ಎಸ್ಥರ್ ದುಫ್ಲೋ ಅವರ ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿತ ಐದು ಕೃತಿಗಳ ಲೋಕಾರ್ಪಣೆ

Date: 09-07-2024

Location: ಬೆಂಗಳೂರು


ಬೆಂಗಳೂರು: ಪ್ರಥಮ್ ಬುಕ್ಸ್ ವತಿಯಿಂದ ಭಾರತ ಫ್ರೆಂಚ್ ಇನ್ ಸ್ಟಿಟ್ಯೂಟ್, ಫ್ರೆಂಚ್ ರಾಯಭಾರಿ ಕಚೇರಿ, ಅಲಯನ್ಸ್ ಫ್ರಾಂಕೈಸ್, ದಿ ಲಿವರ್ ಫೌಂಡೇಶನ್ ಮತ್ತು ಜಗ್ಗರ್ ನಾಟ್ ಪ್ರಕಾಶನದ ಸಹಯೋಗದಲ್ಲಿ ಕನ್ನಡದಲ್ಲಿ ನೊಬೆಲ್ ಪುರಸ್ಕೃತ ಬರಹಗಾರ್ತಿ ಎಸ್ಥರ್ ದುಫ್ಲೋ ಅವರ ಶಾಯೆನ್ ಒಲೀವ್ಹಿಯೆ ಚಿತ್ರಗಳನ್ನೊಳಗೊಂಡ ಓ.ಎಲ್. ನಾಗಭೂಷಣ ಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿರುವ ‘ನೆಸೊ ಮತ್ತು ನಾಜೆ’ ‘ಊಲಾ’, ‘ನೀಲೂ’, ‘ಬಿಬಿರ್’, ‘ಅಫಿಯಾ’ ಕೃತಿಗಳ ಲೋಕಾರ್ಪಣಾ ಸಮಾರಂಭವು 2024 ಜು. 10 ಬುಧವಾರದಂದು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆಯಲಿದೆ.

ಕೃತಿಗಳ ಕುರಿತು ಎಸ್ಥರ್ ದುಫ್ಲೋ, "ಈ ಸರಣಿಯು ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳುತ್ತಿರುವುದರಿಂದ ಇಂಗ್ಲಿಷ್ ಹೊರತಾದ ಇತರೆ ಭಾಷೆಯ ಹಲವು ಓದುಗರಿಗೆ ತಲುಪಲಿದ್ದೇವೆ ಎಂಬುದು ಸಂತಸದ ವಿಷಯ. ನನ್ನ ಪ್ರಕಾರ, ಕತೆಗಳನ್ನು ಮಕ್ಕಳು ತಾವಾಗಿಯೇ ಓದಲಿ ಅಥವಾ ದೊಡ್ಡವರು ಯಾರಾದರೂ ಓದಿ ಹೇಳಿದರೂ ಮಾತೃಭಾಷೆಯಲ್ಲಿ ಓದುವುದರಿಂದ ಪುಸ್ತಕಗಳು, ಪಾತ್ರಗಳ ಜೊತೆ ನೈಜ ಕಲ್ಪನೆ ಸಾಧ್ಯವಾಗುತ್ತದೆ. ಸಂಕೀರ್ಣವಾದ ಕತೆಗಳು ಮತ್ತು ಉಪಾಯಗಳ ಅರ್ಥೈಸುವಿಕೆ ಈ ಮೂಲಕ ಮತ್ತಷ್ಟು ಸರಳವೂ ಆಗುತ್ತದೆ," ಎಂದು ತಿಳಿಸಿದ್ದಾರೆ.

 

MORE NEWS

ವೈ.ಕಂ ಪ್ರಶಸ್ತಿಗೆ ಹಿರಿಯ ಸಾಹಿತಿ ದೇವನೂರ ಅವರು ಆಯ್ಕೆ

10-12-2024 ಬೆಂಗಳೂರು

ಚೆನ್ನೈ: ದಮನಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ವ್ಯಕ್ತಿಗಳಿಗೆ ತಮಿಳುನಾಡು ಸರ್ಕಾರ ನೀಡುವ ವೈಕಂ ಪ್ರಶಸ್ತಿಗೆ ಹಿರಿಯ...

ಜಾನಪದ ಕಲೆ ನಮ್ಮ‌ ಸಂಸ್ಕೃತಿಯ ಮೂಲ ತಾಯಿ ಬೇರು; ಹಿ.ಚಿ. ಬೋರಲಿಂಗಯ್ಯ

10-12-2024 ಬೆಂಗಳೂರು

ಬೆಂಗಳೂರು: `ಜಾನಪದ ಕಲೆ ನಮ್ಮ‌ ಸಂಸ್ಕೃತಿಯ ಮೂಲ ತಾಯಿ ಬೇರು,' ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾ...

ಕಂಬಾರರು ಹೆಜ್ಜೆ ಹಿಟ್ಟಿದ್ದು ಶೋಷಿತರ ಧ್ವನಿಯಾಗಿ: ಬಸವರಾಜ್ ಸಾದರ್

09-12-2024 ಬೆಂಗಳೂರು

ಬೆಂಗಳೂರು: ಸಾಹಿತ್ಯ ಅಕಾಡೆಮಿ ವತಿಯಿಂದ ಫೆಲೋಶಿಪ್ ಪ್ರಸ್ತುತಿ ವಿದ್ವಾಂಸ, ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಹಾಗೂ ಅವ...