'ಕಾಡು ಕಾಯುವವರು' ಮತ್ತು 'ಅವನತಿ' ತುಂಬಾ ಕಾಡಿದ ಕಥೆಗಳು. ನೌಶಾದ್ ಪ್ರಪಂಚವನ್ನು ನೋಡುವ ರೀತಿಯೇ ಅವರ ಕಥೆಗಳ ಬಹುದೊಡ್ಡ ಹೂರಣ ಹಾಗೂ ಪ್ಲಸ್ ಪಾಯಿಂಟ್, ಆದ್ದರಿಂದಲೇ ಅವು ಅನೇಕ ಮನಸುಗಳನ್ನು ತಟ್ಟುವುದು ಅನ್ನೋದು ನನ್ನ ವೈಯಕ್ತಿಕ ಭಾವನೆ'. ಎನ್ನುತ್ತಾರೆ ನವೀನ್ ಕುಮಾರ್ ಬಜ್ಜಳ್ಳಿ. ಅವರು ಲೇಖಕ ನೌಶಾದ್ ಜನ್ನತ್ತ್ ಬರೆದ 'ಕಾಡು ಕಾಯುವವರು' ಕಥಾ ಸಂಕಲನಕ್ಕೆ ಬರೆದ ಅನಿಸಿಕೆ...
ಇದೊಂದು ಇತ್ತೀಚೆಗೆ ಬಿಡುಗಡೆಯಾದ, 11 ಕಥೆಗಳ ಸಂಕಲನ, ಅದನ್ನು ಸ್ವಚ್ಛವಾಗಿ ನೇಯ್ದು ಕೊಟ್ಟಿರುವ ಲೇಖಕ ನೌಶಾದ್ ಜನ್ನತ್ತ್ (Noushad jannat) ಅವರ ಅನುಭವ ಬುತ್ತಿ ಇಲ್ಲಿ ಕೆಲಸ ಮಾಡಿದೆ, ಓದಿದ ನಂತರ ಅಲ್ಲಿನ ವಿಷಯಗಳು ಕಾಡುತ್ತವೆ, ಚಿಂತನೆಗೆ ದೂಡುತ್ತವೆ, ಅಷ್ಟೇ ಯಾಕೆ ನಮ್ಮ ಬದುಕಿಗೆ ಹತ್ತಿರವಾಗಿಯೇ ಇದೆ ಅನ್ನಿಸುತ್ತವೆ.
ಪುಟ್ಟ ಕಥೆಗಳ ತಾಕತ್ತೇ ಅಂತಹುದ್ದು, ಕಾಡದಿದ್ದರೆ ಕಥೆಯ ಉಪಯೋಗವಾದರೂ ಏನು ಅಲ್ವಾ? ಸುಂದರ ಸರಳ ಭಾಷೆಯಿಂದ, ಕಾಡಿನ ವಾತಾವರಣ ಪರಿಚಯ ಮಾಡುತ್ತ, ಅಲ್ಲಿನ ಜನರ ಬದುಕನ್ನು ತಿಳಿಸುತ್ತಾ ಸೂಕ್ಷ್ಮವಾಗಿ ಒಂದು ಸಂದೇಶ ಪ್ರತಿಕಥೆಯಲ್ಲಿ ಕೊಡುತ್ತಾ ಹೋಗುತ್ತಾರೆ ಲೇಖಕ. ಇಲ್ಲಿ ಕಾಡು ಕಾಯುವವರು ಮತ್ತು ಅವನತಿ ತುಂಬಾ ಕಾಡಿದ ಕಥೆಗಳು. ನೌಶಾದ್ ಪ್ರಪಂಚವನ್ನು ನೋಡುವ ರೀತಿಯೇ ಅವರ ಕಥೆಗಳ ಬಹುದೊಡ್ಡ ಹೂರಣ ಹಾಗೂ ಪ್ಲಸ್ ಪಾಯಿಂಟ್, ಆದ್ದರಿಂದಲೇ ಅವು ಅನೇಕ ಮನಸುಗಳನ್ನು ತಟ್ಟುವುದು ಅನ್ನೋದು ನನ್ನ ವೈಯಕ್ತಿಕ ಭಾವನೆ.
ಓದಿದ ನಂತರ ನನಗೆ ಅನ್ನಿಸಿದ್ದು, ಇಂತಹ ಕಥೆಗಳನ್ನು ಹೆಚ್ಚೆಚ್ಚು ಜನರು ಓದುವ ಅವಶ್ಯಕತೆಯಿದೆ, ಯಾಕಂದ್ರೆ ಬದುಕಿನ ಬಹುದೊಡ್ಡ ಆಯಾಮ ಪರಿಚಯವಾಗುವುದು ಇಂತಹ ಕಥೆಗಳಿಂದಲೇ.
ಕೃತಿ : ಕಾಡು ಕಾಯುವವರು
ಲೇಖಕ : ನೌಶಾದ್ ಜನ್ನತ್ತ್
ಪ್ರಕಾಶನ : ನಮ್ಮ ಕೊಡಗು
ಬೆಲೆ : 140/-
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.