'ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಳು’ ಒಂದು ಮಹತ್ವದ ಗ್ರಂಥ


" ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಅಧ್ಯಯನಕ್ಕೆ ಒಂದು ಮಹತ್ವದ ಪರಾಮರ್ಶಕ ಗ್ರಂಥವೆನಿಸುತ್ತದೆ" ಎನ್ನುತ್ತಾರೆ ಗವಿಸಿದ್ದಯ್ಯ . ಅವರು ಮಂಜುನಾಥ ಎಸ್ ಪಾಟೀಲ, ಶ್ರೀನಿವಾಸ ಎಸ್ಕಟ್ಟಿಮನಿ, ಅಜೀದ ಇ ಮಯರ್ ಅವರು ಸಂಪಾದಿಸಿರುವ ‘ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಳು’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಕರ್ನಾಟಕದ ಇತಿಹಾಸದಲ್ಲಿ ಅನೇಕ ಅರಸು ಮನೆತನಗಳು ಆಳಿಹೋಗಿವೆ. ಅವುಗಳಲ್ಲಿ ಮೌರ್ಯ, ಶಾತವಾಹನ, ಚುಟು, ಬನವಾಸಿ ಕದಂಬ, ಬಾದಾಮಿ ಚಾಳುಕ್ಯ, ರಾಷ್ಟ್ರಕೂಟ, ಗಂಗ, ಕಲ್ಯಾಣ ಚಾಳುಕ್ಯ, ಕಳಚುರಿ, ಸೇವುಣ, ಕಾಕತೀಯ, ಹೊಯ್ಸಳ, ವಿಜಯನಗರ, ಬಹಮನಿ, ವಿಜಾಪುರದ ಆದಿಲ್‌ ಶಾಹಿ, ಮೊಗಲ, ಶಿವಾಜಿ, ಮರಾಠ ಪೇಶ್ವ ಪಾಳೆಯಗಾರರು, ದೇಸಗತಿ ಮನೆತನಗಳು, ಹೈದರಾಬಾದ ನಿಜಾಮ, ಸವಣೂರು ನವಾಬ, ಹೈದರಾಲಿ, ಟಿಪ್ಪು ಸುಲ್ತಾನ್, ಬ್ರಿಟಿಷರು ಮತ್ತು ಮೈಸೂರು ಅರಸರು.

ಇವರ ಆಳ್ವಿಕೆಯಲ್ಲಿ ಅನೇಕ ರಾಜಕೀಯ ಏರಿಳಿತಗಳು, ಚಳವಳಿಗಳು, ಹೋರಾಟಗಳು ಮತ್ತು ಅಭಿವೃದ್ಧಿ ಕೆಲಸಗಳು ನಡೆದವು. ಇವರ ಅವಧಿಯ ಹೇರಳ ಮೂಲ ಆಕರಗಳನ್ನು ಬಳಸಿಕೊಂಡು ಕರ್ನಾಟಕ ಚರಿತ್ರೆಯನ್ನು ಕಟ್ಟುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ, ಕಾಲೇಜು ಮತ್ತು ಇನ್ನಿತರ ಸಂಘ ಸಂಸ್ಥೆಗಳು ನಿರಂತರವಾಗಿ ಒಂದಲ್ಲ ಒಂದು ರೀತಿಯ ಸಂಶೋಧನೆಯ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿವೆ. ಈ ದಿಶೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ಕರ್ನಾಟಕ ಇತಿಹಾಸ ಕಾಂಗ್ರೆಸ್ ತಮ್ಮದೇ ಆದ ರೀತಿಯಲ್ಲಿ ಮಹತ್ಕಾರ್ಯವನ್ನು ನಡೆಸುತ್ತಿರುವುದು ಸಂತಸದ ಸಂಗತಿ.

