ನವ ದಂಪತಿಗಳು ಓದಲೇಬೇಕಾದ ಸ್ಪೂರ್ತಿದಾಯಕ ಕೃತಿ


'ಈ ಕೃತಿಯು ಓದುಗರಲ್ಲಿ ಆತ್ಮಪರಿಶೀಲನೆಗೆ ಪ್ರೇರೇಪಿಸುವುದರ ಜೊತೆಗೆ, ಸುಂದರ ಮತ್ತು ಸ್ಥಿರ ದಾಂಪತ್ಯದ ದಾರಿಯನ್ನು ತೋರಿಸುತ್ತದೆ'. ಎನ್ನುತ್ತಾರೆ ಮಹಾಂತಮ್ಮ ಸಿದ್ದಪ್ಪ ಸರೂರು. ಅವರು ಲೇಖಕ ಡಾ. ವಿರೂಪಾಕ್ಷ ದೇವರಮನೆ ಅವರು ಬರೆದ 'ನೀನಿಲ್ಲದೇ ನನಗೇನಿದೆ' ಎಂಬ ಕೃತಿಗೆ ಬರೆದ ಅನಿಸಿಕೆ...

ಡಾ. ವಿರೂಪಾಕ್ಷ ದೇವರಮನೆ ಅವರ “ನೀನಿಲ್ಲದೇ ನನಗೇನಿದೆ..!” ಎಂಬ ಕೃತಿ ದಾಂಪತ್ಯ ಜೀವನದ ಸೌಂದರ್ಯವನ್ನು ಅರಿತುಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗುವಂತಹ ಮನಮುಟ್ಟುವ ಕೃತಿಯಾಗಿದೆ. 2003ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಪುಸ್ತಕ ಈಗಾಗಲೇ ಎಂಟು ಬಾರಿ ಮರುಮುದ್ರಣಗೊಂಡಿದ್ದು, ಓದುಗರ ಪ್ರೀತಿಗೆ ಪಾತ್ರವಾಗಿದೆ. ಈ ಪುಸ್ತಕವನ್ನು ಓದಿದಾಗ, ಅದರಲ್ಲಿರುವ ಸಂಭಾಷಣೆಗಳು, ಉಕ್ತಿಗಳು ಅಥವಾ ತಾತ್ಪರ್ಯಗಳು ಎಲ್ಲೋ ಓದಿದಂತೂ, ಕೇಳಿದಂತೂ, ಕಂಡಂತೂ ಅನಿಸಲಿಲ್ಲ. ಪ್ರತಿಯೊಂದು ಭಾಗವೂ ಹೊಸತನದಿಂದ, ಆಳವಾದ ಪರಿಪಕ್ವತೆಯಿಂದ ಬರೆಯಲ್ಪಟ್ಟಿದೆ.

ಲೇಖಕರು ದಾಂಪತ್ಯ ಜೀವನದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳನ್ನು — ಹೊಂದಾಣಿಕೆ, ಕ್ಷಮಾಗುಣ , ಲೈಂಗಿಕ ಅಸಮಾಧಾನ,ಅನುಮಾನ,ಅವಮಾನ, ಅನೈತಿಕತೆ ಸಂಬಂಧ ಮತ್ತು ಅರ್ಥಮಾಡಿಕೊಳ್ಳುವಿಕೆಯ ಕೊರತೆ ಮುಂತಾದ ಸೂಕ್ಷ್ಮ ಅಂಶಗಳನ್ನು ಅತ್ಯಂತ ಸಂವೇದನಾಶೀಲವಾಗಿ ವಿಶ್ಲೇಷಿಸಿದ್ದಾರೆ. ಈ ಕೃತಿಯು ಓದುಗರಲ್ಲಿ ಆತ್ಮಪರಿಶೀಲನೆಗೆ ಪ್ರೇರೇಪಿಸುವುದರ ಜೊತೆಗೆ, ಸುಂದರ ಮತ್ತು ಸ್ಥಿರ ದಾಂಪತ್ಯದ ದಾರಿಯನ್ನು ತೋರಿಸುತ್ತದೆ.

