ವಯಸ್ಸಿನ ಹಂಗನ್ನೂ ಮೀರಿ ರೂಪುಗೊಂಡಿರುವ ಅದ್ಭುತ ಮತ್ತು ವಿಶಿಷ್ಟ ಕಾದಂಬರಿ ʻಹಾಣಾದಿʼ


"ಕಥೆಯ ನಿರೂಪಣೆಯಲ್ಲಿ ಹೊಸಕ್ರಮ ಮೊದಲ ಇಪ್ಪತ್ತು ಪುಟಗಳಲ್ಲಿ ಹಳಿ ತಪ್ಪಿದಂತೆ ಭಾಸವಾದರೂ ನಂತರದ ಭಾಗದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕವಿಸಹಜ ಬರವಣಿಗೆ ಮತ್ತು ಪ್ರಬುದ್ಧ ರೂಪಕಗಳೂ ಹೆಚ್ಚಿವೆ. ಬಾಲ್ಯದ ಅಖಂಡ ನೆನಪುಗಳು ಮತ್ತು ಭೌಗೋಳಿಕ ಚಿತ್ರಣ ಕಾದಂಬರಿಯ ಶಕ್ತಿ," ಎನ್ನುತ್ತಾರೆ ವಸಂತ್. ಅವರಯ ಕಪಿಲ ಪಿ. ಹುಮನಾಬಾದೆಯವರ ʻಹಾಣಾದಿʼ ಕೃತಿ ಕುರಿತು ಬರೆದ ಅನಿಸಿಕೆ.

ವಯಸ್ಸಿನ ಹಂಗನ್ನೂ ಮೀರಿ ರೂಪುಗೊಂಡಿರುವ ಅದ್ಭುತ ಮತ್ತು ವಿಶಿಷ್ಟ ಕಾದಂಬರಿ “ಹಾಣಾದಿ”. ಕಪಿಲ ಪಿ ಹುಮನಾಬಾದೆಯವರು ತಮ್ಮ ಇಪ್ಪತ್ತೆರಡನೇ ವಯಸ್ಸಿಗೆ ಹೀಗೊಂದು ಕಾದಂಬರಿ ಬರೆದಿರುವುದು ನಿಜಕ್ಕೂ ನನ್ನನ್ನ ಅಚ್ಚರಿಗೊಳಪಡಿಸಿದೆ.

ಹಳ್ಳಿ ತೊರೆದ ಯುವಕೊನಬ್ಬ ಮನಿಯಾರ್ಡರ್ ಸ್ವೀಕರಿಸದ ಅಪ್ಪನನ್ನು ಕಾಣಲು ಮರಳಿ ಮಣ್ಣಿಗೆ ಬಂದು ದಾರುಣ ಕತೆಗೆ ಸಾಕ್ಷಿಯಾಗುವುದೇ ಹಣಾದಿಯ ಒನ್ಲೈನ್ ಸ್ಟೋರಿ. ಬರೀ ಇಷ್ಟೇ ಆಗಿದ್ದರೆ ಅಂತಹ ವಿಶೇಷತೆಯೆನಿರುತ್ತಿರಲಿಲ್ಲ, ಆದರೆ ತನ್ನ ಅಪ್ಪನ ಹುಡುಕುವಿಕೆಯಲ್ಲಿ ಭೂತ ಮತ್ತು ವರ್ತಮಾನಗಳ ನೆನಪುಗಳ ಸರಣಿ ಬಿಚ್ಚಿಕೊಳ್ಳುವ ಪರಿ, ಆ ನೆನಪುಗಳು ಕಾದಂಬರಿಯುದ್ದಕ್ಕೂ ಹಿಂದುಮುಂದು ಚಲಿಸಿ ಆ ನೆನಪಿನ ಸರಪಳಿಯಲ್ಲಿ ಓದುಗರನ್ನು ಬಂಧಿಸುವಂತಹ ಲೇಖಕರ ಸೃಜನಶೀಲ ಬರವಣಿಗೆ ಮೆಚ್ಚುವಂತದ್ದು.

ಕಥೆಯ ನಿರೂಪಣೆಯಲ್ಲಿ ಹೊಸಕ್ರಮ ಮೊದಲ ಇಪ್ಪತ್ತು ಪುಟಗಳಲ್ಲಿ ಹಳಿ ತಪ್ಪಿದಂತೆ ಭಾಸವಾದರೂ ನಂತರದ ಭಾಗದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕವಿಸಹಜ ಬರವಣಿಗೆ ಮತ್ತು ಪ್ರಬುದ್ಧ ರೂಪಕಗಳೂ ಹೆಚ್ಚಿವೆ. ಬಾಲ್ಯದ ಅಖಂಡ ನೆನಪುಗಳು ಮತ್ತು ಭೌಗೋಳಿಕ ಚಿತ್ರಣ ಕಾದಂಬರಿಯ ಶಕ್ತಿ. ಇವೆಲ್ಲೆದರ ಜೊತೆ ಮಿಳಿತವಾಗಿರುವ ಮಾಂತ್ರಿಕವಾಸ್ತವವಾದ ಕಾದಂಬರಿಯ ಉತ್ಕೃಷ್ಟತೆಯನ್ನು ಹೆಚ್ಚಿಸುತ್ತದೆ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...