"ಈ ನಾಟಕ ಬರೆಸಿಕೊಳ್ಳುವಾಗ ಅತ್ಯಂತ ಖುಷಿ ಕೊಟ್ಟಿದೆ ಹಾಗೇ ಓದುಗರಾದ ನಿಮಗೂ ನೆಮ್ಮದಿ ಕೊಡಲೆಂಬ ಆಶಯ. ರಂಗದ ಮೇಲೆ ಪ್ರಯೋಗ ಕಂಡರೆ ಅತ್ಯಂತ ಸಂತೋಷ. ನಮ್ಮದೇ ಪ್ರಕಾಶನ 'ಮಳೆಕೋಂಗಿಲ'ದ ಮೊದಲ ಪ್ರಕಟಣೆಯಾಗಿ ಈ ನಾಟಕ ಹೊರ ಬರುತ್ತಿದೆ ಎಂಬುದು ಸಂತಸದ ಸಂಗತಿ," ಎನ್ನುತ್ತಾರೆ ವಿಜಯಶ್ರೀ ಹಾಲಾಡಿ. ಅವರು ʻಗುಬ್ಬಚ್ಚಿ ಮನೆʼ ಕೃತಿಗೆ ಬರೆದ ಲೇಖಕರ ನುಡಿ..
ಒಮ್ಮೆ ಬರೆದು ಒಂದಷ್ಟು ಸಮಯ ಹಾಗೇ ಇಟ್ಟು, ಮತ್ತೆ ತಿದ್ದಿ ಬರೆದ 'ಗುಬ್ಬಚ್ಚಿ ಮನೆ ಎಂಬ ಕನ್ನಡ ಶಾಲೆ' ನಾಟಕವನ್ನು ಪ್ರಕಟಿಸುವ ಕ್ಷಣ ಈಗ ಬಂದೇಬಿಟ್ಟಿತು!. ಇಲ್ಲಿನ ಪಾತ್ರಧಾರಿಗಳು ಹೆಚ್ಚಿನವು ನಮ್ಮನೆಯ ಬೆಕ್ಕುಗಳು ಮತ್ತು ನಾಯಿ ಪಾಪಣ್ಣ. ಜೊತೆಗೆ ಗುಬ್ಬಿ ಮರಿಗಳು, ಮಿಂಚುಳ್ಳಿ, ಅಳಿಲು, ಡಾಂಕಿ ಮಂಕಿ, ದೆವ್ವಗಳು, ತಟ್ಟಿರಾಯ, ಕಾಳಜ್ಜ, ಪುಟ್ಟ, ಪುಟ್ಟಿ ಎಲ್ಲರೂ ಇದ್ದಾರೆ. 'ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ನಮ್ಮ ಮಕ್ಕಳು ಓದಬೇಕು' ಎಂಬ ಚಿಂತಕರ; ಹಿರಿಯರ ಕನಸು ಸೊರಗುತ್ತಿದೆ, ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಸೋಲುತ್ತಿವೆಯೇನೋ ಎಂಬ ಭಾವ ಬರುತ್ತಿದೆ. ಆದರೆ ಹಾಗಾಗುವುದಿಲ್ಲ, ನಮ್ಮ ಶಾಲೆಗಳು ನಮ್ಮ ಕನ್ನಡ ಸೋಲುವುದಿಲ್ಲ ಎಂಬ ಆಶಾವಾದ ಹಲವರದ್ದು; ಹಾಗೇ ಈ ನಾಟಕದ್ದು! ಈ ಆಶಾವಾದ ನಮ್ಮೆಲ್ಲರ ಎದೆಯಲ್ಲಿದೆ. ಅದಕ್ಕೆ ನಾಟಕದ ಪಾತ್ರಧಾರಿಗಳು ದನಿ ಕೊಟ್ಟಿದ್ದಾರೆ.
