"ಆದಿ ಕವಿ ಪಂಪನ "ವಿಕ್ರಮಾರ್ಜುನ ವಿಜಯಂ" ಇದು ಪಂಪಭಾರತ ಎಂದೂ ಕರೆಯಲ್ಪಟ್ಟಿದೆ. ಪಂಚಪಾಂಡವರಲ್ಲಿ ಶೂರ ಧೀರನಾದ ಅರ್ಜುನನನ್ನು ಕಥಾ ನಾಯಕ ನನ್ನಾಗಿ ಮಾಡಿ ಅರ್ಜುನನಲ್ಲಿ ತನ್ನ ಆಶ್ರಯದಾತ ಸಾಮಂತರಸು ಅರಿಕೇಸರಿಯನ್ನು ಅರ್ಜುನನೊಂದಿಗೆ ತಗುಳ್ಚಿ ಈ ಕಾವ್ಯವನ್ನು ಬರೆದಿದ್ದಾನೆ," ಎನ್ನುತ್ತಾರೆ ಲೇಖಕ ಉದಯಕುಮಾರ ಹಬ್ಬು. ಅವರು ಆದಿ ಕವಿ ಪಂಪ ಅವರ ‘ವಿಕ್ರಮಾರ್ಜುನ ವಿಜಯಂ’ ಕೃತಿಗೆ ಬರೆದ ಲೇಖನ ನಿಮ್ಮ ಓದಿಗಾಗಿ.
ಆದಿ ಕವಿ ಪಂಪನ "ವಿಕ್ರಮಾರ್ಜುನ ವಿಜಯಂ" ಇದು ಪಂಪಭಾರತ ಎಂದೂ ಕರೆಯಲ್ಪಟ್ಟಿದೆ. ಪಂಚಪಾಂಡವರಲ್ಲಿ ಶೂರ ಧೀರನಾದ ಅರ್ಜುನನನ್ನು ಕಥಾ ನಾಯಕನಮ್ನಾಗಿ ಮಾಡಿ ಅರ್ಜುನನಲ್ಲಿ ತನ್ನ ಆಶ್ರಯದಾತ ಸಾಮಂತರಸು ಅರಿಕೇಸರಿಯನ್ನು ಅರ್ಜುನನೊಂದಿಗೆ ತಗಳ್ಚಿ ಈ ಕಾವ್ಯವನ್ನು ಬರೆದಿದ್ದಾನೆ. ಇದರಲ್ಲಿ ಚತುರ್ಥಾಶ್ವಾಸಂ ಕಾವ್ಯ ಭಾಗವು ಅನೇಕ ದೃಷ್ಟಿಯಿಂದ ಬಹು ಮಹತ್ವದ ಭಾಗವಾಗಿದೆ. ಯಾಕೆಂದರೆ ಇಲ್ಲಿ ತನ್ನ ಊರಾದ ಇಂದಿನ ಬನವಾಸಿ ಎಂದು ಕರೆಯಲ್ಪಡುವ ನಾಡನ್ನು ತುಂಬ ಸುಂದರವಾಗಿ ವರ್ಣಿಸಿದ್ದಾನೆ.
"ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ, ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲಬಿಟ್ಟಿರುವ ಮಾವಿನಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವೀಳ್ಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಿಗೆ ಗಿಡಗಳೇ: ಸುಸ್ವರವಾಗಿ ಧ್ವನಿ ಮಾಡುವ ಕೋಗಿಲೆಗಳೇ; ಝೇಂಕರಿಸುವ ದುಂಬಿಗಳೇ. ಈ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅಧೀನರಾಗಿರುವ ಮನುಷ್ಯರೇ ಮನುಷ್ಯರು, ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೆ ಸಾಧ್ಯವೇ! ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ಅತಿ ಸುಖಹೇತುವಾದ ದಕ್ಷಿಣ ದಿಕ್ಕಿನತಂಪಾದ ಗಾಳಿಯ ಸ್ಪರ್ಷವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಂ ಎಂಬ ವಾಕ್ಯದಲ್ಲಿ ತನ್ನ ಹುಟ್ಟೂರಿನ ಅಭಿಮಾನವನ್ನು ವ್ಯಕ್ತಪಡಿಸುತ್ತಾನೆ.
