Date: 18-09-2023
Location: ಬೆಂಗಳೂರು
ಹೂವಿನಹಡಗಲಿ: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಹರಪ್ಪನಹಳ್ಳಿ ಹಾಗೂ ಕನಾ೯ಟಕ ರಾಜ್ಯ ಬರಹಗಾರರ ಸಂಘ, ತಾಲ್ಲೂಕು ಘಟಕ, ಹರಪ್ಪನಹಳ್ಳಿ ಅವರ ಸಹಯೋಗದಲ್ಲಿ ರಾಜ್ಯಮಟ್ಟದ ನೂರು ಕೃತಿಗಳ ಲೋಕಾಪ೯ಣೆ ಕಾಯ೯ಕ್ರಮವು ದಿನಾಂಕ 2023 ಸೆಪ್ಟೆಂಬರ್ 24ನೇ ಭಾನುವಾರದಂದು ಚಂದ್ರಶೇಖರ ಸ್ವಾಮಿ ಸಭಾಭವನ, ತಗ್ಗಿನ ಮಠ, ಹರಪ್ಪನಹಳ್ಳಿಯಲ್ಲಿ ನಡೆಯಲಿದೆ.
ಈ ಕಾಯ೯ಕ್ರಮದಲ್ಲಿ ಷ ಬ್ರವರಸದ್ಯೋಜಾತ ಶಿವಾಚಾರ್ಯಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿಯವರು ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಜನಪ್ರಿಯ ಶಾಸಕರಾದ ಎಂ. ಪಿ. ಲತಾ ಮಲ್ಲಿಕಾರ್ಜುನ, ವಿಧಾನ ಸಭಾ ಕ್ಷೇತ್ರ, ಹರಪ್ಪನಹಳ್ಳಿ ಅವರು ಕಾಯ೯ಕ್ರಮವನ್ನು ಉದ್ಘಾಟಿಸುವರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕೆ. ಉಚ್ಚೆಂಗೆಪ್ಪ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಹರಪ್ಪನಹಳ್ಳಿ ವಹಿಸಲಿದ್ದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 125 ಬರಹಗಾರರು 140 ಕೃತಿಗಳೊಂದಿಗೆ ಹಾಜರಾಗಲ್ಲಿದ್ದು ರಾಜ್ಯಮಟ್ಟದ ಕವಿಗೋಷ್ಠಿಗೆ ರಾಜ್ಯದ ವಿವಿದೆಡೆಯಿಂದ 40 ಜನ ಕವಿಗಳು ಹಾಜರಾಗಲ್ಲಿದ್ದಾರೆ ಎಂದು ರಾಜ್ಯಾಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ವೀರಲೋಕ ಸಂಸ್ಥೆಯು ಪುಸ್ತಕ ಅವಲೋಕನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವೀರಲೋಕದಿಂದ ಪ್ರಕಟವಾಗಿರುವ ಪುಸ್ತಕಗ...
2023ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನದ...
ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ಅಕ್ಟೋಬರ್ 15ರಂದು ರಾಜ್ಯ ಮಟ್ಟದ 'ದಸರಾ ಕವಿಗೋಷ್ಠಿ'ಯನ್ನು ಮೈಸ...
©2023 Book Brahma Private Limited.