ಬಸವ ಸಮಿತಿಯಿಂದ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆ

Date: 12-02-2024

Location: ಬೆಂಗಳೂರು


ಬೆಂಗಳೂರು: ಕೇಂದ್ರ ಬಸವ ಸಮಿತಿಯಿಂದ ಬಸವ ಜಯಂತಿ 2024 ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಪ್ರಬಂಧಕ್ಕೆ ಆಯ್ದುಕೊಳ್ಳಬಹುದಾದ ವಿಷಯಗಳು: ಅರಿವು-ಆಚಾರ-ಅನುಭಾವ, ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ, ವಚನ ಚಳುವಳಿ- ಸಾಂಸ್ಕೃತಿಕ ಮುಖಾಮುಖಿ, ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವ ಮತ್ತು ಶರಣರ ಪ್ರಜ್ಞಾಪ್ರಭುತ್ವ, ಭಾರತೀಯ ಭಕ್ತಿ ಪರಂಪರೆಯಲ್ಲಿ ಭಕ್ತಿಭಂಡಾರಿ ಬಸವಣ್ಣ ವಿಚಾರಗಳನ್ನು ಪ್ರಬಂಧಕ್ಕೆ ಆಯ್ದುಕೊಳ್ಳಬಹುದಾಗಿದೆ.

ಕವನದ ವಿಷಯ: ಬಸವಾದಿ ಶರಣರ ತತ್ವಗಳಿಗೆ ಸೀಮಿತವಾಗಿರತಕ್ಕದ್ದು(ಆಧುನಿಕ ವಚನಗಳಿಗೆ ಅವಕಾಶವಿಲ್ಲ), ಆಯ್ಕೆಯಾದ ಪ್ರಬುದ್ಧ ಪ್ರಬಂಧ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲಾ ರೂ. 25,000 ಹಾಗೂ 10,000 ಮತ್ತು ರೂ 5,000 ಹಾಗೂ ಆಯ್ಕೆಯಾದ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲಾ ರೂ. 10,000, ರೂ. 5,000 ಮತ್ತು ರೂ. 3,000 ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯ ವಿಶೇಷ ಸಮಾರಂಭದಲ್ಲಿ ನೀಡಿ ಗೌರವಿಲಸಲಾಗುವುದು.

ಪ್ರಬಂಧ ಮತ್ತು ಕವನ ಸ್ಪರ್ಧೆಯ ನಿಯಮಗಳು:

