Date: 05-12-2025
Location: ಬೆಂಗಳೂರು
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ʻಗೌರವ ಪ್ರಶಸ್ತಿ 2024', ʻಸಾಹಿತ್ಯಶ್ರೀ ಪ್ರಶಸ್ತಿ 2024ʼ, `ಪುಸ್ತಕ ಬಹುಮಾನ 2023' ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು 2025 ಡಿ. 05 ಶುಕ್ರವಾರದಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆಯಿತು.
ಪ್ರಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್ ಮುಕುಂದರಾಜ್, "ಕರ್ನಾಟಕದಲ್ಲಿ ಲೇಖಕರಿಗೆ ಹಾಗೂ ರಾಜಕೀಯದವರಿಗೆ ಒಂದು ಅಂತರವಿದೆ. ಪಂಪನ ಕಾಲದಿಂದಲೂ ಅದು ಚಾಲ್ತಿಯಲ್ಲಿದೆ.ಆದರೆ ಇಂದು ನಾವು ಎಲ್ಲರನ್ನೂ ನಮ್ಮ ಬಂಧುಗಳಂತೆ ನೋಡಿಕೊಳ್ಳುತ್ತಿದ್ದೇವೆ. ಒಂದು ಲೆಕ್ಕದಲ್ಲಿ ಸಾಹಿತ್ಯದ ಒಳಗೊಳ್ಳುವಿಕೆ ಎಂದರೆ ರಾಜಕಾರಣಿ, ವ್ಯಾಪಾರಸ್ಥರು, ಪತ್ರಕರ್ತರು, ರೈತರು, ಕೃಷಿಕರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು, ಲಿಂಗ ಅಲ್ಪಸಂಖ್ಯಾತರನ್ನ ಒಂದೆಡೆ ಸೇರಿಸುವುದಾಗಿದೆ. ಇದೇ ನಿಜವಾದ ಸಾಹಿತ್ಯದ ಘನತೆ. ಇದನ್ನೆಲ್ಲ ಬಿಟ್ಟು ನಾವು ಸಾಹಿತ್ಯವನ್ನ ಸಂಭ್ರಮಿಸುತ್ತೇವೆ ಎಂದರೆ ಅದು ದೊಡ್ಡ ತಪ್ಪಾಗುತ್ತೆ, " ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಿಪಡಿಸಿದರು.
ಕೃತಿಯನ್ನ ಬಿಡುಗಡೆಗೊಳಿಸಿ ಮಾತಾನಾಡಿದ ಗಾಯಕಿ, ಹಿರಿಯ ನಟಿ ಬಿ. ಜಯಶ್ರೀ, "ಇವತ್ತಿನ ಈ ಕಾರ್ಯಕ್ರಮದ ಮಡಿಲು ನನ್ನ ನೋಟದಲ್ಲಿ ಮಹಾ ಮನೆಯಾಗಿದೆ. ಹಿರಿಯರಾದ ಬಸವಣ್ಣ ಅವರಿಗೆ ಇಂತಹ ಪ್ರಶಸ್ತಿ ಸಿಕ್ಕಿರೋದು ನಂಗೆ ಬಹಳಷ್ಟು ಖುಷಿಯಿದೆ," ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಬಿ. ಜಯಚಂದ್ರ, ಶಾಸಕ ಚಿದಾನಂದ ಎಂ.ಗೌಡ, ಶಾಸಕ ರಾಜೇಂದ್ರ ಆರ್, ಶಾಸಕ ಡಿ.ಟಿ. ಶ್ರೀನಿವಾಸ್, ಕೆ.ಆರ್. ವೆಂಕಟೇಶ್, ಭಾ.ಆ.ಸೇ ಕುಮಾರ್ ಟಿ.ಎಚ್.ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ, ಭಾ.ಆ.ಸೇ ಶುಭ ಕಲ್ಯಾಣ್, ಭಾ.ಆ.ಸೇ ಪ್ರಭು ಜಿ, ಭಾ.ಪೊ.ಸೇ ಅಶೋಕ್ ಕೆ.ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.
