಾನೆ 4ಗಂಟೆಗೆ ಎದ್ದು ಜೋಳದ ರೊಟ್ಟಿ, ತುಪ್ಪ, ಸಾಂಬಾರ, ಪಲ್ಯ ಎಲ್ಲವನ್ನೂ ಸಿದ್ಧಪಡಿಸುತ್ತಿದ್ದರು.ಮಕ್ಕಳಿಗೆ ಶಾಲೆಗೆ ಹೋಗುವ ಮೊದಲು ಬೆಣ್ಣೆ, ಸಕ್ಕರೆ ರೊಟ್ಟಿ, ತಾತನಿಗೆ ತೊಗರಿಬೇಳೆ ಸಾರಿ, ಅಪ್ಪನಿಗೆ ಲಿಂಬೆ ಚಹಾ ಪ್ರತಿಯೊಬ್ಬರಿಗೂ ಪ್ರತ್ಯೇಕ ಸಾವಿನುಡಿ.
ಮನೆ ಮಾತ್ರ ದೊಡ್ಡದಾಗಿರಲಿಲ್ಲ ಅಲ್ಲಿನ ಮನವು ಕೂಡ ದೊಡ್ಡದಾಗಿತ್ತು. ಆ ಕಾಲದ ಮನೆಗಳು ಕೇವಲ ಗಾತ್ರದಲ್ಲಿ ದೊಡ್ಡದಿರಲಿಲ್ಲ,ಮಾನವೀಯತೆ, ಮಮತೆ, ಶಿಸ್ತಿನಲ್ಲಿ ದೊಡ್ಡದಾಗಿದ್ದವು.
ಇಂದಿನ ಕಾಲಕ್ಕೆ ಹೋಲಿಸಿದರೆ, ಆ ಮನೆಯ ಜೀವನ ನಿಧಾನವಾಗಿ ಇತ್ತು, ಆದ್ರೆ ಶಾಂತಿಯುತವಾಗಿತ್ತು. ಒಟ್ಟುಗೂಡಿದ್ದ ಕುಟುಂಬ, ಒಟ್ಟಿಗೆ ಊಟ, ಒಟ್ಟಿಗೆ ಹಬ್ಬ ಇವೆಲ್ಲ ಈಗ ಅಪರೂಪ. ಆದರೆ ಸಂಪ್ರದಾಯದ ನೆನಪುಗಳು ಜೀವಂತವಾಗಿ ಉಳಿದುಕೊಂಡಿವೆ.
ಬರಹ : ಪ್ರಿಯಾಂಕಾ ಕುಲಕರ್ಣಿ
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.