ವಸುಧೇಂದ್ರರ 'ತೇಜೋ ತುಂಗಭದ್ರಾ' – ವರ್ಷ ಕಳೆದರೂ ಮರೆಯಲಾಗದ ಕಥಾನಕ


ಸೂಳೆಯರೆಂದದರೆ ಎಲ್ಲರಿಗೂ ಒಂದು ರೀತಿ ತಾತ್ಸಾರ ಮನೋಭಾವ. ಅದರಲ್ಲಿ ಆಗಿನ ಕಾಲದ ಸೂಳೆಯರ ಕಷ್ಟ ಕಾರ್ಪಣ್ಯಗಳನ್ನ ಈ ಕಾದಂಬರಿಯಲ್ಲಿ ಲೇಖಕರು ತಿಳಿಸಿದ್ದಾರೆ, ತೇಜೋ ತುಂಗಭದ್ರಾ ಕಾದಂಬರಿಯು ತಿಂಗಳು ವರ್ಷಗಳು ಉರುಳಿದರೂ ಅದರ ನೆನಪಿನಲ್ಲಿಯೇ ನಮ್ಮನ್ನು ಉಳಿಯುವಂತೆ ಮಾಡುತ್ತದೆ'. ಎನ್ನುತ್ತಾರೆ ಯಮುನ. ಅವರು ಲೇಖಕ, ಪ್ರಕಾಶಕ ವಸುಧೇಂದ್ರ ಅವರು ಬರೆದ 'ತೇಜೋ ತುಂಗಭದ್ರಾ' ಕಾದಂಬರಿಗೆ ಬರೆದ ಅನಿಸಿಕೆ...

ನಾನು ತೇಜೋ ತುಂಗಭದ್ರ ಕಾದಂಬರಿಯನ್ನು ಇತ್ತೀಚಿಗೆ ಓದಿದೆ. ಅತ್ಯದ್ಭುತ ಕಾದಂಬರಿಯನ್ನು ಓದುಗರಿಗೆ ಕೊಟ್ಟಿದ್ದಾರೆ ವಸುಧೇಂದ್ರ ಸರ್. ನನಗೆ ಇಷ್ಟು ದಿನ ಹಂಪೆ ಎಂದರೆ ಮಹಾನವಮಿ ದಿಬ್ಬ. ವಿರೂಪಾಕ್ಷೇಶ್ವರ ದೇವಸ್ಥಾನ. ಕಡಲೆ ಕಾಳು ಗಣಪ ಮತ್ತು ರಸ್ತೆಗಳಲ್ಲಿ ಮುತ್ತು ರತ್ನಗಳನ್ನು ಮಾರುತ್ತಿದ್ದಂತಹ,ಅತಿ ಶ್ರೀಮಂತ ವಿಜಯನಗರ ಸಾಮ್ರಾಜ್ಯ  ಎಂದು ಇವಿಷ್ಟು ಚಿತ್ರಗಳು ನೆನಪಿಗೆ ಬರುತ್ತಿದ್ದವು. ಆದರೆ ಇನ್ನು ಮುಂದೆ ಹಂಪೆ ಎಂದರೆ ತೇಜೋತುಂಗಭದ್ರ ನೆನಪಿಗೆ ಬರುತ್ತದೆ. ಆಗಿನ ಶತಮಾನದ ಲಿಸ್ಬನ್ ಮತ್ತು ವಿಜಯನಗರ ಸಾಮ್ರಾಜ್ಯದ ರಾಜಕೀಯ. ಸಾಂಸ್ಕೃತಿಕ. ವ್ಯವಹಾರಿಕ   ಮತ್ತು ಸಾಮಾಜಿಕ ಜನಜೀವನವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ,ಇಲ್ಲಿನ ಜನಸಾಮಾನ್ಯರ ಜೀವ, ಜೀವನ ಆಳುವವರ ಆಜ್ಞೆಗನುಸರವಾಗಿ ತುಂಬಾ ಕಷ್ಟಕರವಾಗಿ ಬಿಂಬಿತವಾಗಿದೆ.

