ಭಾಷಾ ವಿಜ್ಞಾನಿ ಬಿ. ಬಿ. ರಾಜಪುರೋಹಿತ ಇನ್ನಿಲ್ಲ

Date: 24-06-2020

Location: ಬೆಂಗಳೂರು


ಭಾಷಾ ವಿಜ್ಞಾನಿ ಡಾ. ಬಿ.ಬಿ. ರಾಜಪುರೋಹಿತ (85) ನಿಧನರಾಗಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ಮೂಲದ ಅವರು ಕನ್ನಡ ಭಾಷೆ ಮತ್ತು ವ್ಯಾಕರಣದಲ್ಲಿ ಅಪಾರ ಪಾಂಡಿತ್ಯವಿದ್ದು, ಭಾರತೀಯ ಭಾಷಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.

ಕನ್ನಡ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ; ವಚನ ವ್ಯಾಕರಣ (ವ್ಯಾಕರಣ), ಬೇಂದ್ರೆ ಕಾವ್ಯ ಭಾಷೆ; ಕನ್ನಡವೆಲ್ಲ ಒಂದೇ, ಭಾಷೆ ಮತ್ತು ಅರ್ಥಗಳ ಗುಟ್ಟು; ಧ್ವನಿ ವಿಜ್ಞಾನ; ವ್ಯಾ-ಸಾ-ನು-ಭಾವ; ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ; ವಚನ ಸಾಹಿತ್ಯದ ಭಾಷಾ ಶೈಲಿ (ಭಾಷಾ ವಿಜ್ಞಾನ). ಏಳು ಬೀಳಿನ ಕಡಲು; ಗಂಗಾವತರಣ; ಬೇಂದ್ರೆ ಕಾವ್ಯ ನಿಘಂಟು ಅವರ ಪ್ರಮುಖ ಕೃತಿಗಳು.  ‘A Grammar of Vachana Literature’ ಮಹಾಪ್ರಬಂಧಕ್ಕೆ ಕರ್ನಾಟಕ ವಿ.ವಿ.ಯಿಂದ ಪಿಎಚ್.ಡಿ. ಪಡೆದಿದ್ದರು. 

MORE NEWS

ಬರಹಗಾರನ ಸಾಹಿತ್ಯ ನೈತಿಕತೆ ಹಾಗೂ ತ...

03-10-2021 ಬೆಂಗಳೂರು

'ಸಾಹಿತ್ಯ ಯಾರೋ ಹೇಳಿ ಬರೆಸುವುದಲ್ಲ, ನೈತಿಕತೆ ಮತ್ತು ತಾತ್ವಿಕತೆಯ ಅಂಗವಾಗಿ ಲೇಖಕನ ಒಳಗಿನಿಂದ ಮೂಡಬೇಕು’ ಎ...

‘ಲ್ಯಾಂಡ್, ಲಸ್ಟ್, ಅಂಡ್ ಆಡಿಯೋ ಟೇ...

02-10-2021 ಬೆಂಗಳೂರು

ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರು ಡಿ.ಕೆ ರವಿ ಅವರ ಸಾವಿನ ಕುರಿತಾಗಿ ಲ್ಯಾಂಡ್, ಲಸ್ಟ್, ಅಂಡ್ ಆಡಿಯೋ ಟೇಪ್ ಎಂಬ ಇಂಗ್ಲ...

ಸಾಯಿಸುತೆ, ರೇಖಾ ಕಾಖಂಡಕಿಗೆ ವರ್ಷದ...

29-09-2021 ಬೆಂಗಳೂರು

ಕರ್ನಾಟಕ ಲೇಖಕಿಯರ ಸಂಘದ 2020 ಮತ್ತು 2021ನೇ ಸಾಲಿನ ವರ್ಷ ಲೇಖಕಿ-ಅಂಕಿತ ಪುಸ್ತಕ ಪುರಸ್ಕಾರಕ್ಕೆ ಲೇಖಕಿ ಸಾಯಿಸುತೆ ಮತ್...