‘ಇದು ತಮಾಷೆಯಲ್ಲವೋ ಅಣ್ಣ' ನಾಟಕ ನಿಜಕ್ಕೂ ಗಂಭೀರ


'ಪುರೋಹಿತಗಾಮಿ, ಮೌಡ್ಯಾಡಳಿತ, ಹಕ್ಕುವ೦ಚಿತ್ಯ ಬದುಕುಗಳನ್ನು ಸಹಜವಾಗಿ ಕಣ್ಣಿಗೆ ಕಾಣುವಂತೆ ನಾಗರಾಜ ಅವರು ನಾಟಕದ ರೂಪಕ್ಕೆ ಭಟ್ಟಿ ಇಳಿಸಿದ್ದಾರೆ' ಎನ್ನುತ್ತಾರೆ ರವೀಂದ್ರ ಸಿಂಗ್, ಕೋಲಾರ ಅವರು ಜೆ.ಜಿ.ನಾಗರಾಜ ಅವರ 'ಇದು ತಮಾಷೆಯಲ್ಲವೋ ಅಣ್ಣ' ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

'ಇದು ತಮಾಷೆಯಲ್ಲವೋ ಅಣ್ಣ' ಕೃತಿಗೆ ಇದೊಂದು ಸಂವಿಧಾನ ಕುರಿತಾದ ನಾಟಕವೆಂದು ಅಡಿ ಬರಹವನ್ನು ಕಟ್ಟಿಕೊಂಡ ಲೇಖಕರಾದ ಜೆ.ಜಿ.ನಾಗರಾಜ ಅವರು ಒಂದು ವಿಭಿನ್ನವಾದ ನಾಟಕವನ್ನು ಬರೆದು ಪ್ರಕಟಿಸಿದ್ದಾರೆ. ಗುಲಾಮಗಿರಿ, ಪಾಳೆಗಾರಿಕೆ, ಬಿಟೀಷರ ಆಳ್ವಿಕೆ, ಶಿಕ್ಷಣದ ಮಹತ್ವ, ಸ್ತ್ರೀಯರ ಹಕ್ಕು, ದೇವಾಲಯ ಪ್ರವೇಶ ಮತ್ತು ಸಂವಿಧಾನ-ಸಮಾಜ ಎಂಬ ಎಳು ದೃಶ್ಯಗಳನ್ನೊಳಗೊಂಡ ಮಟ್ಟ ನಾಟಕ ಇದಾಗಿದೆ.

ಪ್ರಸ್ತುತ ಸಮಾಜದಲ್ಲಿ ಸಾಕಷ್ಟು ಮಂದಿ ವಿದ್ಯಾವಂತರು, ಬುದ್ಧಿವಂತರಿದ್ದರೂ ಹಕ್ಕು ನಿಯಮಗಳನ್ನು ತಿಳಿಯದೆ ಬಹಳಷ್ಟು ಜನ ತಿಳಿಗೇಡಿಗಳಾಗಿದ್ದಾರೆ. ಇದರಿಂದ ಕೆಲವು ಅಶಾಂತಿಗಳೆದ್ದು ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎನ್ನಬಹುದು. ಇದರ ಹಿನ್ನಲೆಯಲ್ಲಿ ಈ ನಾಟಕ ಒಂದು ಕೈಪಿಡಿಯಾಗಿ ನಮ್ಮ ಜೀಬನಕ್ಕೆ ಸಹಕಾರಿಯಾಗಲಿದೆ ಎನ್ನಬಹುದು. ಮಕ್ಕಳು, ಹಿರಿಯರು ಅಂತ ಬೇಧವಿಲ್ಲದೆ ಈ ನಾಟಕವನ್ನು ಎಲ್ಲ ವಯೋಮಾನದವರು ಓದಿ ಅರ್ಥೈಸಿಕೊಂಡರೆ ಅವರಿಗೆ ಸಾಕಷ್ಟು ಉಪಯೋಗವಾಗಲಿದೆ.

ಪುರೋಹಿತಗಾಮಿ, ಮೌಡ್ಯಾಡಳಿತ, ಹಕ್ಕುವ೦ಚಿತ್ಯ ಬದುಕುಗಳನ್ನು ಸಹಜವಾಗಿ ಕಣ್ಣಿಗೆ ಕಾಣುವಂತೆ ನಾಗರಾಜ ಅವರು ನಾಟಕದ ರೂಪಕ್ಕೆ ಭಟ್ಟಿ ಇಳಿಸಿದ್ದಾರೆ. ಒಂದೊಂದು ದೃಶ್ಯವನ್ನು ಸಂಕ್ಷಿಪ್ತವಾಗಿ ಎಷ್ಟು ಬೇಕೋ ಅಷ್ಟೇ ಮಾರ್ಮಿಕವಾಗಿ ಮಕ್ಕಳಿಗೆ ಮನಮುಟ್ಟುವಂತೆ ಭಾಷಾ ನೈಪುಣ್ಯವನ್ನು ಸಾಧಿಸಿ ಬರೆದಿದ್ದಾರೆ. ಗಂಡಾಳು, ಹೆಣ್ಣಾಳು ಎಂದು ಮನುಷ್ಯರನ್ನು ಪಶುಗಳಂತೆ ಮಾರುವ ಮತ್ತು ಅವರನ್ನು ಕೊಳ್ಳುವ ಶ್ರೀಮಂತರು ಆಳುಗಳನ್ನು ತಮ್ಮ ಸ್ವಾಧಿಕಾರದಿಂದ ನಡೆಸಿಕೊಳ್ಳುವ ಪರಿಯನ್ನು ಕೆಲವೇ ಶಬ್ದಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಎಂಗಟೇಗೌಡ ಬೆಳೆದ ಕುಂಬಳಕಾಯಿಗೆ ಪುರೋಹಿತನಾದವನು ಅದರ ಮೇಲೆ ಹಕ್ಕು ಅಧಿಕಾರ ಚಲಾಯಿಸುವ ಊರ ಪಂಚಾಯಿತಿಯ ಕಿರು ಸಂಭಾಷಣೆ ಇಡೀ ನಾಟಕದ ಜೀವಾಳವಾಗಿ ತೋರುತ್ತದೆ. ಸಣ್ಣಪುಟ್ಟ ಸಂಗತಿಗಳೇ ಇಂದು ಬೃಹತ್ ಮಟ್ಟದಲ್ಲಿ ಸಮಸ್ಯೆಗಳಾಗಿ ಪರಿಣಮಿಸಿರುವುದನ್ನು ಇಲ್ಲಿ ಸಾಕ್ಷೀಕರಿಸಿದ್ದಾರೆ. ಆದಿಮ ಪ್ರಕಾಶನದಿಂದ ಹೊರ ಬಂದಿರುವ ಈ ಕೃತಿ ಕೇವಲ ನಲವತ್ತೈದು. ರುಪಾಯಿಗೆ ಎಲ್ಲರಿಗೂ ಎಟುಕುವಂತಿದೆ. ಈಗಾಗಲೇ ಅನೇಕ ಕಡೆ ಈ ನಾಟಕ ಪ್ರದರ್ಶನ ಕಂಡು ಯಶಸ್ವಿಯಾಗಿದೆ.

-ರವೀಂದ್ರ ಸಿಂಗ್ ಕೋಲಾರ
ಪಿ.ಸಿ.ಬಡಾವಣೆ,
ಕೋಲಾರ-563101 9731573462

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...