ಸತಿ ಹೋಗುವ ಕ್ರಿಯೆಯಂತೂ ನಮ್ಮ ಮುಂದೆ ನಡೆಯುತ್ತಿದೆ ಎಂಬಂತೆ ಅನಿಸುತ್ತದೆ. ಅಂದರೆ ಹಂಪಮ್ಮನಿಗೆ ಮಾಡುವ ಶಾಸ್ತ್ರಗಳು.  ಅವಳ ಎಡಗೈಗೆ ಹಚ್ಚೆ ಹಾಕುವುದು. ಒಡವೆಗಳನ್ನೆಲ್ಲ ಹಾಕಿ ಅಲಂಕರಿಸುವುದು. ಗೌರಿ ಪೂಜೆ.  ಕೇಶವನ ಕುದುರೆಯ ಮೇಲೆ ಮೆರವಣಿಗೆ ಹೋಗುವುದು. ಅಗ್ನಿಕುಂಡವನ್ನು ತುಪ್ಪದ ಮಡಿಕೆಯನ್ನು ಹೊತ್ತುಕೊಂಡು ಸುತ್ತುವರೆಯುವುದು. ಹಾಗೂ ಅವಳು ಪ್ರದಕ್ಷಿಣೆ ಹಾಕುವಾಗ ಅಮ್ಮ ನನ್ನನ್ನು ಬೆಂಕಿಗೆ ಹಾಕಬೇಡಮ್ಮ ಎನ್ನುವ ಕಂದನ ಕೂಗು ಹೀಗೆ ಇದೆಲ್ಲ ಓದುವಾಗ ನನಗಂತೂ ತುಂಬಾನೇ ಅಳು ಬಂದಿತು. ಮಳೆ ಏನಾದರೂ ಬಂದು ಅಗ್ನಿಕುಂಡದ ಬೆಂಕಿಯೆಲ್ಲ ನಂದಿ ಹಂಪಮ್ಮನು  ಬದುಕಿ ಬರಲಿ  ಅಂತ ಅನ್ನಿಸಿತು. ಆದರೆ ಕೇಶವನ  ನೆನಪಿನ ಮೂಲಕವೇ ಹಂಪಮ್ಮ ಬದುಕಿದ್ದು ಹಾಗೂ ಅಮ್ಮದಕಣ್ಣನೊಡನೆ ಹೊಸ ಬದುಕು ಕಟ್ಟಿಕೊಂಡದ್ದು  ಖುಷಿ ನೀಡಿತು. 

ನಾವೆಲ್ಲ  ಮಹಾಭಾರತದಲ್ಲಿ ಮಾದ್ರಿಯು  ಪಾಂಡುವಿನೊಡನೆ ಸತಿ ಸಹಗಮನ ಹೋಗುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಸತಿ ಸಹಗಮನ ಮಾಡುವ ಪದ್ಧತಿಯನ್ನು ಎಳೆ ಎಳೆಯಾಗಿ  ಲೇಖಕರು ಚಿತ್ರಿಸಿದ್ದಾರೆ. ಅದರಲ್ಲಿಯೂ ಕುಂತಿಯು ಸತಿ ಸಹಗಮನ ಹೋಗದೆ ಎಷ್ಟೊಂದು ಕಷ್ಟ ಅನುಭವಿಸಿದಳು. ಎನ್ನುವ ಹೆಂಗಸರು, ಹೆಣ್ಣು ಸಹಗಮನ ಮಾಡಲೇಬೇಕು ಎನ್ನುತ್ತಾರೆ.

ಇಲ್ಲಿ ಲೇಖಕರು ಗುಣಸುಂದರಿಯು ಕೃಷ್ಣದೇವರಾಯನಿಗೆ ಅಮುಕ್ತ ಮೌಲ್ಯದ ಬಗ್ಗೆ ಮಾತನಾಡುತ್ತಾ ನೀವು ಕನ್ನಡದಲ್ಲಿ ಬರೆದಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂದು ಹೇಳುವುದರ ಮೂಲಕ ಕನ್ನಡ ಭಾಷಾ ಪ್ರೇಮವನ್ನು ತಿಳಿಸಿದ್ದಾರೆ.