ಕೆಲವು ಅಧ್ಯಾಯದ ಕೊನೆಯಲ್ಲಿ ಕುವೆಂಪು ಅವರ ಕವಿತೆಯ ಉಲ್ಲೇಖವು ಕೃತಿಗೆ ಕಾವ್ಯಮಯ ಸ್ಪರ್ಶ ನೀಡುತ್ತದೆ. “ಅವಳು ನಾಕ; ಅವಳು ನರಕ – ನಾಕ ಜೊತೆಯೊಳಿದ್ದರೆ, ನರಕ ದೂರ ಹೋದರೆ!” ಎಂಬ ಕವಿತೆಯ ಸಾಲುಗಳು ದಾಂಪತ್ಯದ ಬಾಂಧವ್ಯದ ಗಾಢತೆಯನ್ನು ಅನಾವರಣಗೊಳಿಸುತ್ತವೆ.

ಈ ಕೃತಿ ಕೇವಲ ಸಲಹೆಗಳ ಸಂಗ್ರಹವಲ್ಲ, ಬದಲಾಗಿ ಪ್ರೀತಿ, ಅರ್ಥಮಾಡಿಕೊಳ್ಳುವಿಕೆ, ಹಾಗೂ ಪರಸ್ಪರ ಗೌರವದಿಂದ ತುಂಬಿದ ಜೀವನದ ನಿಜವಾದ ಅರ್ಥವನ್ನು ತಿಳಿಸುತ್ತದೆ. “ಸುಂದರವಾದ ಜೀವನ ಎನ್ನುವದು ಪರಸ್ಪರ ಎಷ್ಟು ಅರ್ಥಮಾಡಿಕೊಂಡಿದ್ದೀರಿ ಎನ್ನುವುದರ ಮೇಲೆ ಅಲ್ಲ; ಬದಲಾಗಿ ಅಪಾರ್ಥಗಳು ಬರದಂತೆ ಕಾಯುವ ಮನೋಭಾವದ ಮೇಲೆ ನಿಂತಿದೆ” ಎಂಬ ಉಕ್ತಿಯು ಅರ್ಥಪೂರ್ಣವಾಗಿದೆ. ಹೀಗೆ ಹಲವಾರು ಉಕ್ತಿಯನ್ನು ನಾನು ಓದಲು ಸಿಗುತ್ತವೆ ಈ ಕೃತಿಯಲ್ಲಿ
, “ನೀನಿಲ್ಲದೇ ನನಗೇನಿದೆ..!” ಎಂಬ ಕೃತಿ ನವ ದಾಂಪತ್ಯ ಜೀವನಕ್ಕೆ ಕಾಲಿಡುವ ದಂಪತಿಗಳಿಗೆ ಅಮೂಲ್ಯ ಉಡುಗೊರೆಯಾಗಿದ್ದು, ಎಲ್ಲ ದಂಪತಿಗಳು ಓದಲೇಬೇಕಾದ ಸ್ಪೂರ್ತಿದಾಯಕ ಗ್ರಂಥವಾಗಿದೆ.

ಪುಸ್ತಕದ ಹೆಸರು: ನೀನಿಲ್ಲದೇ ನನಗೇನಿದೆ..! — ಸುಂದರ ದಾಂಪತ್ಯಕ್ಕೆ ಸರಳ ಮಾರ್ಗದರ್ಶಿ
ಲೇಖಕ: ಡಾ. ವಿರೂಪಾಕ್ಷ ದೇವರಮನೆ
ಪ್ರಕಾಶಕರು: ಸಾವಣ್ಣ ಎಂಟರ್‌ಪ್ರೈಸಸ್
ಪ್ರಕಾಶನ ವರ್ಷ: 2003
ಪ್ರಕಾರ: ಕಥಾಸಂಕಲನ / ದಾಂಪತ್ಯ ಮಾರ್ಗದರ್ಶಿ

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...