ಅಅಅಅಮೆರಿಕಾ… ಇದು ಅಪರೂಪದ ತಿರುಗಾಟ


"ಇಲ್ಲಿ ಪುಸ್ತಕದಲ್ಲಿ ಅವರ ತಿರುಗಾಟದ ಕಾಣ್ಕೆಗಳಿಗಿಂತ ನನಗೆ ಕುತೂಹಲಕರ ಅನ್ನಿಸಿದ್ದು, ಇಲ್ಲಿ ಸಿಗುವ ಅವರ ಕುಟುಂಬದ ಒಡನಾಟಗಳ ಮೆಟಾಡೇಟಾ. ಹೆಚ್ಚಿನಂಶ ಆ ಕಾರಣಕ್ಕಾಗಿಯೇ ಪುಸ್ತಕಕ್ಕೆ ಪ್ರತಿಕ್ರಿಯಿಸುತ್ತಿರುವ ಬಹುತೇಕ ಎಲ್ಲರಿಂದಲೂ ನಮ್ಮ ಮನೆಯಲ್ಲೂ, ನಮ್ಮೆದುರಲ್ಲೇ ನಡೆದಿರಬಹುದಾದ ಘಟನೆಗಳ ರೀತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಎಂಬ ಪ್ರತಿಕ್ರಿಯೆಗಳು ಬರುತ್ತಿವೆ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಭಾರತಿ ಬಿ.ವಿ ಅವರ ‘ಅಅಅಅಮೆರಿಕಾ ಭಾರತಿ ಕಂಡಂತೆ’ ಕೃತಿ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ.

ಊರಿನ ಪ್ರತೀ ಕೂಡು ಕುಟುಂಬದಲ್ಲೂ ಕನಿಷ್ಠ ಒಂದು ಅಮೆರಿಕಾ ಸಂಪರ್ಕ ಸಿಕ್ಕಿ 30 ವರ್ಷ ಆದ ಬಳಿಕ, ಈಗ ಮತ್ತೆ ಅಮೆರಿಕಾ ಪ್ರವಾಸ ಕಥನ ಅಂದರೆ, ಹೊಸದೇನು ಬಾಕಿ ಉಳಿದಿದೆಯಪ್ಪಾ ಎಂಬ ಕುತೂಹಲ ಮೂಡದೇ ಇರ್ತದಾ?... ಭಾರತಿ ಅವರ ಹಿಂದಿನ “ನಕ್ಷತ್ರಗಳ ಸುಟ್ಟ ನಾಡಿನಲ್ಲಿ” ಓದಿನ ಹಿನ್ನೆಲೆಯಲ್ಲಿ ಮತ್ತು ಇಲ್ಲೇ ಫೇಸ್‌ಬುಕ್ಕಿನಲ್ಲಿ ಈ ಪುಸ್ತಕದ ಟ್ರೇಲರ್ ಸರಣಿ ಪ್ರಕಟ ಆಗಿದ್ದ ಹಿನ್ನೆಲೆಯಲ್ಲಿ ಈ ಪುಸ್ತಕ ಓದಿದೆ.

ಇಲ್ಲಿಂದ ಅಮೆರಿಕಕ್ಕೆ ದಾಟಿಹೋದ ಟೆಕ್ಕಿಗಳು ಅವರ ಹೆತ್ತವರನ್ನು ಹೆಚ್ಚಾಗಿ ಅಮೆರಿಕಕ್ಕೆ ಕರೆಸಿಕೊಳ್ಳುವುದು ಬಸುರಿ-ಬಾಣಂತಿ-ನವಜಾತ ಶಿಶು ಆರೈಕೆಗೆ. ಈ ಪುಸ್ತಕದಲ್ಲಿ ಅಂತಹ ಸೂಚನೆಗಳೇನೂ ಸಿಗಲಿಲ್ಲ ಎಂಬ ಕಾರಣಕ್ಕೆ ಮೊದಲ ನಿಟ್ಟುಸಿರು. ಅಷ್ಟರ ಮಟ್ಟಿಗಾದರೂ ಇದು ಅಪರೂಪದ ತಿರುಗಾಟ. ದೈನಂದಿನ ಸಾಧಾರಣ ಸಂಗತಿಗಳಲ್ಲೂ ಜೀವಂತಿಕೆ, ಲವಲವಿಕೆ ಕಾಣಬಲ್ಲ ಕಣ್ಣು ಇರುವ ಕಾರಣಕ್ಕೆ, ಅವರ 68 ದಿನಗಳ ಪ್ರವಾಸಕ್ಕೆ 79 ಲೇಖನಗಳ ಗುಚ್ಛ ಹೊರಬಂದಿದೆ. ಬಹುತೇಕ ಬರೆಹಗಳು ಡೈರಿ ದಾಖಲೆಗಳಂತೆ ಸಂಕ್ಷಿಪ್ತ ಮತ್ತು ಜೀವಂತ.