2024ನೇ ಸಾಲಿನ ಗೌರವ ಪ್ರಶಸ್ತಿಯನ್ನು ಡಾ. ಎಂ. ಬಸವಣ್ಣ(ಚಾಮರಾಜನಗರ), ಶೂದ್ರ ಶ್ರೀನಿವಾಸ್(ಬೆಂಗಳೂರು), ಪ್ರತಿಭಾ ನಂದಕುಮಾರ್(ಬೆಂಗಳೂರು), ಡಾ. ಡಿ.ಬಿ. ನಾಯಕ(ಕಲಬುರಗಿ), ಡಾ. ವಿಶ್ವನಾಥ್ ಕಾರ್ನಾಡ್(ಮುಂಬಯಿ ಅವರಿಗೆ ಪ್ರದಾನಿಸಲಾಯಿತು.
2024ನೇ ಸಾಲಿನ ʻಸಾಹಿತ್ಯಶ್ರೀʼ ಪ್ರಶಸ್ತಿಯನ್ನು ಡಾ. ಬಿ.ಎಂ. ಪುಟ್ಟಯ್ಯ(ಚಿಕ್ಕಮಗಳೂರು), ಪದ್ಮಾಲಯ ನಾಗರಾಜ್(ಕೋಲಾರ), ಡಾ. ಕೆ.ವೈ. ನಾರಾಯಣಸ್ವಾಮಿ(ಬೆಂಗಳೂರು), ಡಾ. ಸಬಿತಾ ಬನ್ನಾಡಿ( ಉಡುಪಿ), ಡಾ. ಮಮತಾ ಜಿ. ಸಾಗರ(ಶಿವಮೊಗ್ಗ), ಡಾ. ಗುರುಲಿಂಗಪ್ಪ ಧಬಾಲೆ (ಅಕ್ಕಲಕೋಟೆ), ಅಬ್ದುಲ್ ಹೈ ತೋರಣಗಲ್ಲು (ಬಳ್ಳಾರಿ), ಡಾ. ಬಿ.ಯು. ಸುಮಾ(ತುಮಕೂರು), ಡಾ. ಎಚ್.ಎಸ್. ಅನುಪಮಾ(ಉತ್ತರ ಕನ್ನಡ), ಡಾ. ಅಮರೇಶ ಯತಗಲ್(ರಾಯಚೂರು) ಅವರಿಗೆ ಪ್ರದಾನಿಸಲಾಯಿತು.
೨೦೨೩ನೇ ವರ್ಷದ ಅಕಾಡೆಮಿಯ ಪುಸ್ತಕ ಬಹುಮಾನವನ್ನ ಕಾವ್ಯ ಪ್ರಕಾರದಲ್ಲಿ ಡಾ. ಲಕ್ಷ್ಮಣ ವಿ.ಎ ಅವರ ʻಕಾಯಿನ್ ಬೂತ್ʼ, ನವಕವಿಗಳ ಪ್ರಥಮ ಸಂಕಲನ ಪ್ರಕಾರದಲ್ಲಿ ಡಾ. ಬಿ.ಎಂ. ಗುರುನಾಥ ಅವರ ʻನಕ್ಷತ್ರ ತಬ್ಬಿ ಮಲಗಿದ ಹೊತ್ತುʼ, ಕಾದಂಬರಿ ಪ್ರಕಾರದಲ್ಲಿ ಗಂಗಪ್ಪ ತಳವಾರ್ ಅವರ ʻಧಾವತಿʼ, ಸಣ್ಣಕತೆ ಪ್ರಕಾರದಲ್ಲಿ ಮಾಧವಿ ಭಂಡಾರಿ ಕೆರೆಕೋಣ ಅವರ ʻಗುಲಾಬಿ ಕಂಪಿನ ರಸ್ತೆʼ, ನಾಟಕ ಪ್ರಕಾರದಲ್ಲಿ ಡಾ. ಸಾಸ್ವಹಳ್ಳಿ ಸತೀಶ್ ಅವರ ʻಏಸೂರು ಕೊಟ್ಟರೂ ಈಸೂರು ಕೊಡೆವುʼ, ಲಲಿತ ಪ್ರಬಂಧದಲ್ಲಿ ಸರಸ್ವತಿ ಭೋಸಲೆ ಅವರ ʻಕಾಡತಾವ ನೆನಪʼ, ಪ್ರವಾಸ ಸಾಹಿತ್ಯದಲ್ಲಿ ಡಾ. ಡಿ.