75 ನೆಯ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಮಹಾಮಾರಿ ಕರೋನ ಕಾರಣದಿಂದಾಗಿ ಜಮಖಂಡಿಯ ಬಿ.ಎಲ್.ಡಿ.ಇ ಸಂಸ್ಥೆ, ಕಿತ್ತೂರ ರಾಣಿಚೆನ್ನಮ್ಮ ಸಂಶೋಧನಾ ಸಂಸ್ಥೆ ಹಾಗೂ ಕರ್ನಾಟಕ ಇತಿಹಾಸ ಕಾಂಗ್ರೇಸ್, ಬೆಂಗಳೂರು ಈ ಮೂರು ಸಂಸ್ಥೆಗಳ ಅಡಿಯಲ್ಲಿ ಕರ್ನಾಟಕದ ಜಿಲ್ಲಾವಾರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಆ ಜಿಲ್ಲೆಯ ಸಮಕಾಲೀನ ಅಭಿವೃದ್ಧಿ ಕಾರ್ಯಗಳು ಎಂಬ ವಿಷಯದ ಕುರಿತು ೪೦ ದಿವಸಗಳ ಕಾಲ ರಾಷ್ಟ್ರೀಯ ಮಟ್ಟದ ವೆಬಿನಾರನ್ನು ಯಶಸ್ವಿಯಾಗಿ ಏರ್ಪಡಿಸಿದ್ದು ಒಂದು ದಾಖಲೆಯೆನಿಸಿದೆ.

ಕರ್ನಾಟಕ ಚರಿತ್ರೆಯನ್ನು ಅವಲೋಕಿಸಿದಾಗ ಅಲ್ಲಿ ಅನೇಕ ಸ್ವಾರಸ್ಯಕರ ಸಂಗತಿಗಳು ತಿಳಿದು ಬರುತ್ತವೆ. ವಿಸ್ತಾರ ಭಾರತವನ್ನು ಹರಿದು ಹಂಚಿಕೊಂಡು ಅನೇಕ ಅರಸು ಮನೆತನಗಳು ದೀರ್ಘಕಾಲ ಆಳ್ವಿಕೆಯನ್ನು ಮಾಡಿದರು. ಅದರಲ್ಲಿ ಅವರ ಆಳ್ವಿಕೆಗಳ ವ್ಯಾಪ್ತಿ ಸ್ವರೂಪ ಭಿನ್ನವಾಗಿದ್ದರೂ ಅವರ ರಾಜಕೀಯ ಮತ್ತು ಸಾಂಸ್ಕೃತಿಕ ಸಂಘಟನೆಗಳು ಮತ್ತು ಪರಂಪರೆಗಳು ಏಕ ರೀತಿಯಲ್ಲಿದ್ದವು. ಆದರೆ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಡಚ್, ಬ್ರಿಟಿಷ್, ಪೋರ್ಚುಗೀಸ್, ಫ್ರೆಂಚರಲ್ಲಿ ಭಾರತೀಯ ಆಳರಸರ ರಾಜಕೀಯ ಲಾಭವನ್ನು ಪಡೆದುಕೊಂಡು ಇದರಲ್ಲಿ ಸ್ಥಿರವಾಗಿ ನೆಲೆನಿಂತವರು ಬ್ರಿಟಿಷರು.ಮೊದಲ ಹಂತದಲ್ಲಿ ಕಲ್ಕತ್ತ ನಗರವನ್ನು ತಮ್ಮ ವ್ಯಾಪಾರ, ವಾಣಿಜ್ಯೋದ್ಯಮ ಹಾಗೂ ಆಡಳಿತದ ಮೂಲ ಕೇಂದ್ರವನ್ನಾಗಿಸಿಕೊಂಡರು.

