'ಕೃಷ್ಣಯ್ಯನ ಕೊಳಲು': ಆಧುನಿಕ ರಾಜಕೀಯದ ಕನ್ನಡಿ!


ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಹಿರಿಯ ಲೇಖಕ ಟಿ. ಗೋವಿಂದರಾಜು ಅವರು 'ಕೃಷ್ಣಯ್ಯನ ಕೊಳಲು' ಕಾದಂಬರಿಯಲ್ಲಿ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಓ.ಎಲ್. ನಾಗಭೂಷಣ ಸ್ವಾಮಿ ಅವರು ಹೇಳುತ್ತಾರೆ. ಅವರು ಈ ಕೃತಿಗೆ ಬರೆದ ಬೆನ್ನುಡಿ ಹೀಗಿದೆ:

ಕೃಷ್ಣಯ್ಯನ ಕೊಳಲು' ಟಿ. ಗೋವಿಂದರಾಜು ಅವರ ಮೊದಲನೆಯ ಕಾದಂಬರಿ. ಅವರು ಇಲ್ಲಿ ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಮಾಡಿದ್ದಾರೆ. ಕೊಳಲನ್ನು ಹಿಡಿವ ಕೃಷ್ಣ. ಚಕ್ರಧಾರಿಯಾಗುವ ಕೃಷ್ಣರ ಕಥೆಯ ಪದರದ ಹಿಂದೆ ಒಬ್ಬಂಟಿಯಾಗುವ. 

ಅಸಹಾಯಕನಂತೆಯೂ ತೋರುವ ಜನನಾಯಕನ ಕಥೆಯೂ ಆಡಗಿದೆ. ಕೃಷ್ಣಯ್ಯನ ಪಾತ್ರದ ನೆನಪುಗಳ ಸುರುಳಿ ಬಿಟ್ಟಿದಂತೆ ಅವನ ಒಳಗಿನ ಆಪ್ತ ಲೋಕವೂ ಭಾಗವತ, ಮಹಾಭಾರತದ ಕಥಾ ಹೂರಣವಾಗಿ ಬರುತ್ತವೆ. ದ್ವಾರಕೆಯಲ್ಲಿರುವ ಉಳ್ಳವರ ಮಕ್ಕಳ ವರ್ತನೆ, ಸಮಕಾಲೀನ ಸಿರಿವಂತ ಯುವಜನತೆಯ ವರ್ತನೆಯ ಚಿತ್ರಣವಾಗಿ ಕಾಣುತ್ತದೆ, ಜನರ ಅಸಹಾಯಕತೆ, ಧರ್ಮದ ಅಮಲನ್ನು ರಾಜಕೀಯಕ್ಕೆ ಬಳಸುವ ರೀತಿ ಇವು ಅಂದಿನ ಮತ್ತು ಇಂದಿನ ಕಾಲದ ವಾಸ್ತವಗಳೂ ಆಗುತ್ತದೆ.

ಕೃಷ್ಣಯ್ಯ ಮಾತ್ರವಲ್ಲದೆ ಯುಧಿಷ್ಠಿರನಂಥ ಇತರ ಪೌರಾಣಿಕ ಪಾತ್ರಗಳೂ ಕಾಲದ ದಿಕ್ಕುತೋಚದ, ನಿರ್ಣಯಕ್ಕೆ ಬರಲಾರದ ನಿಷ್ಪಲವಾಗಿ ಕೊರಗುವ ಪಾತ್ರಗಳಾಗಿ ಎಷ್ಟೋ ಸಲ ಕಾಣುತ್ತವೆ. ಕೊಳಲು ಕೃಷ್ಣಯ್ಯನ ಆಪ್ತಲೋಕದ ಚಿತ್ರಣಕ್ಕೆ ಒದಗಿಬಂದರೆ ದ್ವಾರಕೆಯ ರಾಜಕೀಯ ನಮ್ಮ ಕಾಲದ ಘರ್ಷಣೆಗಳಿಗೆ ಕನ್ನಡಿಯಾಗುತ್ತದೆ. ಈ ಕಥನದ ಓದುಗರು ಗೋವಿಂದ ರಾಜು ಅವರ ಉದ್ದೇಶವನ್ನೂ ವಾಚಿ ಸಮಕಾಲೀನ ಬದುಕನ್ನು ಕುರಿತು ತಮ್ಮ ನಿರ್ದಿಷ್ಟ ನಿಲುವಿನಿಂದ ವಾಗ್ವಾದಕ್ಕೆ ಇಳಿಯುವಂತೆ ಮಾಡುವುದರಲ್ಲಿ ಸಫಲವಾಗಿದೆ.
 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...