ವಿ. ಗುರುಪ್ರಸಾದ್ ಅವರ ʻಮಾಯನ್ನರ ಮಾಯಾನಗರಿʼ, ಜೀವನ ಚರಿತ್ರೆ/ಆತ್ಮಕಥೆ ಪ್ರಕಾರದಲ್ಲಿ ಡಾ. ಸಿ. ಚಂದ್ರಪ್ಪ ಅವರ ʻಅಶೋಕ ಸತ್ಯ-ಅಹಿಂಸೆಯ ಮಹಾಶಯʼ, ಸಾಹಿತ್ಯ ವಿಮರ್ಶೆ ಪ್ರಕಾರದಲ್ಲಿ ರಂಗನಾಥ ಕಂಟನಕುಂಟೆ ಅವರ ʻಓದಿನ ಒಕ್ಕಲುʼ, ಮಕ್ಕಳ ಸಾಹಿತ್ಯದಲ್ಲಿ ಮತ್ತೂರು ಸುಬ್ಬಣ್ಣರವರ ʻಮುತ್ತಳ್ಳಿಯ ಅಜ್ಜಿ ಕಥೆಗಳುʼ, ವಿಜ್ಞಾನ ಸಾಹಿತ್ಯದಲ್ಲಿ ಡಾ. ಎಚ್.ಎಸ್. ಮೋಹನ್ ಅವರ ʻಕಣ್ಣಿನಲ್ಲಿ ಕಂಡ ಮೃತ್ಯುಬಿಂಬʼ, ಮಾನವಿಕ ಪ್ರಕಾರದಲ್ಲಿ ಡಾ. ಪ್ರಕಾಶ ಭಟ್ ಅವರ ʻಹಳ್ಳಿಗಳನ್ನು ಕಟ್ಟುವ ಕಷ್ಟಸುಖʼ, ಸಂಶೋಧನೆ ಪ್ರಕಾರದಲ್ಲಿ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿಯವರ ʻಕಾಡುಗೊಲ್ಲ ಬುಡಕಟ್ಟುʼ, ಅನುವಾದ-೧ (ಭಾರತೀಯ ಭಾಷೆಯಿಂದ ಕನ್ನಡಕ್ಕೆ) ಪ್ರಕಾರದಲ್ಲಿ ಡಾ. ಜೆ.ಪಿ. ದೊಡಮನಿಯವರ ʻಡಾ. ಬಾಬಾಸಾಹೇಬ ಅಂಬೇಡ್ಕರ (ಜೀವನ ಚರಿತ್ರೆ)ʼ, ಅಂಕಣ ಬರಹ/ವೈಚಾರಿಕ ಬರಹದಲ್ಲಿ ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರ ʻಈಶಾನ್ಯ ಒಡಲುʼ, ಸಂಕೀರ್ಣ ಪ್ರಕಾರದಲ್ಲಿ ಸತೀಶ್ ತಿಪಟೂರು ಅವರ ʻಮಣ್ಣಿನ ಬಂಡಿಯಲ್ಲಿ ಫುಕುವೋಕಾʼ, ಲೇಖಕರ ಮೊದಲ ಸ್ವತಂತ್ರ ಕೃತಿ ಪ್ರಕಾರದಲ್ಲಿ ಗೋವಿಂದರಾಜು ಎಂ. ಕಲ್ಲೂರು ಅವರ ʻನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರುʼ ಕೃತಿಗಳಿಗೆ ಲಭಿಸಿತು.