ಅಡವಿ ಸ್ವಾಮಿಯ ಪಾತ್ರ ಹಾಗು ಅವರ ಊರಿನ ಹೆಸರಿನ ಬಗ್ಗೆ ಇದ್ದ ಸ್ವಾಭಿಮಾನ ನನಗೆ ತುಂಬಾ ಇಷ್ಟವಾಯಿತು. ತೆಂಬಕಪುರ ಎನ್ನುವುದನ್ನು ಬಿಟ್ಟು ತನ್ನ ನಾಲಿಗೆ ಬೇರೆ ಹೆಸರನ್ನು ಕರೆಯಬಾರದೆಂದು, ತನ್ನ ನಾಲಿಗೆಯನ್ನು ತಾನೇ ಕಡಿದುಕೊಂಡು, ತಾನು ಮಾತನಾಡಲು ಮಾತನಾಡಲು  ಬಾರದೆ, ಗಟ್ಟಿಯಾದ ಆಹಾರವನ್ನು ತಿನ್ನಲು ಬಾರದೆ, ಕಷ್ಟಪಡುವುದು ತುಂಬಾ ಮನಕಲಕಿತು. ಹಾಗೂ ಸತಿಸಹಗಮನದ ಹಚ್ಚೆಯನ್ನು  ನವಿಲಿನ ಚಿತ್ತಾರವನ್ನಾಗಿ ತಿದ್ದುವುದರ  ಮೂಲಕ ಹಂಪಮ್ಮಳನ್ನು ಜನರಿಂದ ಕಾಪಾಡಿದ್ದು ಇಷ್ಟವಾಯಿತು.

ಇನ್ನು ತೆಂಬಕ್ಕ ಜೀವಂತ ಸಮಾಧಿ ಯಾಗುವುದು. ಕೇಶವ ಲೇಂಕನಾಗಿ ಸೇವೆ ಸಲ್ಲಿಸುವುದು ಹೃದಯವಿದ್ರಾವಕ ಘಟನೆಯಾಗಿದೆ.ಈ ಪದ್ಧತಿಯನ್ನು ನಾನು ಕೇಳಿರಲಿಲ್ಲ ಇಲ್ಲೇ ಓದಿದ್ದು. ಇಷ್ಟೊಂದು ಇಷ್ಟೊಂದು ಅನಿಷ್ಟ ಪದ್ಧತಿ ಜಾರಿಯಲ್ಲಿತ್ತಾ ಎಂದು  ಅನಿಸುತ್ತದೆ. ರಾಜರಿಗೋಸ್ಕರ ಪ್ರಜೆಗಳು ತಮ್ಮ ಜೀವವನ್ನೇ ಬಲಿ ಕೊಡಬೇಕಾ, ಇಲ್ಲಿ ಪ್ರಜೆಗಳ ಜೀವಕ್ಕೆ ಬೆಲೆಯೇ ಇಲ್ಲವಾ, ಅದರಲ್ಲೂ ಕೇಶವ ಮತ್ತು ಹಂಪಮ್ಮ ಹೊಸದಾಗಿ ಮದುವೆಯಾದ ಜೋಡಿ. ಅದರಲ್ಲೂ ತನಗೆ ತಾನೇ ತನ್ನ ಪ್ರಾಣವನ್ನು ತೆಗೆದುಕೊಳ್ಳುವುದು ಅದು ಕೂಡ ನಗುನಗುತ್ತಾ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕು. ಎಷ್ಟು ಕ್ರೂರ ಪದ್ಧತಿ ಅಂತ ಅನ್ನಿಸಿತು. 

ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಪಂಜಿನ ಕವಾಯತ್ತಿನ ಪ್ರದರ್ಶನದಲ್ಲಿ, ಕುದುರೆಗಳನ್ನು ನೋಡುವಾಗ ಕೇಶವನು ಪರ್ಶಿಯಾ ಕುದುರೆಯನ್ನೇರಿ  ತೆಂಬಕ ಪುರಕ್ಕೆ ಬಂದದ್ದು ನೆನಪಾಯಿತು. ಈ ಕಾದಂಬರಿಯು ನನ್ನನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ, ಸುತ್ತಮುತ್ತಲಿನ ಯಾವುದೇ ಘಟನೆಯನ್ನು ನೋಡಿದರೂ, ಅದು  ತೇಜೋ ತುಂಗಭದ್ರದ   ಘಟನೆಗಳೊಂದಿಗೆ ಮೆಲುಕು ಹಾಕುವಂತೆ ಮಾಡುತ್ತದೆ.

ಇದರಲ್ಲಿ ಗೇಬ್ರಿಯಲ್ ಮತ್ತು ಬೆಲ್ಲಾಳ ಪ್ರೀತಿಯ ಪರಿ. ಅವಳು ಕೊಟ್ಟ ಮೀನುಗಳನ್ನು ಗೇಬ್ರಿಯಲ್ ಜೋಪಾನ ಮಾಡುವುದನ್ನು ಸುಂದರವಾಗಿ ಚಿತ್ರಿಸಿದ್ದಾರೆ, ಎಲ್ಲರಿಗೂ ಸಹಾಯ ಮಾಡುವ ಅವನ ಒಳ್ಳೆಯತನ  ಹಿಡಿಸಿತು. ಅವನ ಒಳ್ಳೆಯತನವೇ, ಅಮ್ಮದಕಣ್ಣನನ್ನಾಗಿ ಬದುಕಿಸಿತು ಎನಿಸುತ್ತದೆ.

ಯಹೂದಿಗಳ ಹತ್ಯೆ.
ಪೋರ್ಚುಗೀಸರು ಮತ್ತು ಮುಸ್ಲಿಮರು ಪ್ರಜೆಗಳನ್ನು ಮತಾಂತರ ಗೊಳಿಸುವಾಗಿನ ಪದ್ಧತಿ. ವಾಸ್ಕೋಡಿಗಾಮನು ಸಮುದ್ರಯಾನ ಮಾಡುವಾಗ ನಡೆಸುವ ಹತ್ಯಾಕಂಡ ಅತ್ಯಾಚಾರ ತುಂಬಾ ಭೀಕರವಾಗಿದೆ.

ಸೂಳೆಯರೆಂದದರೆ ಎಲ್ಲರಿಗೂ ಒಂದು ರೀತಿ ತಾತ್ಸರ ಮನೋಭಾವ. ಅದರಲ್ಲಿ ಆಗಿನ ಕಾಲದ ಸೂಳೆಯರ ಕಷ್ಟ ಕಾರ್ಪಣ್ಯಗಳನ್ನೂ  ಲೇಖಕರು ತಿಳಿಸಿದ್ದಾರೆ, ಒಟ್ಟಾರೆ ತೇಜೋ ತುಂಗಭದ್ರಾ ಕಾದಂಬರಿಯು ತಿಂಗಳು ವರ್ಷಗಳು ಉರುಳಿದರೂ ಅದರ ನೆನಪಿನಲ್ಲಿಯೇ ನಮ್ಮನ್ನು ಉಳಿಯುವಂತೆ ಮಾಡುತ್ತದೆ.

ವಸುಧೇಂದ್ರ ಸರ್ ಗೆ ಧನ್ಯವಾದಗಳು. 
ಇತಿಹಾಸವನ್ನೆಲ್ಲ ಅಧ್ಯಯನ ಮಾಡಿ, ಇಂತಹ ಅಮೋಘ ಕಾದಂಬರಿಯನ್ನು ನಮಗೆ ಓದಲು ನೀಡಿದ್ದಕ್ಕಾಗಿ.

ಕೃತಿ : ತೇಜೋ ತುಂಗಭದ್ರಾ
ಲೇಖಕರು : ವಸುಧೇಂದ್ರ
ಪ್ರಕಾಶನ :  ಛಂದ ಪುಸ್ತಕ
ಪುಟ ಸಂಖ್ಯೆ : 464
ಬೆಲೆ : 450

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...