'ಈ ಪುಸ್ತಕದಲ್ಲಿ ಒಟ್ಟು ಒಂಬತ್ತು ಕಥೆಗಳಿದ್ದು, ಆ ಎಲ್ಲ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ವಿಶಿಷ್ಟತೆಗಳನ್ನ ಒಳಗೊಂಡಿವೆ. ಇದರಲ್ಲಿ ಬರುವ "ಅಬ್ ನಾರ್ಮಲ್ ಚೆನ್ನ" ಎಂಬ ಕಥೆಯು ಶಾಲೆಯಲ್ಲಿ ಪ್ರತಿಯೊಬ್ಬ ಓದುವ ವಿದ್ಯಾರ್ಥಿಗಳಿಗೆ ಆಗುವ ಕೆಲವು ವಂಚನೆ, ಪ್ರೋತ್ಸಾಹ ನೀಡದಿರುವುದು ಮತ್ತು ಅಸಮಾನತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ'.ಎನ್ನುತ್ತಾರೆ ಮೌನೇಶ ಬಿ. ಬಾರಕೇರ. ಅವರು ಶಿಕ್ಷಕ, ಲೇಖಕ ಗುಂಡೂರಾವ್ ದೇಸಾಯಿ ಅವರು ಬರೆದ 'ಚಾರ್ಲಿ ಚಾರ್ಲಿ ವ್ಹೇರ್ ಆರ್ ಯೂ..?' ಕೃತಿಗೆ ಬರೆದ ಅನಿಸಿಕೆ...
ಆರಾಧ್ಯ ಗುರುಗಳಾದ ಗುಂಡೂರಾವ್ ದೇಸಾಯಿ ಸರ್ ನನ್ನ ಬಾಲ್ಯ ಜೀವನದಲ್ಲಿ ಪ್ರಮುಖರಾಗಿ ಕಾಣಿಸಿ, ಶಿಕ್ಷಸಿ, ಒಬ್ಬ ಬರಹಗಾರರನ್ನಾಗಿ ರೂಪಿಸಿದವರು. ಪ್ರಸ್ತುತ ಸರಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕರಾದ ಇವರು ಶಾಲೆಯಲ್ಲಿ ಮಕ್ಕಳ ಮನದಾಳದ ಭಾವನೆಗಳು, ಆಲೋಚನೆಗಳು, ಚಂಚಲತೆ, ತಪ್ಪುಗಳು, ಸಂಚುಗಳು, ಹಾಸ್ಯಗಳ ಬಗ್ಗೆ ಅವರಿಗೆ ಇರುವ ಜ್ಞಾನ ಅಪಾರ ಎಂಬುದು ಈಗಾಗಲೇ ಬಿಡುಗಡೆಯಾದ "ಮಕ್ಕಳೇನು ಸಣ್ಣವರಲ್ಲ", ಎಂಬ ಪುಸ್ತಕದಲ್ಲಿ ನಾವು ಕಂಡಿದ್ದೇವೆ, ಆದರೆ ನಮ್ಮನ್ನು ಇನ್ನು ಮುಗ್ದತೆಗೆ ಮತ್ತು ಆಳಕ್ಕೆ ಕರೆದೊಯ್ಯುವ ಪುಸ್ತಕವೇ " ಚಾರ್ಲಿ ಚಾರ್ಲಿ ವ್ಹೇರ್ ಆರ್ ಯೂ..?. "ಎಂಬ ಮಕ್ಕಳ ಕಥಾಸಂಕಲನ.
ಈ ಪುಸ್ತಕದಲ್ಲಿ ಒಟ್ಟು ಒಂಬತ್ತು ಕಥೆಗಳಿದ್ದು, ಆ ಎಲ್ಲ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ವಿಶಿಷ್ಟತೆಗಳನ್ನ ಒಳಗೊಂಡಿವೆ. ಇದರಲ್ಲಿ ಬರುವ "ಅಬ್ ನಾರ್ಮಲ್ ಚೆನ್ನ" ಎಂಬ ಕಥೆಯು ಶಾಲೆಯಲ್ಲಿ ಪ್ರತಿಯೊಬ್ಬ ಓದುವ ವಿದ್ಯಾರ್ಥಿಗಳಿಗೆ ಆಗುವ ಕೆಲವು ವಂಚನೆ, ಪ್ರೋತ್ಸಾಹ ನೀಡದಿರುವುದು ಮತ್ತು ಅಸಮಾನತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅದಲ್ಲದೆ ಪೇಪರ್ ಮತ್ತು ದೆವ್ವ ಈ ಕಥೆಯಲ್ಲಿ ಮುಗ್ದ ಮಕ್ಕಳಲ್ಲಿ ಹಿರಿಯರು ತುಂಬುತ್ತಿರುವ ಮೂಢನಂಬಿಕೆಗಳನ್ನ ಮತ್ತು ಅವು ಹೇಗೆ ಮಕ್ಕಳಲ್ಲಿ ಬೇರುರುತ್ತವೆ ಎಂಬುದನ್ನ ವಿವರಿಸಿದ್ದಾರೆ..ಮತ್ತು "ಹ್ಯಾಪಿ ಬರ್ತಡೇ" ಎಂಬ ಕಥೆಯಲ್ಲಿ ಮಕ್ಕಳಲ್ಲಿ ನಡೆಯುವ ಹಾನಿಕಾರಕವಲ್ಲದ ಸಂಚಿನ ಬಗ್ಗೆ ಬಹಳ ಹಾಸ್ಯಮಯವಾಗಿ ರೂಪಿಸಿದ್ದಾರೆ.