ಇಲ್ಲಿ ಪುಸ್ತಕದಲ್ಲಿ ಅವರ ತಿರುಗಾಟದ ಕಾಣ್ಕೆಗಳಿಗಿಂತ ನನಗೆ ಕುತೂಹಲಕರ ಅನ್ನಿಸಿದ್ದು, ಇಲ್ಲಿ ಸಿಗುವ ಅವರ ಕುಟುಂಬದ ಒಡನಾಟಗಳ ಮೆಟಾಡೇಟಾ. ಹೆಚ್ಚಿನಂಶ ಆ ಕಾರಣಕ್ಕಾಗಿಯೇ ಪುಸ್ತಕಕ್ಕೆ ಪ್ರತಿಕ್ರಿಯಿಸುತ್ತಿರುವ ಬಹುತೇಕ ಎಲ್ಲರಿಂದಲೂ ನಮ್ಮ ಮನೆಯಲ್ಲೂ, ನಮ್ಮೆದುರಲ್ಲೇ ನಡೆದಿರಬಹುದಾದ ಘಟನೆಗಳ ರೀತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಎಂಬ ಪ್ರತಿಕ್ರಿಯೆಗಳು ಬರುತ್ತಿವೆ. ಕನಿಷ್ಠ ಒಂದು ವಿದೇಶ ಪ್ರಯಾಣ ಮಾಡಿದವರೆಲ್ಲರೂ ಇಲ್ಲಿನ ಬರೆಹಗಳಿಗೆ ತಮ್ಮ ಬದುಕನ್ನು ಸಮೀಕರಿಸಿಕೊಂಡು, ಇದು ನಮ್ಮದೇ ಅನ್ನುವುದು ಸಾಧ್ಯ ಇದೆ. ಬರೆಯುವವರ ನಿಯಂತ್ರಣದಲ್ಲಿ ಕೂರದ ಮೆಟಾಡೇಟಾಗಳಿಗೆ ಮಿತಿ ಹಾಕಿಕೊಳ್ಳುವುದೇ ಇಂತಹ ಬರೆಹಗಳಿಗಿರುವ ದೊಡ್ಡ ಸವಾಲು.

ವಿರಾಮ ಕಾಲಕ್ಕೆ ಒಳ್ಳೆಯ ಓದು. ಜೊತೆಗೆ ಹೊಸದೊಂದು ಕನ್ನಡ ವರ್ಣಮಾಲೆ ಶೈಲಿಯ ಬಗ್ಗೆ ಕಲಿತುಕೊಂಡೆ. ಇದು ಕೆಲವರ್ಷಗಳ ಹಿಂದೆ ಕನ್ನಡ ಸೀರಿಯಲ್‌ಗಳಲ್ಲಿ ಕಾಣಿಸಿಕೊಳ್ಳುವ “ರೀಲ್ ಸಿಕ್ಕಿಹಾಕಿಕೊಂಡು ಸೀನ್ ಮರುಕಳಿಸುವ” ತಂತ್ರದಿಂದ ಪ್ರೇರಿತವೋ ಗೊತಾಗಲಿಲ್ಲ!

ಅ ಅ ಅ ಅ
ಆ ಆ ಆ ಆ
ಇ ಇ ಇ ಇ
.
.
.
ಜ್ಞ ಜ್ಞ ಜ್ಞ ಜ್ಞ

ಹೀಗೆ ಯಾವುದನ್ನೂ ಪುಸ್ತಕ ಬಿಟ್ಟಂತಿಲ್ಲ!!

ಒಂದು ಕಾಲದಲ್ಲಿ “Been there; Seen That” ಎಂಬುದೇ ಪ್ರವಾಸ ಕಥನ ಆಗಿದ್ದಲ್ಲಿಂದ, ಈಗ ಗ್ಲೋಬಲೈಸ್ಡ್ ಜಗತ್ತಿನಲ್ಲಿ ಪ್ರವಾಸವೆಂದರೆ ಅಲ್ಲಿನ ಹೊರಪದರದ ಜಾಗ್ರಫಿಗಿಂತಲೂ ಒಳಬದುಕಿನ ಇಣುಕು ನೋಟ ಎಂದು ಅರ್ಥಮಾಡಿಕೊಳ್ಳತೊಡಗಿರುವುದು ಒಳ್ಳೆಯ ಬೆಳವಣಿಗೆ. ಹೀಗಾದಾಗ ಮಾತ್ರ ಪ್ರತಿಯೊಬ್ಬರ ಪ್ರತೀ ಪ್ರಯಾಣವೂ ಹೊಸದೇ ಒಂದು ಪ್ರವಾಸಕಥನ ಆಗಲು ಸಾಧ್ಯ.

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...