ಅದೇ ರೀತಿಯಲ್ಲಿ ಬಾಂಬೆ, ಪೂನಾದಿಂದ ವಿಭಾಗಿಯ ಮತ್ತು ಪ್ರಾಂತೀಯ ಆಡಳಿತ ಕೇಂದ್ರಗಳನ್ನು, ಜಿಲ್ಲಾವಾರು ತಾಲೂಕುವಾರು ಕೇಂದ್ರಗಳನ್ನು ಸ್ಥಾಪಿಸಿಕೊಂಡು ಸ್ಥಳೀಯವಾಗಿದ್ದ ದೇಸಗತಿ ಮನೆತನಗಳನ್ನು ತಮ್ಮ ಮಿಲಟರಿ ಸೈನ್ಯ ಶಕ್ತಿಯಿಂದ ಬಗ್ಗು ಬಡಿದರು. ಹೊಸ ಹೊಸ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದು ಸ್ಥಳೀಯ ಶಕ್ತಿಯೆನಿಸಿದ್ದ ಸಣ್ಣ ಪುಟ್ಟ ಅರಸು ಮನೆತನಗಳ ಹಕ್ಕನ್ನು ಕಸಿದುಕೊಂಡರು. ಈ ಕಾರಣಗಳಿಂದ ಸಣ್ಣಪುಟ್ಟ ಅರಸು ಮನೆತನಗಳಲ್ಲದೆ ಅವರಿಗಾದ ಅನ್ಯಾಯವರಿತ ಜನಸಾಮಾನ್ಯರೂ ಬ್ರಿಟಿಷರ ವಿರುದ್ಧ ಹೋರಾಟ ಚಳುವಳಿಗಳನ್ನು ಪ್ರಾಂತೀಯವಾಗಿಯೂ ಆರಂಭಿಸಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಇವರ ದಿಟ್ಟತನದ ಹೋರಾಟ 1853 ರಲ್ಲಿ ಬ್ರಿಟಿಷರು ಕಲ್ಕತ್ತಾದಲ್ಲಿ 'ಪ್ರೀನ್ಸ್‌ ಪ್ರೊಕ್ಲಮೇಶನ್' ಆಡಳಿತವನ್ನು ಆರಂಭಿಸಿದರು. ಸಮಗ್ರ ದೇಶದ ಆಡಳಿತವ ತಮ್ಮ ಅಧೀನದಲ್ಲಿಟ್ಟುಕೊಂಡು ವ್ಯವಸ್ಥಿತ ಆಡಳಿತವನ್ನು ಬ್ರಿಟಿಷರು ನಡೆಸತೊಡಗಿದರು. ಆಗ ಸಮಗ್ರ ದೇಶದ `ಜನರಿಗೆ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡ ಅರಿವು ಉಂಟಾಯಿತು. ಒಂದೊಂದು ವಿಷಯವನ್ನು ಮುಂದೆ ಮಾಡಿ ಇದಕ್ಕೆ ರಾಷ್ಟ್ರೀಯ ಬ್ರಿಟಿಷರ ವಿರುದ್ಧ ಸಂಘಟನೆಗಳ ಮೂಲಕ ಹೋರಾಟಗಳು, ಚಳವಳಿಗಳು ವಿಸ್ತಾರಗೊಂಡವು. ಮಟ್ಟದಲ್ಲಿ ಅನೇಕರು ಹೋರಾಟವನ್ನು ಮಾಡತೊಡಗಿದರು ಅವರ ಸಂಘಟನೆಗಳ ಪ್ರಭಾವದಿಂದ ಅದ ಪ್ರಾಂತೀಯ ಮಟ್ಟದಲ್ಲಿ ವಿಸ್ತರಿಸುತ್ತಾ ಹಳ್ಳಿ, ಗ್ರಾಮ, ಪಟ್ಟಣಗಳಿಗೆ ಹೋಯಿತು. ಬ್ರಿಟಿಷರ ವಿರುದ್ಧ ಹೋರಾಡಿ ಸ್ವತಂತ್ರ ಕಳೆದುಕೊ ಅನೇಕ ರಾಜ, ರಾಣಿ, ದೇಶಭಕ್ತ ಕಥೆಗಳನ್ನು ಮತ್ತು ಕವಿತೆಗಳನ್ನು ಪ್ರಸಾರ ಮಾಡುವ ಕಾರ್ಯಗಳು ಜಾರಿಗೆ ಬಂದವ ಇವುಗಳು ಜನಸಾಮಾನ್ಯರಲ್ಲಿ ಸ್ಫೂರ್ತಿ ಮತ್ತು ಜಾಗೃತಿ ಮೂಡಲು ಕಾರಣವಾಯಿತು.

