ವಿಶ್ವನಾಥ ಅರಬಿಯವರ ಪ್ರಕೃತಿಯನ್ನು ಅತೀ ಹತ್ತಿರದಿಂದ ಕಂಡು, ಅದರ ಆರಾಧನೆಯಲ್ಲಿಯೇ ಮನದ ಭಾವನೆಯನ್ನು ಚಿಕ್ಕ ಸಾಲುಗಳಾಗಿ ಬರಹದ ರೂಪದಲ್ಲಿ ಹೊರಹಾಕಿದರು. ಅದರ ಫಲವೇ ಈ ಹನಿಗವನ ಸಂಕಲನ. ಎನ್ನುತ್ತಾರೆ ಲೇಖಕಿ ಎಚ್. ಜಿ. ಸಂಗೀತಾ ಮಠಪತಿ. ಅವರು ಲೇಖಕ ವಿಶ್ವನಾಥ ಅರಬಿ ಬರೆದ 'ಅಂಕೋಲೆಯಲ್ಲಿ ಅರಳಿದ ಹೂವು' ಕೃತಿಗೆ ಬರೆದ ಅನಿಸಿಕೆ.
ಸಾಹಿತ್ಯಕ್ಕೊಂದು ಸ್ಫೂರ್ತಿ ಇದ್ದೇ ಇರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕವಿ ವಿಶ್ವನಾಥ ಅರಬಿಯವರ ಸಾಹಿತ್ಯಕ್ಕೆ ಸ್ಫೂರ್ತಿ- ಹಚ್ಚ ಹಸಿರು, ನಿಸರ್ಗ. ಕಾರಣವೇನೆಂದರೆ ಅವರು ಗ್ರಾಮ ಲೆಕ್ಕಾಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ. ಅಲ್ಲಿನ ಪ್ರಕೃತಿಯನ್ನು ಅತೀ ಹತ್ತಿರದಿಂದ ಕಂಡು, ಅದರ ಆರಾಧನೆಯಲ್ಲಿಯೇ ಮನದ ಭಾವನೆಯನ್ನು ಚಿಕ್ಕ ಸಾಲುಗಳಾಗಿ ಬರಹದ ರೂಪದಲ್ಲಿ ಹೊರಹಾಕಿದರು. ಅದರ ಫಲವೇ ಈ ಹನಿಗವನ ಸಂಕಲನ. ಅಂಕೋಲೆಯಲ್ಲಿನ ಅನುಭವಗಳ ಗುಚ್ಛವೇ ವಿಶ್ವನಾಥ ಅರಬಿಯವರ ಒಂಭತ್ತನೇ ಕೃತಿ ಅಂಕೋಲೆಯಲ್ಲಿ ಅರಳಿದ ಹೂವು.
ಈಗಾಗಲೇ ವಿಶ್ವ ಚೇತನ, ವಿಶ್ವನ ಹಾಯ್ಕುಗಳು, ಧರಣಿ ಮತ್ತು ಬದುಕು, ಅಬಾಬಿಗಳ ಲೋಕದಲ್ಲಿ ವಿಶ್ವ, ಪ್ರೇಮ ಕಾರಂಜಿ, ಭಾವ ಸೋಲುವ ವೇಳೆ, ಒಲವ ವೃಷ್ಠಿ, ಪರ್ಣ ಎಂಬ ಎಂಟು ಪದ್ಯ ಪ್ರಕಾರದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡುವ ಮೂಲಕ ಓದುಗರ ಮನದ ಬಾಗಿಲನ್ನು ತಟ್ಟಿರುವ ವಿಶ್ವನಾಥ ಅರಬಿಯವರ ಕಾವ್ಯ ರಚನಾ ಶೈಲಿ ವಿಶಿಷ್ಟವಾದದ್ದು. ಕಂದಾಯ ಇಲಾಖೆಯ ಒತ್ತಡದ ಕೆಲಸದ ಮಧ್ಯೆಯೂ ಸಾಹಿತ್ಯಕ್ಕಾಗಿ ಸಮಯ ಮೀಸಲಿಟ್ಟು ಪದ್ಯ ಪ್ರಕಾರದಲ್ಲಿ ಸಾಕಷ್ಟು ಕೃಷಿ ಮಾಡಿರುವ ಇವರಿಂದ ಆದಷ್ಟು ಬೇಗ ಗದ್ಯ ಪ್ರಕಾರದ ಸಾಹಿತ್ಯ ಹೊರಬರಲೆಂದು ಮನಸಾ ಶುಭ ಹಾರೖಸುವೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.