ಯುದ್ಧದಿಂದ ಹೆಚ್ಚು ನೋವಿನ ಪಾಲುದಾರರು ಹೆಂಗಸರು ಮತ್ತು ಮಕ್ಕಳೇ


“ಕೆಲವೊಂದು ಕಥೆಗಳು ನಮ್ಮನ್ನು ತಡೆದು ನಿಲ್ಲಿಸುವಷ್ಟು. ಇವರ ಕತೆಗಳಲ್ಲಿನ ಪರಿಸರ ಹೊಸದು ಹಾಗೂ ಇಲ್ಲಿ ಬರುವ ಪಾತ್ರಗಳು ಕೂಡ ಅಷ್ಟೇ ಹೊಸತನದಿಂದ ಕೂಡಿವೆ,” ಎನ್ನುತ್ತಾರೆ ಸೋಮನಾಥ್‌ ಗುರುಪ್ಪನವರ. ಅವರು ಮಂಜುನಾಥ್‌ ಕುಣಿಗಲ್‌ ಅವರ “ದೂರ ದೇಶದ ದೇವರು” ಕೃತಿ ಕುರಿತು ಬರೆದ ವಿಮರ್ಶೆ

ಮಂಜುನಾಥ್ ಕುಣಿಗಲ್ ಅವರ ದೂರದೇಶದ ದೇವರು ಕಥಾ ಸಂಕಲನವನ್ನು ಓದಿ ಮುಗಿಸಿದೆ ಅತ್ಯಂತ ಖುಷಿ ಕೊಟ್ಟ ಸಂಕಲನ. ಹಾಗೂ ಈ ಕಥಾ ಸಂಕಲನಕ್ಕೆ ರಾಘವೇಂದ್ರ ಪಾಟೀಲ್ ಕಥಾ ಪುರಸ್ಕಾರ ಸಿಕ್ಕಿದ್ದು ಇನ್ನು ವಿಶೇಷ ಹಾಗೂ ಓದಲೇ ಬೇಕೆಂಬ ಹಂಬಲ ಇನ್ನು ಹೆಚ್ಚಾಯಿತು. ಇಲ್ಲಿ ಒಟ್ಟಾರೆ ಎಂಟು ಕಥೆಗಳಿದ್ದು. ಎಲ್ಲಾ ಕಥೆಗಳು ತಮ್ಮ ತಮ್ಮ ವಿಷಯದಿಂದ ವಿಶೇಷ ಹಾಗೂ ಹೊಸತನದಿಂದ ಕೂಡಿದೆ.

ಇಲ್ಲಿನ ಬಹುತೇಕ ಕಥೆಗಳು ಭಾರತೀಯ ಪ್ರಪಂಚ ಬಿಟ್ಟು ಬೇರೆ ಪ್ರಪಂಚದಲ್ಲಿ ನಡೆಯುವುದರಿಂದ ನಮಗೆ ಹೊಸವು ಹಾಗೂ ವಿಶೇಷ ಎಂದೆ ಅನಿಸುತ್ತದೆ. ಇಲ್ಲಿ ಪ್ರತಿ ಕಥೆಗಳಲ್ಲಿ ಲೇಖಕರ ದಟ್ಟ ಅನುಭವ ಹಾಗೂ ಅವರ ಕಥೆ ಹೇಳುವ ಪರಿ ತುಂಬಾ ಆಪ್ತವಾಗಿದೆ. ದೂರ ದೇಶದ ದೇವರು ಕಥೆಯಲ್ಲಿ ಕಾಣದ ಕೈ ಪವಾಡ ಕೃತಜ್ಞತೆ ಹೇಳುವ ಆತುರ ಹಾಗೂ ಮನುಷ್ಯನ ಅಂತರಾಳದ ಸಂಘರ್ಷ ಕೆಲವು ಪ್ರಮುಖ ವಿಚಾರಗಳು ವಿಭಿನ್ನವಾಗಿ ಹೇಳಲಾಗಿದೆ. ವಿಷ್ಣು ಸಹಸ್ರನಾಮ ಕಥೆಯಲ್ಲಿ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ನಂಬಿಕೆ ಮತ್ತು ವಾಸ್ತವದ ನಡುವೆ ಇರುವ ದ್ವಂದ್ವವನ್ನು, ಗಂಡಸಿನ ಕ್ರೌರ್ಯ, ಹಾಗೂ ಹೆಣ್ಣಿನ ತಾಯಿತನದ ಕರುಳನ್ನು, ಬಹಳ ಸೂಕ್ಷ್ಮವಾಗಿ ಎತ್ತಿ ಹಿಡಿಯಲಾಗಿದೆ, ದೇವರಿಗೂ ಬಹಿಷ್ಕಾರ ಎಂಬ ಕತೆಯಲ್ಲಿ ಜಾತಿ ಸಂಕೀರ್ಣತೆಯನ್ನು ಅದರ ಕ್ರೌರ್ಯವನ್ನು ತುಂಬಾ ಆದ್ರವಾಗಿ ಇಲ್ಲಿ ಲೇಖಕರು ತಂದಿದ್ದಾರೆ.