ಈ ನಾಟಕ ಬರೆಸಿಕೊಳ್ಳುವಾಗ ಅತ್ಯಂತ ಖುಷಿ ಕೊಟ್ಟಿದೆ ಹಾಗೇ ಓದುಗರಾದ ನಿಮಗೂ ನೆಮ್ಮದಿ ಕೊಡಲೆಂಬ ಆಶಯ. ರಂಗದ ಮೇಲೆ ಪ್ರಯೋಗ ಕಂಡರೆ ಅತ್ಯಂತ ಸಂತೋಷ. ನಮ್ಮದೇ ಪ್ರಕಾಶನ 'ಮಳೆಕೋಂಗಿಲ'ದ ಮೊದಲ ಪ್ರಕಟಣೆಯಾಗಿ ಈ ನಾಟಕ ಹೊರ ಬರುತ್ತಿದೆ ಎಂಬುದು ಸಂತಸದ ಸಂಗತಿ. ನನ್ನ ಪುಸ್ತಕಗಳನ್ನು ನಾನೇ ಪ್ರಕಟಿಸಿಕೊಳ್ಳಬೇಕೆಂಬ ಆಸೆ ಬಹುಕಾಲದ್ದಾದರೂ ಅನೇಕ ಕಾರಣಗಳಿಂದ ಅದಕ್ಕೆ ಸಮಯ ಕೂಡಿಬಂದಿರಲಿಲ್ಲ. ಈಗ ಆ ಕಾಲ ಬಂದಿದೆ. ಅತ್ಯಂತ ಸಮಾಧಾನ- ಸಹಜತೆಯಿಂದ; ಪ್ರಾಮಾಣಿಕತೆಯಿಂದ ಈ ಹಾದಿಯಲ್ಲಿ ಪಯಣಿಸಬೇಕು ಎಂಬುದು ನಮ್ಮ ಪ್ರಕಾಶನ ಬಳಗದ ಆಸೆ.
ಸಂತೋಷ್ ಸಸಿಹಿತ್ಲು ಅವರು ನಾಡಿನ ಪ್ರಖ್ಯಾತ ಚಿತ್ರ ಕಲಾವಿದರು. ಮಕ್ಕಳ ಸಾಹಿತ್ಯಕ್ಕಂತೂ ಅವರ ಚಿತ್ರಗಳು ಹೊಸ ಮೆರುಗು ಕೊಡುತ್ತವೆ. ತಮ್ಮ ಕೆಲಸಗಳ ಒತ್ತಡದಲ್ಲೂ ನಾಟಕವನ್ನು ಓದಿ ಬಹುಬೇಗನೇ ಸೂಕ್ತ ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ, ಹಾಗೇ ಚಂದದ ಮುಖಪುಟವನ್ನೂ ಮಾಡಿಕೊಟ್ಟಿದ್ದಾರೆ. ವೆಂಕಟರಮಣ ಐತಾಳ್ ಸರ್ ಅವರು ಪ್ರತಿಷ್ಠಿತ ನೀನಾಸಮ್ ನ ನಿರ್ದೇಶಕರಾಗಿದ್ದವರು. ಸಾಹಿತ್ಯ, ನಾಟಕ, ರಂಗಕಲೆಯ ಕುರಿತು ಅಪಾರ ಜ್ಞಾನ, ಅನುಭವ ಹೊಂದಿದವರು. ಅವರು ಬಿಡುವಿರದ ದಿನಚರಿಯ ನಡುವೆ ಗುಬ್ಬಚ್ಚಿ ಮನೆ ಎಂಬ ಕನ್ನಡ ಶಾಲೆಗಾಗಿ ಸಮಯ ನೀಡಿ ಮುನ್ನುಡಿ ಬರೆದುಕೊಟ್ಟದ್ದು ಅತ್ಯಂತ ಸಂತಸದ ಸಂಗತಿ. ಹಿರಿಯ ಮಕ್ಕಳ ಸಾಹಿತಿಗಳಾದ ಲಲಿತ ಹೊಸಪ್ಯಾಟಿ ಮೇಡಂ ಅವರು ತಾಯಿಯ ಮಮತೆಯಿಂದ ಈ ನಾಟಕವನ್ನು ಓದಿ ಚಂದದ, ಸುದೀರ್ಘ ಅಭಿಪ್ರಾಯ ಬರೆದಿದ್ದಾರೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.