ಸ್ವಾತಂತ್ರಕ್ಕಾಗಿ ಹೋರಾಡುವನು ಶಕ್ತಿ ನೀಡಲು ಅನೇಕರು ತಮ್ಮ ಹಣ, ಆಭರಣ ಇತ್ಯಾದಿ ವಸ್ತುಗಳನ್ನು ದಾನ ನೀಡಿದರು. ರಾಷ್ಟ್ರೀಯ ಸಂಘಟನೆಗಳು ಮಹಾತ್ಮಾಗಾಂಧೀಜಿ, ಸುಭಾಶ್ಚಂದ್ರ ಭೋಸ್, ಮುಂತಾದವರ ಪಾತ್ರ ಜನಸಾಮನ್ಯರಿಗೆ ಹೆಚ್ಚು ಸ್ಪೂರ್ತಿದಾಯಕವಾದವ ಅವರ ಆದೇಶ, ಸಂದೇಶಗಳು ಜನಪ್ರಿಯವಾದವು. ಇವರೆಲ್ಲರ ತ್ಯಾಗ ಬಲಿದಾನದ ಹೋರಾಟದ ಫಲವಾಗಿ ಕೊನೆ ಆಗಸ್ಟ್ 15, 1947ರಲ್ಲಿ ಬ್ರಿಟಿಷರು ಭಾರತೀಯರಿಗೆ ಸ್ವಾತಂತ್ರ್ಯವನ್ನು ಬಿಟ್ಟುಕೊಟ್ಟರು. ಅಂದಿನಿಂದ ಇಂದಿನವರ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದವು. ನಮ್ಮ ಪ್ರಜಾಪ್ರಭುತ್ವ ಸರ್ಕಾರದ ರಾಜಕೀಯ ಸ್ವಾತಂತ್ರದಿಂದ ನಾವು ಅನ ಸಾಧನೆಗಳನ್ನು ಮಾಡಿದ್ದೇವೆ. ನಮ್ಮ ಸಾಧನೆಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಲ್ಲ ವಿಜ್ಞಾನ, ತಂತ್ರಜ್ಞಾನಗಳಲ್ಲಿ ಉನ್ನತ ಅಭಿವೃದ್ಧಿಯನ್ನು ಸಾಧಿಸಿದ್ದೇವೆ. ವಿಸ್ತಾರ ಭಾರತ ಈಗ ಒಂದೇ ಛತ್ರಿಯ ಅಡಿಯ ಬಂದಿದೆ. ಹೀಗಾಗಿ ಪ್ರಸ್ತುತ ವೆಬಿನಾ‌ ಕರ್ನಾಟಕದ ಪ್ರತಿಯೊಬ್ಬರಿಗೆ ಒಂದು ಮಹತ್ವದ ಕಾರ್ಯವೆನಿಸಿದೆ.

ಈ ವೆಬಿನಾರನಲ್ಲಿ ಮಂಡಿಸಿದ ಪ್ರಬಂಧಗಳಿಂದ ಎಲ್ಲಾ 31 ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರ ಸ ಚರಿತ್ರೆ ಒಂದೆಡೆ ಬಂದಿದೆ. ಹೈದರಾಬಾದ ಕರ್ನಾಟಕ ಪ್ರದೇಶವೆನಿಸಿದ ಬೀದರ, ಗುಲಬರ್ಗಾ, ರಾಯಚೂರು - ಕೊಪ್ಪಳ ಜಿಲ್ಲೆಗಳಲ್ಲಿ ನವಾಬರ ಆಳ್ವಿಕೆಯಲ್ಲಿ ನಡೆದ ಗಲಭೆಗಳು ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊ ರಜಾಕರ ವಿರುದ್ಧವಾಗಿತ್ತು. ಮೈಸೂರು ಅರಸರ ಅಧೀನದ ಹಳೆ ಮೈಸೂರು ಪ್ರದೇಶದಲ್ಲಿ ಮೈಸೂರು ಅರ ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡು ಆಳಿದ ನಿಮಿತ್ತ ಅಲ್ಲಿಯ ಚಳವಳಿ ಮತ್ತೊಂದು ರೀತಿಯಲ್ಲಿ ಮುಂಬೈ ಕರ್ನಾಟಕದ ಅನೇಕ ಸಂಸ್ಥಾನಗಳಲ್ಲಿ ಮುಧೋಳ, ನರಗುಂದ, ರಾಮದುರ್ಗ, ಸೊರಟೂರ, ಜಮಖಂ ಸಂಡೂರು, ರೋಣ ಮುಂತಾದ ಕಡೆ ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡು ಸ್ವತಂತ್ರರಾಗಿ ಆಳುತ್ತಿದ್ದ ಆದರೆ ಅದರಲ್ಲಿ ಅನೇಕರ ವೈಯಕ್ತಿಕ ಆಸೆಗಳು ಈಡೇರದ ಕಾರಣ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಕಾಣುತ್ತದೆ. ಮಡಿಕೇರಿ ಭಾಗದಲ್ಲಿ ಈ ರೀತಿಯ ಚಿತ್ರಣ ಒಳಗೊಂಡಿದೆ.