ಈ ಆಶ್ವಾಸವು ಮಹಾಕಾವ್ಯದ ಸಂಪ್ರದಾಯದಂತೆ ಒಳಗೊಳ್ಳುವ ನವರಸಗಳು. ಈ ಚತುರ್ಥಾಶ್ವಾಸದಲ್ಲಿ ಶೃಂಗಾರ ರಸವನ್ನು ಅಭಿವ್ಯಕ್ತಿಸುವಾಗ ಆ ನಗರದ ವೇಶ್ಯಾವಾಟಿಕೆಯನ್ನು ಅತ್ಯಂತ ರಸಯುಕ್ತವಾಗಿ ಸಂಭೋಗ ಮತ್ತು ವಿಪ್ರಲಂಬ ಶೃಂಗಾರದ ಕಲಾತ್ಮಕ ಅಭಿವ್ಯಕ್ತಿಯನ್ನು ಕಾಣಬಹುದಾಗಿದೆ. ಅಂದಿನ ಶ್ರೀಮಂತರು ರಾಜಕುಮಾರರು, ವ್ಯಾಪಾರಿಗಳು, ವೇಶ್ಯೆಯರ ಸಂಗಕ್ಕೆ ಹಾತೊರೆಯುವಂತೆ ಹಲವು ದರಿದ್ರರೂ ಈ ಸುಖಕ್ಕೆ ಹಾತೊರೆಯುತ್ತಿದ್ದರು.
ಹಣಬಲವಿದ್ದ ಹಣ್ಣು ಹಣ್ಣು ಮುದುಕರೂ ಲೈಂಗಿಕ ಸುಖಕ್ಜಾಗಿ ಹಾತೊರೆಯುವ ಹಾಸ್ಯಪ್ರಸಂಗಗಳೂ ಇವೆ. ಮತ್ತು ಸೂಳೆಯರ ಮನೆ ಎದುರಿಗೆ ಒಂದು ಗಂಟೆ ತೂಗುಹಾಕಲಾಗಿರುತ್ತದೆ ವಿಟನು ಅಥವಾ ಕಾಮಾಕಾಂಕ್ಷಿಯು ಗಂಟೆಯನ್ನು ಬಾರಿಸಿ ಸೂಳೆಯ ಲಕ್ಷ್ಯವನ್ನು ಸೆಳೆದು ಅವಳ ಪ್ರಣಯಾಕಾಂಕ್ಷೆಯನ್ನು ವ್ಯಕ್ತಪಡಿಸಬೇಕು. ಎಲ್ಲ ಸೂಳೆಯರೂ ಎಲ್ಲ ಪುರುಷರ ಆಸೆಯನ್ನು ಈಡೇರಿಸಿದಿದ್ದಾಗ ಪುರುಷರ ವಿರಹ ವೇದನೆಗಳು ಇಲ್ಲಿ ನಾನಾ ಪ್ರಕಾರಗಳಲ್ಲಿ ಚಿತ್ರಣಗೊಂಡಿದೆ ವೇಶ್ಯಾವಾಟಿಕೆಯಲ್ಲಿ ಹೆಂಡ ಅಥವಾ ಮದುಪಾನ ಸೇವನೆ ಇದ್ದೇ ಇರುತ್ತದೆ. ಕವಿ ಇಲ್ಲಿ ನಾನಾ ಹೆಸರುಗಳ ಕಳ್ಳು ಯಾ ಹೆಂಡದ ಹೆಸರುಗಳನ್ನು ದಾಖಲಿಸಿದ್ದಾನೆ ಮತ್ತು ಹೆಂಡದ ರುಚಿ ಕೆಲವು ಸಿಹಿ, ಕೆಲವು ಒಗರು ಇನ್ನು ಕೆಲವು ಕಹಿ ರುಚಿಯ ಹೆಂಡಗಳಿವೆ.
ಮದ್ಯಪಾನ ಮಾಡಿದ್ದುದರ ಪರಿಣಾಮವನ್ನೂ ತುಂಬ ಸೊಗಸಾಗಿ ಚಿತ್ರಿಸಿದ್ದಾನೆ ವೇಶ್ಯೆಯರು ಹೆಂಡ ಕುಡಿದು ನರ್ತಿಸುವಾಗ ಅವಳಿಗೆ ಸೊಂಟದ ಉಡಿದಾರ ಸಡಿಲವಾಗಿ ಮರ್ಮಸ್ಥಳ ಕಂಡರೂ ಎಚ್ಚರವಿಲ್ಕದೆ ಕುಣಿಯುತ್ತಾಳೆ. ಸಂಭೋಗ ಶೃಂಗಾರವನ್ನು ಶಯನ ರತಿ ಸುಖವನ್ನು ಕೂಡ ನಿರ್ಭಿಡೆಯಿಂದ ಚಿತ್ರಿಸಲಾಗಿದೆ ರತಿಸುಖದ ಹರಿವ ದ್ರವ್ಯ ಎಂದರೆ ವೀರ್ಯವನ್ನು ನದಿಯ ನೀರಿಗೆ ಹೋಲಿಸಲಾಗಿದೆ.
