ಕೆ.ಎಸ್‌ ಸೋಮಶೇಖರ ಅವರಿಗೆ ʻಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ

Date: 26-05-2023

Location: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು


ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಪ್ರಗತಿಪರ ರೈತರಿಗೆ ನೀಡುವ ʻಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಪ್ರಕಟಿಸಿದೆ. 2022ನೆಯ ಸಾಲಿನ ಪ್ರಸ್ತುತ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ಪ್ರಗತಿಪರ ಕೃಷಿಕ ಕೆ. ಎಸ್‌ ಸೋಮಶೇಖರ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹಿರಿಯ ಸಮಾಜ ಸೇವಕರಾದ  ಡಾ. ಚಿಕ್ಕಕೊಮಾರಿಗೌಡ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ದತ್ತಿನಿಧಿ ಸ್ಥಾಪಿಸಿದ್ದಾರೆ.  ಉತ್ತಮ ಸಾಧನೆಮಾಡಿದ ಪ್ರಗತಿಪರ ರೈತರಿಗೆ, ಕರ್ನಾಟಕ ಪಂಚಾಯತ್‌ ರಾಜ್‌ ಪರಿಷತ್ತಿನಲ್ಲಿ ಪಂಚಾಯತ್‌ ರಾಜ್ಯ ವ್ಯವಸ್ಥೆ ಬಗ್ಗೆ ಉತ್ತಮ ಕೆಲಸ ಮಾಡಿರುವ ಸಂಸ್ಥೆಗಳಿಗೆ, ಉತ್ತಮ ಜನಪ್ರತಿನಿಧಿಗಳಿಗೆ ಮತ್ತು ತಜ್ಞರುಗಳನ್ನು ಗುರುತಿಸಿ ವರ್ಷಕ್ಕೊಬ್ಬರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಯು 10,000( ಹತ್ತು ಸಾವಿರ)ರೂ. ನಗದು, ಸ್ಮರಣಿಕೆ, ಹಾರ ಹಾಗೂ ಫಲತಾಂಬೂಲ ಒಳಗೊಂಡಿರುತ್ತದೆ. 

ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ಮಾತನಾಡಿ ಪರಿಷತ್ತು ಸಾಧಕರಿಗೆ ಹುಡುಕಿಕೊಂಡು ಹೋಗಿ ಪ್ರಶಸ್ತಿ ನೀಡುತ್ತದೆ. ನಮ್ಮ ನಾಡು ಋಷಿ ಸಂಸ್ಕೃತಿಯನ್ನು ಹೊಂದಿದೆ. ಈ ಸಂಸ್ಕೃತಿ ನಿಂತಿದ್ದೇ ಕೃಷಿ ಸಂಸ್ಕೃತಿಯ ಆಧಾರದ ಮೇಲೆ ಆದ್ದರಿಂದ ರೈತರು ದೇವರಿಗೆ ಸರಿಸಮನಾರು. ಈ ಮಾತನ್ನು ಗುರು ಗೋವಿಂದಭಟ್ಟರು, ಶಿಶುನಾಳ ಶರೀಫರು ಪುಷ್ಟೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಗತಿಪರ ರೈತರಿಗೆ ಕೊಡುವ ಈ ಪ್ರಶಸ್ತಿಯು ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಪ್ರಶಸ್ತಿಗಳ ಪೈಕಿ ಇದು ಒಂದಾಗಿದೆ ಎಂದು ಹೇಳಿದ್ದಾರೆ.     

ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿ ದಾನಿಗಳಾದ ಡಾ. ಚಿಕ್ಕಕೊಮಾರಿಗೌಡ, ಶ್ರೀ ಸಿ. ಕೆ. ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ, ನೇ. ಭ. ರಾಮಲಿಂಗ ಶೆಟ್ಟಿ,  ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು. 

 

MORE NEWS

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...