ಒಟ್ಟಾರೆ ಪ್ರಸ್ತುತ ಕೃತಿಯ ಈ ಲೇಖನಗಳ ಬ್ರಿಟಿಷರ ವಿರುದ್ಧ ಹೋರಾಟ/ ಚಳವಳಿಗಳು ಮೊದಲು ಬಾಂಬೆ ಕರ್ನಾಟಕದ ಧಾರವಾಡ ಪ್ರದೇಶದಲ್ಲಿ ಆರಂಭ ಆನಂತರ ಕ್ರಮೇಣ ಇನ್ನಿತರ ಕಡೆಗಳಿಗೆ ಹಬ್ಬಿದ್ದು ತಿಳಿಯುತ್ತದೆ. ಈ ಅವಧಿಯಲ್ಲಿ ಅನೇಕರು ನಡೆಸಿದ ಹೋರಾಟಗ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ ಇನ್ನಿತರರ ಪಾತ್ರಗಳು ಇಲ್ಲಿ ಉಪಲಬ್ಧವಾಗಿವೆ. ಆ 31 ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ನಡೆದ ಅಭಿವೃದ್ಧಿಕಾರ್ಯಗಳ ಅನೇಕ ಲೇಖನಗಳು ಮೊದಲಬಾರಿಗೆ ಈ ಕೃತಿ ಒಂದು ಕಡೆ ತರಲಾಗಿದೆ.

ಪ್ರಸ್ತುತ ಕೃತಿಯು ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಅಧ್ಯಯನಕ್ಕೆ ಒಂದು ಮಹತ್ವದ ಪರಾಮರ್ಶಕ ಗ್ರಂಥವೆನಿಸುತ್ತದೆ. ಬಿಟ್ಟು ಹೋಗಿರಬಹುದಾದ ವಿಷಯಗಳನ್ನು ಮುಂದೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಪ್ರಸ್ತುತ ಕೃತಿಯು ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಅರಿಯಲು ವಿಶ್ವವಿದ್ಯಾಲಯ, ಕಾಲೇಜು ಮತ್ತು ಇನ್ನಿತರ ಶಿಕ್ಷಣ ಸಂಸ್ಥೆಗಳ ಸಂಶೋಧಕರಿಗೆ ತುಂಬಾ ಪ್ರಯೋಜನವಾಗುತ್ತದೆ.

- ಗವಿಸಿದ್ದಯ್ಯ

MORE FEATURES

ಬೊಗಸೆಯಲ್ಲಿ ವಿಷಮ ಕಾಲಘಟ್ಟದ ನೆನಪುಗಳು

20-04-2024 ಬೆಂಗಳೂರು

“ದೇಹಕ್ಕೆ ಗಾಯವಾದರೆ ಮೌನವಾಗಿದ್ದರೂ ವಾಸಿಯಾಗುತ್ತದೆ. ಆದರೆ, ದೇಶಕ್ಕೆ ಗಾಯವಾದಾಗ ಮೌನವಾಗಿದ್ದಷ್ಟು ಜಾಸ್ತಿಯಾಗು...

ಕಮಲಾದಾಸ್ ಭಾರತೀಯ ಸಾಹಿತ್ಯ ಜಗತ್ತಿನಲ್ಲಿಯೇ ಖ್ಯಾತ ಹೆಸರು

20-04-2024 ಬೆಂಗಳೂರು

'ನಿನಗೆ ನನ್ನ ಅನುಮತಿ ಬೇಕಾಗಿಲ್ಲ. ನೀನು ನನ್ನ ಯಾವ ಕತೆಯನ್ನಾದರೂ ಅನುವಾದಿಸಿ ಪತ್ರಿಕೆಗಳಿಗೆ ಕಳಿಸ್ಕೊ' ಎಂದ...

ಸಾಹಿತ್ಯದ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದವರಿಗೆ ಈ ಗ್ರಂಥ ಉಪಯುಕ್ತ

20-04-2024 ಬೆಂಗಳೂರು

‘ಈ ವಿಮರ್ಶಾ ಗ್ರಂಥವು ಡಾ. ಪೂರ್ಣಿಮಾ ಶೆಟ್ಟಿ ಇವರ ಅಪಾರ ಓದನ್ನು ಮಾತ್ರ ತೋರಿಸುವುದಲ್ಲದೆ ಅವರಿಗೆ ವಿವಿಧ ಸಾಹಿತ...