ತಮ್ಮ ಪ್ರಬಂಧಗಳು ಮತ್ತು ಕವನಗಳು ಸ್ವ-ರಚಿತವಾಗಿರಬೇಕು, ತಮ್ಮ ಪ್ರಬಂಧಗಳು ಹಾಗೂ ಕವನಗಳು ಯಾವುದೇ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಪ್ರಕಟಗೊಂಡಿರಬಾರದು, ಪ್ರಬಂಧಗಳು 2000 ಪದಗಳ ಮಿತಿಯಲ್ಲಿರಬೇಕು, ಪ್ರಬಂಧಗಳು ಮತ್ತು ಕವನಗಳು ನುಡಿ ತಂತ್ರಾಂಶದಲ್ಲಿ(ನುಡಿ 01, ಇ ಗಾತ್ರ 13, ಸಾಲಿನ ಅಂತರ 1.5) ತಪ್ಪಿಲ್ಲದೆ ಟೈಪಿಸಿ, ತಿದ್ದುಪಡಿ ಮಾಡಿ ವರ್ಡ್ ಫೈಲ್(MS-WORD) ರೂಪದಲ್ಲಿ ತಮ್ಮ ಸಂಪೂರ್ಣ ವಿಳಾಸದೊಂದಿಗೆ ಕಳುಹಿಸುವುದು, ಪ್ರಬಂಧಗಳು ಮತ್ತು ಕವನವನ್ನು competition@basavasamithi.org ಇ-ಮೇಲ್ ಕಳುಹಿಸುವುದು, ಆಯ್ಕೆಗೊಂಡ ಹಾಗೂ ಸೂಕ್ತ ಪ್ರಬಂಧಗಳನ್ನು ಹಾಗೂ ಕವನಗಳನ್ನು ಮುಂಬರುವ ಬಸವಪಥಗಳಲ್ಲಿ ಪ್ರಕಟಿಸಲಾಗುವುದು, ಕವನಗಳಿಗೆ ಯಾವುದೇ ಪದಗಳ ಮಿತಿಯಿರುವುದಿಲ್ಲ, ಕವನವು ಒಂದು ಪುಟಕ್ಕೆ ಮೀರದಂತಿರಬೇಕು, ಪ್ರಬಂಧ ಮತ್ತು ಕವನಗಳ ಮೌಲ್ಯಮಾಪನ ಬಸವ ಸಮಿತಿಯಿಂದ ರಚಿಸಿರುವ ಆಯ್ಕೆ ಸಮಿತಿಯದ್ದಾಗಿರುತ್ತದೆ, ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ, ತಮ್ಮ ಪ್ರಬಂಧ ಮತ್ತು ಕವನಗಳನ್ನು ದಿನಾಂಕ, 31.03.2024ರ ಒಳಗಾಗಿ ತಲುಪುವಂತೆ ಬಸವ ಸಮಿತಿಯ ವಿಳಾಸಕ್ಕೆ(ಇ-ಮೇಲ್ competition@basavasamithi.org)ಕಳುಹಿಸಬೇಕು, ನಿಗದಿತ ದಿನಾಂಕದ ನಂತರ ಬಂಧ ಪ್ರಬಂಧ ಮತ್ತು ಕವನಗಳನ್ನು ಯಾವುದೇ ಕಾರಣಕ್ಕೂ ಸ್ಫರ್ಧೆಗೆ ಪರಿಗಣಿಸಲಾಗುವುದಿಲ್ಲ.

ವಿಳಾಸ: ಬಸವ ಸಮಿತಿ, #1, ಬಸವ ಭವನ, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು-560001

 

MORE NEWS

ಕರ್ನಾಟಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರು ಮುಟ್ಟದೇ ಇರುವಂತಹ ಕ್ಷೇತ್ರವೇ ಇಲ್ಲ; ಮಹೇಶ ಜೋಶಿ

15-09-2024 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರದರ್...

‘ಗೆಳೆಯರಿರಲಿ ಕಡೆತನಕ, ಗೆಳೆಯರಿರಲಿ ಬಾಳಿನಲ್ಲಿ’ ಎನ್ನುವುದು ಲಕ್ಷ್ಮಣರಾವ್ ಅವರ ಸಿದ್ಧಾಂತ; ನರಹಳ್ಳಿ

31-12-1899 ಬೆಂಗಳೂರು

ಬೆಂಗಳೂರು: ಸಿವಿಜಿ ಪಬ್ಲಿಕೇಷನ್ಸ್, ಹರಿವು ಬುಕ್ಸ್ ಮತ್ತು ಸುಗಮ ಸಂಗೀತ ಪರಿಷತ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ...

ಯಲ್ಲಪ್ಪ ರೆಡ್ಡಿಯಂತಹ ಪರಿಸರ ಪ್ರೇಮಿಯನ್ನು ನಾನು ಕಂಡಿಲ್ಲ; ನಾಗೇಶ ಹೆಗಡೆ

14-09-2024 ಬೆಂಗಳೂರು

ಬೆಂಗಳೂರು: ಜನ ಪ್ರಕಾಶನ, ಬೆಂಗಳೂರು ವಿಜ್ಞಾನ ವೇದಿಕೆ ಮತ್ತು ಕೃಷಿ ಭಾರತ್ ಫೌಂಡೇಶನ್ ವತಿಯಿಂದ ಡಾ.ಅ.ನ. ಯಲ್ಲಪ್ಪ ರೆಡ್...