ಕಾಡುಗಳ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿದ್ದವರು ‘ಕಾಡು ಪ್ರತಿಭೆ ಮಾರಪ್ಪ’


'ಕಾಡು ಪ್ರತಿಭೆ ಮಾರಪ್ಪ' ಇವರ ಬಗ್ಗೆ ಅವರ ಕಾಡಿನ ನಿರ್ಮಾಣದ ಕ್ರಾಂತಿಯ ಬಗ್ಗೆ ಸಾಕಷ್ಟು ಮಾಹಿತಿ ಸಿಗದಿದ್ದರೂ ಪುರುಷೋತ್ತಮ ರಾವ್ ಇವರು ಕಾಡು ಪ್ರತಿಭೆ ಮಾರಪ್ಪರ ಕುರಿತು ಅವರ ಸಹೋದ್ಯೋಗಿಗಳು ಅವರ ಗೆಳೆಯರು ನೆಂಟರಿಷ್ಟರಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ಕಾಡಿನ ರಕ್ಷಣೆಗೆ ಮಾರಪ್ಪನವರ ಅಪಾರ ಕೊಡುಗೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎನ್ನುತ್ತಾರೆ ಲೇಖಕ ಉದಯಕುಮಾರ ಹಬ್ಬು. ಅವರು ಪುರುಷೋತ್ತಮ ರಾವ್ ಅವರು ಸಂಪಾದಿಸಿರುವ ಕಾಡು ಪ್ರತಿಭೆ ಮಾರಪ್ಪ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಈ ಪ್ರಪಂಚದಲ್ಲಿ ದುಷ್ಕೃತ್ಯಗಳಿಗೆ ಸಿಗುವ ಪ್ರಚಾರ, ಬೆಂಬಲ ಒಳ್ಳೆಯ ಕೆಲಸಗಳಿಗೆ ಸಿಗುವುದಿಲ್ಲ. ಇದು ಜಗತ್ತಿನ ಅಲಿಖಿತ ನಿಯಮ. ಉದಾಹರಣೆಗೆ ಹಸ್ತಿದಂತಗಳ ಚೋರ, ಕಾಡನ್ನು ಲೂಟಿ ಮಾಡಿ ಪೊಲೀಸ್ ಅಧಿಕಾರಿಗಳನ್ನು ಜನಸಾಮಾನ್ಯರನ್ನು ಕೊಂದ, ಡಾ ರಾಜಕುಮಾರರನ್ನು ಅಪಹರಿಸಿ ಬಂಧನದಲ್ಲಿಟ್ಟ ಖೂಳ ವೀರಪ್ಪನ್ ಬಗ್ಗೆ ಪುಸ್ತಕಗಳನ್ನು ಬರೆಯಲಾಗುತ್ತದೆ. ಸಿನೇಮಾಗಳನ್ನು ಭಾರತದ ಎಲ್ಲ ಭಾಷೆಗಳಲ್ಲಿ ಮಾಡಲಾಗುತ್ತದೆ. ಆದರೆ ಚಿಪ್ಮೊ ಚಳವಳಿಯ ಸುಂದರತಾಮ್ ಬಹುಗುಣ ಅಪ್ಪಿಕೊ ಚಳವಳಿಯ ನಾಯಕರು ಎಲೆ ಮರೆಯ ಕಾಯಿಯಂತೆ ಮರೆಯಲ್ಲೆ ಇರುತ್ತಾರೆ‌‌. ಜನರ ಮನಸ್ಸುಗಳಿಂದ ಮರೆಯಾಗುತ್ತಾರೆ.