ಕಾದಂಬರಿ ಪ್ರಕಾರದ ʻಚದುರಂಗ ದತ್ತಿ ಬಹುಮಾನʼವನ್ನ ಲತಾ ಗುತ್ತಿ ಅವರ ʻಚದುರಂಗʼ, ಲಲಿತ ಪ್ರಬಂಧದ ʻವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನʼವನ್ನಸುಮಾ ರಮೇಶ್ ಅವರ ಹಚ್ಚೆ ದಿನ್ (ಬೆಚ್ಚಗಿನ ನಗೆಯೊಂದಿಗೆ), ಜೀವನಚರಿತ್ರೆ ಪ್ರಕಾರದ ಸಿಂಪಿ ಲಿಂಗಣ್ಣ ದತ್ತಿ ಬಹುಮಾನವನ್ನ ರೂಪ ಹಾಸನ ಅವರ ʻಮಹಾಸಂಗ್ರಾಮಿ ಎಸ್. ಆರ್. ಹಿರೇಮಠʼ, ಸಾಹಿತ್ಯ ವಿಮರ್ಶೆ ಪ್ರಕಾರದ ʻಪಿ. ಶ್ರೀನಿವಾಸರಾವ್ ದತ್ತಿ ಬಹುಮಾನʼಕ್ಕೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ʻಇರವಿನ ಅರಿವುʼ, ಕಾವ್ಯ ಹಸ್ತಪ್ರತಿ ಪ್ರಕಾರದ ʻಚಿ. ಶ್ರೀನಿವಾಸರಾಜು ದತ್ತಿ ಬಹುಮಾನʼಕ್ಕೆ ಟಿ.ಜಿ. ಪುಷ್ಪಲತಾ ಅವರ ʻಕೇದಿಗೆʼ, ಅನುವಾದ-೧ ಪ್ರಕಾರದಲ್ಲಿ ʻಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಬಹುಮಾನʼಕ್ಕೆ ರೋಸ್ತಿ ಡಿ' ಸೋಜಾ ಅವರ ʻಹೆಚ್.ಡಿ. ದೇವೇಗೌಡರ ಬದುಕು ಮತ್ತು ದುಡಿಮೆ ನೇಗಿಲ ಗೆರೆಗಳುʼ, ಲೇಖಕರ ಮೊದಲ ಸ್ವತಂತ್ರ ಕೃತಿ ಪ್ರಕಾರದಲ್ಲಿ ʻಮಧುರಚೆನ್ನ ದತ್ತಿ ಬಹುಮಾನʼಕ್ಕೆ ಅಬ್ಬೂರು ಪ್ರಕಾಶ್ ಅವರ ʻಕಣ್ಣ ಕನ್ನಡಿಯಲ್ಲಿʼ, ವೈಚಾರಿಕ/ಅಂಕಣ ಬರಹ ಪ್ರಕಾರದಲ್ಲಿ ʻಬಿ.ವಿ. ವೀರಭದ್ರಪ್ಪ ದತ್ತಿ ಬಹುಮಾನʼಕ್ಕೆ ಸುದೇಶ ದೊಡ್ಡಪಾಳ್ಯ ಅವರ ʻಈಶಾನ್ಯ ದಿಕ್ಕಿನಿಂದʼ, ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಪ್ರಕಾರದಲ್ಲಿ ʻಅಮೆರಿಕನ್ನಡ ದತ್ತಿನಿಧಿ ಬಹುಮಾನʼಕ್ಕೆ ಸುಕನ್ಯಾ ಕನಾರಳ್ಳಿ ಅವರ ʻLove and Water flow together!ʼ ಕೃತಿಗಳಿಗೆ ಪುರಸ್ಕಾರವು ಲಭಿಸಿತು.
ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿ...
ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ...
ಕವಿ ಬಿಆರ್ ಎಲ್ ಗೆ ಇ.ಎಸ್.ಐ.ಸಿ. ಕನ್ನಡ ರತ್ನ ಪ್ರಶಸ್ತಿ ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಮನರಂಜನಾ ಕೂ...
©2025 Book Brahma Private Limited.