About the Author

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ಕಪ್ಪೆ ರಾಜಕುಮಾರಿ ಮತ್ತು ಇತರ ಕತೆಗಳು ಮತ್ತು  ಲುಂಡೀರಿಯಾ ಇಂಗ್ಲಿಷ್ ಮಕ್ಕಳ ಕಾದಂಬರಿಯ ಅನುವಾದವನ್ನು ಮಾಡಿದ್ದಾರೆ. ಯಶಸ್ವಿ ಜೀವನದ ರಹಸ್ಯ,  ನಿಮ್ಮ ಹಣ ನಿಮ್ಮ ಕೈಯಲ್ಲಿ ಇವರ ವ್ಯಕ್ತಿತ್ವ ವಿಕಸನ ಪುಸ್ತಕಗಳು. ತತ್ವಶಾಸ್ತ್ರೀಯಕ್ಕೆ ಸಂಬಂಧಿಸಿದಂತೆ ಯೋಗ ಮತ್ತು ತಂತ್ರ ಮತ್ತು ಪ್ರಾಚೀನ ಭಾರತದ ತತ್ಬದರ್ಶನಗಳು ಪುಸ್ತಕ ರೂಪುಗೊಂಡಿದೆ. 

ಧಾರ್ಮಿಕ ಕೃತಿಗಳಾದ ಬುದ್ಧತ್ವ- ಸಂತೋಷಕ್ಕೆ ಒಂದೆ ದಾರಿ, ವಿಪಶ್ಸನ ಧ್ಯಾನ-ಅರಿವಿನ ದಾರಿ, ನಾಗಾರ್ಜುನ ಬದುಕು ಮತ್ತು ಶೂನ್ಯತಾ ಸಿದ್ಧಾಂತ, ಬೌದ್ಧ ಧ್ಯಾನದ ತಂತ್ರಗಳು  ಓದುಗರಿಗೆ ಲಭಿಸಿದೆ.
ಚಂದ್ರ ಕೀರ್ತಿ ಮತ್ತು ನಾಗಾರ್ಜುನ ಮತ್ತು ವಾಸ್ತು ಮತ್ತು ಫೆಂಗ್ಶ್ಯೂ -ಒಂದು ತೌಲನಿಕ ಅಧ್ಯಯನ,ವನ್ನು ಇವರು ನಡೆಸಿದ್ಧಾರೆ.  ನಳಪಾಕಕ್ಕೆ ಸಂಬಂಧಿಸಿದಂತೆ ಸಸ್ಯಾಹಾರಿ ರೆಸಿಪಿಗಳು ಕೃತಿ ಪ್ರಕಟವಾಗಿದೆ. ಸಂಕ್ರಮಣ ಪತ್ರಿಕೆಗಳಲ್ಲಿ ಇವರ ವಿಮರ್ಶಾ ಲೇಖನಗಳು ಪ್ರಕಟಣೆಗೊಂಡಿವೆ.

ಹೊನ್ನಾವರದ ದೀವಟಿಗೆ ಪ್ರಕಾಶನದಿಂದ ಕತಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ಧಾರೆ. ಮಕ್ಕಳ ಸಂಗನ, ಮೈಸೂರು ಇವರಿಂದ ಅತ್ಯುತ್ತಮ ಹಿರಿಯರು ಬರೆದ ಮಕ್ಕಳ ಕತೆಗಾಗಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇವನೂರು ಕಾದಂಬರಿಗಳು ಮತ್ತು ಕಥೆಗಳು ಅವಲೋಕನ ಪುಸ್ತಕಕ್ಕೆ ಬೆಂಗಳೂರಿನ ಚೇತನ ಪ್ರಕಾಶನದ ಪ್ರಶಸ್ತಿ ಇವರಿಗೆ ಲಭಿಸಿದೆ. ತುಮಕೂರಿನ ಜೀವನ ಮಿತ್ರ ರಾಜ್ಯಮಟ್ಟದ ಕವಿತಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ವಿಪಶ್ಸನ ಧ್ಯಾನದ ತರಬೇತುದಾರ‌, ಕಪ್ಪು ದೇವತೆ ಕಾದಂಬರಿಗೆ ವರ್ಷದ ಕಾದಂಬರಿ ಎಂಬ ಮನ್ನಣೆ‌ಯನ್ನು ಗಳಿಸಿದ್ಧಾರೆ. 

 

ಉದಯ್ ಕುಮಾರ್ ಹಬ್ಬು

(27 Apr 1951)

Stories/Poems