ಅಂತಹ ಒಬ್ಬ ಅರಣ್ಯ ಸಂರಕ್ಷಣಾಧಿಕಾರಿ ಕೋಲಾರಿನಂತಹ ಬರಪೀಡಿತ ನಾಡನ್ನು ಜಲಾಶಯವನ್ನು ಕೆರೆಗಳಿಂದ ತುಂಬಿದ ನಾಡನ್ನಾಗಿ ಹಸಿರು ನಳನಳಸುವಂತೆ ಮಾಡಿದ "ಕಾಡು ಪ್ರತಿಭೆ ಮಾರಪ್ಪ" ಇವರ ಬಗ್ಗೆ ಅವರ ಕಾಡಿನ ನಿರ್ಮಾಣದ ಕ್ರಾಂತಿಯ ಬಗ್ಗೆ ಸಾಕಷ್ಟು ಮಾಹಿತಿ ಸಿಗದಿದ್ದರೂ ಪುರುಷೋತ್ತಮ ರಾವ್ ಇವರು ಕಾಡು ಪ್ರತಿಭೆ ಮಾರಪ್ಪರ ಕುರಿತು ಅವರ ಸಹೋದ್ಯೋಗಿಗಳು ಅವರ ಗೆಳೆಯರು ನೆಂಟರಿಷ್ಟರಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ಕಾಡಿನ ರಕ್ಷಣೆಗೆ ಮಾರಪ್ಪನವರ ಅಪಾರ ಕೊಡುಗೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಅರಣ್ಯದ ಉತ್ಪತ್ತಿಗಳು ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಅರಣ್ಯಗಳನ್ನು ಕಾಡು ಉಪವನಗಳನ್ನು ನಿರ್ಮಿಸಿದರು. ಆಯಾ ಭೌಗೋಳಿಕ ಪ್ರದೇಶಗಳ ಹವಾಮಾನಕ್ಕೊಗ್ಗುವ ಗಿಡಮರಗಳನಗನ್ನು ನೆಟ್ಟರು‌ ಇವರು ಮಾಡಿದ ಕ್ರಾಂತಿ ಎಂದರೆ ಹುಣಿಸೆ ಬೀಜಗಳ ಬಿತ್ತನೆ‌ ಹೋದಲೆಲ್ಲ ತಮ್ಮ ಕಿಸೆಗಳಲ್ಲಿ ಚೀಲಗಳಲ್ಲಿ ಹುಣಿಸೆ ಬೀಜಗಳನ್ನು ತೆಗೆದುಕೊಂಡು ಹೋಗಿ ಆ ಪ್ರದೇಶದಲ್ಲಿ ಬೆರಳಿನಿಂದ ಹೊಂಡ ತೋಡಿ ಬೀಜಗಳನ್ನು ಬಿತ್ತುತ್ತಿದ್ದರು‌. ಇದರಿಂದ ಕೋಲಾರಿನ ಬಡ ಜನರ ಆರ್ಥಿಕ ಅಭಿವೃದ್ಧಿಯಾಯಿತು. ಅವರು ಈ ಕೆಲಸ ಮಾಡುವಾಗ ತಮ್ಮ ಕುಟುಂಬದಿಂದ‌‌ ದೂರವಿರಬೇಕಿತ್ತು‌. ತಮ್ಮ ಸೇವಾಧಿಯಲ್ಲಿ ದಿನದ 24 ಗಂಟೆ ಎನ್ನುವಂತೆ ಹುಣಿಸೆ ಬೀಜ‌ಗಳನ್ನು ಬಿತ್ತುತ್ತಿದ್ದರು. ಬೆಟ್ಟದಲ್ಲಿ ಕಾಡನ್ನು ಬೆಳೆಸಿ ನೀರಿನ ಆಶ್ರಯವನ್ನು ಹೆಚ್ಚಿಸಿದರು‌

ಅವರ ಆಸ್ಟಿನ್ ಕಾರು ಸ್ವಂತದ್ದಾದರೂ ಅದನ್ನು ಅರಣ್ಯ ಕಚೇರಿಯ ಕೆಲಸಕ್ಕೆ ಬೀಜ ಬಿತ್ತನೆಗೆ ಬಳಸಿದ್ದೆ ಹೆಚ್ಚು. ಅಂದು ಮಾರಪ್ಪನವರು ಮಾಡಿದ ಕೆಲಸ ಇಂದು ಫಲ ನೀಡುತ್ತಿದೆ.