ಅಂತೆಯೇ "ರೀನಾ ಮತ್ತು ಚಹಾ" ಕಥೆಯನ್ನ ಓದಿ ಒಂದು ಕ್ಷಣ ನನ್ನ ಜೀವನದಲ್ಲಿ ನಡೆದ ಘಟನೆಯೇ ಎಂದೇನಿಸಿತು. ಚಹಾ ನೀಡಲು ಶಿಕ್ಷಕರ ತರಗತಿಗೆ ಶಾಲಾ ಪಿರಡ್ ಅವಧಿ ತಪ್ಪಿಸಿ ಹೋಗುತ್ತಿದ್ದದ್ದು, ಚಹಕ್ಕಾಗಿಯೇ ಶಾಲೆಗೆ ಬರುತ್ತಿದ್ದು ನೋಡಿ. ಇನ್ನು "ಗಲ್ಲಿ ಕ್ರಿಕೆಟ್" ನ್ನು ಹಾಸ್ಯಮಾಯವಾಗಿ ನಾವು ನಮ್ಮ ಶಾಲೆಯಲ್ಲಿ ಮತ್ತು ಓಣಿಯೊಳಗೆ ಆಡಿದ ಆಟವನ್ನು ಹೊರತೋರಿಸಿದ್ದಾರೆ, ಅಂತೆಯೇ ಸಿಟಿಯ ಹುಡುಗರು ಕೇವಲ ನಿಯಮಗಳಿಗೆ ಅಷ್ಟೇ ಸೀಮಿತ ಮತ್ತು ಆ ನಿಯಮಗಳನ್ನ ದಾಟಿದರೆ ಆ ಮಕ್ಕಳಿಗೆ ಮುಂದೆ ದಾರಿ ಕಾಣದು ಮತ್ತು ಸ್ವಂತ ನಿಯಮ ಸೃಷ್ಟಿಸಲು ಸಾಧ್ಯವಿಲ್ಲ, ಅಂತೆಯೇ ಆ ಸಿಟಿ ಮಕ್ಕಳಿಗಿಂತ ಹಳ್ಳಿಯ ಮಕ್ಕಳು ಬಹಳ ಆಕ್ಟಿವ್ ಆಗಿರುತ್ತಾರೆ ಮತ್ತು ಗೊತ್ತಿರದಿದ್ದರೂ ಯಾವುದೇ ವಿಷಯವಾಗಲಿ ಪ್ರಯತ್ನವಾದರೂ ಮಾಡುತ್ತಾರೆ ಎಂದು ನೈಜವಾಗಿ ತೋರಿಸಿದ್ದಾರೆ.
ಇನ್ನು "ಸೂರ್ಯ ಮಾಮ" ಎಂಬ ಕಥೆಗೆ ಬಂದರೆ ಪ್ರತೀ ಚಿಕ್ಕ ಮಕ್ಕಳಲ್ಲಿ ಮೂಡುವ ಪ್ರಶ್ನೆ ಗಳನ್ನು ಅರಿತುಕೊಂಡು ಅದಕ್ಕೆ ಉತ್ತರವನ್ನು ನೀಡಿದ ಗುಂಡೂರಾವ್ ರವರು ಈ ಕಥೆಯಿಂದ ಪರಿಸರ ರಕ್ಷಣೆಯ ಬಗ್ಗೆ ವಿವರಿಸಿದ್ದು, "ಚೋಟ್ಯಾಗಳ ಚಮತ್ಕಾರ" ಎಂಬ ಕಥೆಗಳಲ್ಲಿ ಮಕ್ಕಳ ದೈಹಿಕ ಬೆಳವಣಿಗೆಯು ಮಾನಸಿಕ ಬೆಳವಣಿಗೆಗೆ ಯಾವುದೇ ಸಂಬಂಧವಿಲ್ಲ ಮತ್ತು ಮಕ್ಕಳ ಮನೋಸ್ಥಿತಿಯಂತೆ ಸಾಹಸಮಯವನ್ನು ವಿವರಿಸಿದ್ದು ಓದುಗರನ್ನ ಏಕತೆಯಿಂದ ಕಥೆಯನ್ನ ಓದಿಸಬೇಕೆಂದು ಸೂಕ್ಷ್ಮವಾಗಿ ರೂಪಿಸಿದ್ದಾರೆ... ಅದೇನೇ ಆಗಲಿ ಗುರುಗಳ ಕಥೆಗಳು ಮನಸ್ಸಿನ ಆಳಕ್ಕೆ ಇಳಿದು ಹಾಸ್ಯ, ವಾಸ್ತವದ ಜೊತೆಗೆ ವಿಚಾರ, ಚಿಂತನೆ ಮಾಡುವಂತಹ ಕಥೆಗಳನ್ನು ನೀಡಿದ್ದಾರೆ. ಅವರ ಈ ಪುಸ್ತಕಕ್ಕೆ ಶುಭಕೋರುತ್ತ ಇನ್ನಷ್ಟು ಪುಸ್ತಕಗಳು ಅವರಿಂದ ನಮಗೆ ಸಿಕ್ಕು ಓದುವಂತಾಗಲಿ ಎಂದು ಹಾರೈಸುತ್ತೇನೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.