ಪ್ರಸಂಗ ಅರ್ಜುನನು ಸುಭದ್ರೆಯ ಪ್ರೇಮಪಾಶದಲ್ಲಿ ಸಿಕ್ಕಿಬಿದ್ದು ಅವಳು ಅವನ ಕೈಗೆ ಸಿಗದಾದಾಗ ಅವನು ಬೇಸರ ಕಳೆಯಲು ನಗರದ ವೇಶ್ಯಾವಾಟಿಕೆಗೆ ಹೋಗುತ್ತಾನೆ. ಅಲ್ಲಿ ಅವನು ಕಂಡ ವಿವಿಧ ವಿಟರನ್ನು, ಸೂಳೆಯರ ಸಖಿಯರನ್ನು, ಪ್ರಿಯಕರನ ದೂತರನ್ನು ಪ್ರಿಯಕರರ ವಿರಹ ವೇದನೆಗಳನ್ನು ಕಾಣುತ್ತಾನೆ. ಕುಡುಕರನ್ನು ಕಂಡು ಅರ್ಜುನ ಹೀಗೆ ಹೇಳುತ್ತಾನೆ-": ಕುಡಿಯುವವನನ್ನು ಕಳ್ ಕುಡಿಯುವವನು ಎಂದು ಹೇಳಬಹುದೆ? ಆಗದು, ಕುಡಿಯುವವರನ್ನು ಹಾಗೆ ಕುಡುಕರೆಂದು ಕರೆದರೆ ಅವರು ಲಜ್ಜಿತರಾಗುತ್ತಾರೆ; ಹಾಗೆ ಕುಡಿದರೂ ಅವರು ಎಲ್ಲರ ಹೃದಯವನ್ನು ಸೆರೆ ಹಿಡಿಯುತ್ತಾರಲ್ಲವೆ? ದೋಷವಾದುದು ಅವಲಂಬನದಿಂದ ಒಳ್ಳೆಯದೇ ಆಗುವುದಲ್ಲವೆ? ವಿಟನೊಬ್ಬನು ಓರ್ವ ತರುಣಿಯನ್ನು ಅವನು ಕೊಡುವ ಹೊನ್ನಿನ ರಾಶಿಗೆ ಮುದುಕನ ಬಳಿ ಬಲಾತ್ಕಾರವಾಗಿ ಕಳಿಸುತ್ತಾನೆ. ಅವಳು ಹೇಳುತ್ತಾಳೆ- ಮುದುಕನು ಗೊರಕೆ ಹೊಡೆದರೆ ಬೆಟ್ಟಗಳೇ ಬಿರಿದು ಹೋಗುತ್ತವೆ. ಸುರಿಯುವ ಜೊಲ್ಲಿನ ಲೊಳೆಗಳು ಪ್ರವಾಹವಾಗಿ ಹರಿಯುತ್ತವೆ ಕೆಮ್ಮಿ ಎದೆಗುಟ್ಟಿದರೆ ತೋಳಿನಲ್ಲಿಯೇ ಜೀವ ಹೋಗುತ್ತದೆಯೆಂಬ ಭಯವುಂಟಾಗುತ್ತದೆ ಇಂತಹ ಮುದುಕನು ನನ್ನಲ್ಲಿ ಕೂಡುವುದಕ್ಕೆ ಬಂದು ಎಷ್ಟೇ ಹೊನ್ನುಗಳನ್ನು ಸುರಿದರೂ ಅವನ ಹಲ್ಲಿಲ್ಲಿದ ಬಾಯಿಯ ದುರ್ಗಂಧವು ಯಾರು ತಾನೆ ಸಹಿಸುತ್ತಾರೆ?" ಎಂದು ತರುಣಿ ಇತರ ವೇಶ್ಯೆಯರನ್ನು ನಗಿಸುತ್ತಿದ್ದಳು ಪ್ರೀತಿ ಪ್ರೇಮದ ಹಲವಾರು ಮಜಲುಗಳನ್ನು ಇಲ್ಲಿ ವಿವೇಚಿಸಲಾಗಿದೆ.
ಬೇಂದ್ರೆಯವರ ಹಲವು ಪ್ರೇಮಗೀತೆಗಳ ಮೂಲ ಧಾರೆಯ ಸುಳಿವನ್ನು ಪಂಪನ ಕಾವ್ಯದ ಈ ಭಾಗದಲ್ಲಿ ಕಾಣಬಹುದೇನೋ. ಸ್ವತಃ ಪಂಪನೆ ಹಿಂದಿನ ಸಂಸ್ಕೃತ ಕವಿಗಳಾದ ಭತೃಹರಿ ಜಯದೇವರಿಂದ ಪ್ರಬಾವಿತನಾಗಿರಬಹುದು.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.