ಬೆಟ್ಟಗಳಲ್ಲಿ ಶ್ರೀಗಂಧದ ಗಿಡಗಳನ್ನು ನೆಟ್ಟರು. ಹುಣಿಸೆಯು ಬಡವರ ಕಾಮಧೇನುವಾಯಿತು. ಹೋದಲೆಲ್ಲ ಕೆರೆ ಬಾವಿಗಳನ್ನು ನಿರ್ಮಿಸಿದರು. ಅವರನ್ನು ಹುಣಿಸೆ ಮಾರಪ್ಪ ಎಂದೆ‌‌ ಹೆಸರಿಸಲಾಯಿತು. ರೈತರಿಗೆ ಜನಸಾಮಾನ್ಯರಿಗೆ ಉಪದ್ರವ ಕೊಡುವ ಕಾಡಾನೆಗಳನ್ನು ಊರಿಂದ ಹಿಮ್ಮೆಟ್ಟಿಸುವಲ್ಲಿ ಜನರ ಬೆಂಬಲವನ್ನು ಪಡೆದು ಯಶಸ್ವಿಯಾದರು..ಆನೆಗಳನ್ನು ಅಟ್ಟುವಾಗ ಯಾವುದೆ ಆನೆಯು ಸಾವಿಗೀಡಾಗದಂತೆ ಜನರಿಗೆ ಎಚ್ಚರಿಕೆ ನೀಡಿದರು‌.

ಬೇಟೆ ಇವರ ಹವ್ಯಾಸಗಳಲ್ಲಿ ಒಂದು‌‌. ಮಹಾಕವಿ ಕುವೆಂಪು ಮಾರಪ್ಪನವರ ಬಂಧುಗಳು. ಕುವೆಂಪು ಕೂಡ ಇವರ ಜೊತೆಗೆ ಬೇಟೆಗೆ ಬಂದಿದ್ದು ಹುಲಿಯೊಂದು ಇವರ ವಾಹನದ ಬಳಿ ಬಂದು ಇಡೀ ಕಾಡೇ ಪ್ರತಿಧ್ವನಿಸುವಂತೆ ಘರ್ಜಿಸಿದಾಗ ಚಾಲಕ ಕಂಗಾಲು..ಮರದ ಮೇಲೆ ಕುಳಿತಿದ್ದ ಅಸಿಸ್ಟೆಂಟ್ ಕಮೀಚನರ್ ಗೆ ಜಲಬಾಧೆ. ಈ ಪ್ರಸಂಗವನ್ನು ಸ್ವಾರಸ್ಯಮಯವಾಗಿ ಚಿತ್ರಿಸಲಾಗಿದೆ‌‌. ಮಾರಪ್ಪ ಹುಲಿಗೆ ಗುರಿ ಇಟ್ಟರು. ಆದರೆ ಹುಲಿಗೆ ಗುಂಡಿನ ಏಟು ಹಣೆಗೆ ಬಿದ್ದದ್ದು ದೇವಂಗಿ ರತ್ನಾಕರ ಗೌಡರ ಗುಂಡೇಟಿನಿಂದ.

ಕಾಡಾನೆಗಳನ್ನು ಓಡಿಸಿದ ಸಾಜಸವಂತೂ ರೋಮಸಂಚಕ. "ಮಾರಪ್ಪನವರು ತಾವು ಕೆಲಸ ಮಾಡಿದ ಸ್ಥಳಗಳೆಲ್ಲಾ ಗಮನಾರ್ಹ ಸಾಧನೆ ತೋರಿದ್ದಾರೆ‌ ತುಮಕೂರು, ಕೋಲಾರ, ಬೆಂಗಳೂರು ಜಿಲ್ಲೆಗಳಲ್ಲಿ ಹುಣಸೆ, ಶ್ರೀಗಂಧ, ನೀಲಗಿರಿ ಬೆಳವಣಿಗೆಗೆ ಒತ್ತು ನೀಡಿದ್ದರೆ, ದಕ್ಷಿಣ ಕನ್ನಡದಲ್ಲಿ ಗೇರು ಅಭಿವೃದ್ಧಿಗೆ ಶ್ರಮಿಸಿದ್ದಾರೆ‌. ಆಗುಂಬೆಯ ದಟ್ಟ ಕಾಡುಗಳಲ್ಲಿ ಬಿದಿರನ್ನು ತೆಗೆಸಿ ಬಡಮೇದಾರರಿಗೆ ಸುಲಭ ಬೆಲೆಯಲ್ಲಿ ಒದಗಿಸಿ ಅವರ ಜೀವನೋಪಾಯಕ್ಕೆ ಒತ್ತಾಸೆಯಾದರು. ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಕಾರಣರಾದರು. ಶಿವಮೊಗ್ಗ ಅರಣ್ಯ ಪ್ರದೇಶಗಳಲ್ಲಿ ತೇಗದ ನಡುತೋಪುಗಳನ್ನು ‌ನಿರ್ಮಿಸಲೂ ಅವರ ಶ್ರಮ ಸಾಕಷ್ಟಿದೆ‌.‌ ಒಣಗಿ ನಿಂತ ಮರಗಳನ್ನು ತೆಗೆಸಿ ಸಾರ್ವಜನಿಕ ಬಳಕೆಗೆ ದಕ್ಕುವಂತೆ ಮಾಡಿದ ಹೆಗ್ಗಳಿಕೆಯೂ ಇದೆ.