ಮಸಣದೂರು ಕಥೆ ಕೂಡ ತುಂಬಾ ಭಾವನಾತ್ಮಕವಾಗಿದೆ ಮತ್ತು ಅಲ್ಲಿ ಬರುವ ಅಮ್ಮ ಮತ್ತು ಗುಂಡನ ಪಾತ್ರ ಸದಾ ನೆನಪಿನಲ್ಲಿ ಉಳಿಯುವುದು. ಸರಿ ರಾತ್ರಿ ಹೆಣ್ಣು ಇದೊಂದು ವಿಶೇಷ ಕತೆ ಎಂದೇ ನನಗೆ ಅನಿಸಿದೆ. ಇದೊಂದು ರೀತಿ ಖುಷಿಯನ್ನು ನೀಡುತ್ತದೆ. ಹಸಿವಿನ ಓಟ ಈ ಕಥೆಯಲ್ಲಿ ಬರುವ ಗಂಗಕ್ಕ ತುಂಬಾ ಕಾಡುತ್ತಾಳೆ. ಲೇಖತನ ಸಿನಿಮಾ ಅನುಭವ ತುಂಬಾ ಮಜವಾಗಿತ್ತು. ಅಧ್ಯಾತ್ಮವು ಅಪಘಾತವು ಈ ಕಥೆಯಂತೂ ತುಂಬಾ ವಿಶೇಷವಾಗಿದೆ ಮೊದಮೊದಲು ಇಲ್ಲಿ ಏನು ಹೇಳಲು ಹೊರಟಿದ್ದಾರೆ ಎಂಬುವ ಗೊಂದಲ ಉಂಟಾಗುತ್ತ ಮುಂದೆ ನಿಜವಾದ ಕಥೆ ತಿಳಿಯುತ್ತಾ ಹೋಗುತ್ತದೆ ಈ ಕತೆಯಲ್ಲಿ ವಿಶೇಷವಾಗಿ ನಂಬಿಕೆಯೊಂದಿಗಿನ ದ್ವಂದ್ವವನ್ನು ಮತ್ತು ಆಧ್ಯಾತ್ಮದ ಕುರಿತು ಸಣ್ಣ ಜಿಜ್ಞಾಸೆಯನ್ನು ಇಲ್ಲಿ ನೋಡಬಹುದಾಗಿದೆ. ಕೊನೆಯ ಕತೆ ಬಲಿ ಪಶು ಇದಂತೂ ನನಗೆ ತುಂಬಾ ಇಷ್ಟವಾದ ಕಥೆ. ಯುದ್ಧ ಯುದ್ಧದ ನೋವು ಅಲ್ಲಿಯ ಸಂಘರ್ಷ ಕರಾಳತೆ ಯುದ್ಧವು ಎಲ್ಲರನ್ನು ಸಂಕಷ್ಟದೆಡೆಗೆ ಅಶಾಂತಿಗಳಿಗೆ ತಳ್ಳುತ್ತದೆ ಆದರೆ ಯುದ್ಧದಿಂದ ಹೆಚ್ಚು ನೋವಿನ ಪಾಲುದಾರರು ಹೆಂಗಸರು ಮತ್ತು ಮಕ್ಕಳೇ.

ಈ ಕಥೆಯಲ್ಲಿ ಬರುವ ಹೆಣ್ಣು ಯುದ್ಧದ ವಿರುದ್ಧ ಹೋರಾಡುವುದು ಬಹಳ ವಿಶೇಷವಾಗಿ ಮೂಡಿ ಬಂದಿದೆ. ಇದೊಂದು ಹೊಸ ರೀತಿಯಾದ ಹೋರಾಟ. ಹಲವಾರು ಯುದ್ಧ ಸಂಬಂಧಿ ವಿಚಾರಗಳನ್ನು ಈ ಕಥೆ ಹೇಳುತ್ತದೆ. ಒಟ್ಟಾರೆಯಾಗಿ ನನಗೆ ತುಂಬಾ ಇಷ್ಟವಾದ ಕಥೆ ಇದು. ಮಂಜುನಾಥ್ ಅವರು ವಿಶಿಷ್ಟವಾದ ಹಾಗೂ ಹೊಸ ರೀತಿಯ ಕಥೆಗಳನ್ನು ಹೇಳಿದ್ದಾರೆ. ಬರವಣಿಗೆ ಕೂಡ ತುಂಬಾ ಸರಳವಾಗಿ ಹಾಗೂ ಆಳವಾಗಿದೆ. ಕೆಲವೊಂದು ಕಥೆಗಳು ನಮ್ಮನ್ನು ತಡೆದು ನಿಲ್ಲಿಸುವಷ್ಟು. ಇವರ ಕತೆಗಳಲ್ಲಿನ ಪರಿಸರ ಹೊಸದು ಹಾಗೂ ಇಲ್ಲಿ ಬರುವ ಪಾತ್ರಗಳು ಕೂಡ ಅಷ್ಟೇ ಹೊಸತನದಿಂದ ಕೂಡಿವೆ. ಒಟ್ಟಾರೆಯಾಗಿ ಕನ್ನಡ ಲೋಕಕ್ಕೆ ಹೊಸ ಅನುಭವವನ್ನು ನೀಡುವ ಕತೆಗಾರರು ಎಂದೆ ಹೇಳಬಹುದು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...