ಸಣ್ಣ ಸಣ್ಣ ವಿಷಯಕ್ಕೂ ಮರುಗುವ, ಕೊರಗುವ, ವಿಫಲತೆಗಾಗಿ ಪ್ರಯತ್ನ ಕೈಬಿಡುವ ದುರ್ಬಲರಿಗೆ ತಮ್ಮ 'ಆತ್ಮ ಕತೆ' ಪ್ರೇರಣಾದಾಯಿಯಾಗಿದೆ'. ಎನ್ನುತ್ತಾರೆ ಹಿರಿಯ ಸಾಹಿತಿ ಎ ಎ ಸನದಿ. ಅವರು ಲೇಖಕ, ಉಪನ್ಯಾಸಕ ಸಿದ್ಧೇಶ್ ಕೆ ಅವರ ಆತ್ಮ ಕತೆ 'ಕೊಲುದಾರಿ' ಕೃತಿಗೆ ಬರೆದ ಪ್ರಶಂಸನಾ ಪತ್ರ..
ನನ್ನ ಹಿರಿಯ ಮಗ - ಯುವಕವಿ ನದೀಮ್ ಸನದಿಗೆ ಶ್ರೀ ವಸುಧೇಂದ್ರ ಅವರು ತಾವು ಬರೆದ (ಸಿದ್ಧೇಶ್ ಕೆ) ಆತ್ಮಕತೆ 'ಕೊಲುದಾರಿ' ಕೃತಿಯನ್ನು ಕೊಟ್ಟಿದ್ದರು. ಅದನ್ನು ನಾನು ಓದಿದೆ. ಮನವು ತುಂಬಿ ಬಂತು. ಕಣ್ಣುಗಳಲ್ಲಿ ಅಶ್ರುಧಾರೆ. ತಮ್ಮ ಸಾಹಸಗಾಥೆ ನಿಜಕ್ಕೂ ಮನವನ್ನು ಮುಟ್ಟಿತು. ಕೊನೆಗೂ ತಾವು ಪ್ರಯತ್ನದ ಪಯಣದಲ್ಲಿ ಸಫಲರಾಗಿ ಗುರಿ ತಲುಪಿದುದು ಸಮಾಧಾನದ ವಿಷಯ.
ಸಣ್ಣ ಸಣ್ಣ ವಿಷಯಕ್ಕೂ ಮರುಗುವ, ಕೊರಗುವ, ವಿಫಲತೆಗಾಗಿ ಪ್ರಯತ್ನ ಕೈಬಿಡುವ ದುರ್ಬಲರಿಗೆ ತಮ್ಮ'ಆತ್ಮ ಕತೆ' ಪ್ರೇರಣಾದಾಯಿಯಾಗಿದೆ.
ಶೈಲಿ ತುಂಬಾ ಸರಳವಾಗಿ, ಆಪತ್ತೆಯಿಂದ ಓದುಗರನ್ನು ಸೆಳೆಯುತ್ತದೆ. ತಮ್ಮ ಪತ್ನಿಯ ಜೀವನೋತ್ಸಹವೂ ತಮಗೆ ಪೂರಕವಾಗಿರುವುದು ; ಇದರಿಂದ ತಮ್ಮ ಉದ್ದೇಶ -ಗುರಿ ಈಡೇರಿದುದು ಕಥೆ ಒಂದು ಸಿನೆಮಾದಂತೆ ಸಾಗುತ್ತದೆ.
ತಮ್ಮ ಪತ್ನಿ, ಬಳಗ ಹಾಗೂ ತಮ್ಮ ಕಾಲೇಜಿನ ಎಲ್ಲ ಸಹೋದ್ಯೋಗಿಗಳಿಗೂ ನಮಸ್ಕಾರಗಳು...
ಕೃತಿ : 'ಕೋಲುದಾರಿ' ಸಿದ್ದೇಶ್ ಕೆ ಆತ್ಮ ಕಥೆ
ಪ್ರಕಾಶನ : ಛಂದ ಪುಸ್ತಕ
ಪುಸ್ತಕದ ಬೆಲೆ : 160 /-
ಈ ಕೃತಿಯನ್ನು ಖರೀದಿಸಲು ಸಂಪರ್ಕಿಸಿ : 98444 22782
1.jpg)

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.