ಮಲೆನಾಡಿನ ಹುಲ್ಲುಗಾವಲುಗಳನ್ನು ನೈಸರ್ಗಿಕ ಸ್ಪಂಜುಗಳು ಎನ್ನುತ್ತಿದ್ದ ಮಾರಪ್ಪನವರು ಅವುಗಳ ಉಳಿವಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಿದ್ದರು.

ದಟ್ಟ ಕಾಡುಗಳ ಅತಿ ಸೂಕ್ಷ್ಮ ಜೀವಿಗಳ ಬಗ್ಗೆಯೂ ವಿಶೇಷ ನಿಗಾ ವಹಿಸಿದ್ದ ಮಾರಪ್ಪನವರು ಕಾಡುಗಳ ಸಮಗ್ರ ಅಭಿವೃದ್ಧಿಗೆ ಅರ್ಥಪೂರ್ಣ ‌ಚಿಂತನೆ ನಡೆಸಿದ್ದರು. ಹಿಂದೊಮ್ಮೆ ಹುಲ್ಲುಹಾಸಿನ ಬೋಳಿಗುಡ್ಡೆ ಎನಿಸಿಕೊಂಡಿದ್ದ ಮಡಿಕೇರಿಯ ರಾಜಾ ಸೀಟ್ ನೆತ್ತಿಯ ಮೇಲೆ ಇಂದು‌‌ ಹೆಮ್ಮರಗಳು ಕಾಣುವಂತಾಗಿದ್ದು ಮಾರಪ್ಪನವರ ಆಸಕ್ತಿಯಿಂದಾಗಿ ಎಂಬ ಮಾತಿದೆ‌. ಬೆಳಗಾವಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ ಗದಗಿನ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿಗೆ ಹಾಗೂ ಕಪ್ಪದ ಗುಡ್ಡ ಪ್ರದೇಶದಲ್ಲಿ ನಡುತೋಪಿನ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ‌. ತುಮಕೂರು ಜಿಲ್ಲೆಯ ದೇವತಾಯನ ದುರ್ಗದ ಬಹಳಷ್ಟು ಅರಣ್ಯ ಪ್ರದೇಶ ಇಂದು ದಟ್ಟವಾಗಿ ರೂಪುಗೊಳ್ಳಲು ಮಾರಪ್ಪನವರ ಸಕ್ರಿಯ ಪಾತ್ರವಿದೆ."ಪುಟ ಸಂಖ್ಯೆ69

ಮಾರಪ್ಪಮವರ ಮೂವತ್ತೆರಡು ವರ್ಷಗಳ ಸುದೀರ್ಘ ಸೇವೆಯಲ್ಲಿ ಅವರು ಎಂದೂ ತಮ್ಮ ಸಾಧನೆಗಳ ಕುರಿತು ಕಾಗದಗಳಲ್ಲಿ ದಾಖಲಿಸಲಿಲ್ಲ‌. ಕೀರ್ತಿಶನಿಯ ಬೆನ್ನು ಹತ್ತಲಿಲ್ಲ‌ ಅವರ ದಾಖಲೆಗಳೇನಿದ್ದರೂ ಅವರು ನಿರ್ಮಿಸಿದ ಕಾಡು, ಮರಗಿಡಗಳಷ್ಟೇ..ಮಾರಪ್ಪನವರು ಮಾಡಿದ್ದು ಪ್ರಕೃತಿ ಪೂಜೆ, ಜನತೆಯ ಆರಾಧನೆ" ಎನ್ನುತ್ತಾರೆ ಪುರುಷೋತ್ತಮ ರಾವ್ ‌

 

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...