Date: 06-11-2023
Location: ಬೆಂಗಳೂರು
“ನಾವಾಸನ ಭಂಗಿಯು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೆ ಕಿಬ್ಬೊಟ್ಟೆಯಲ್ಲಿನ ಕೊಬ್ಬಿನಂಶ ಕರಗಲು ಸಹಾಯಕವಾಗಿದೆ. ಪರಿವೃತ್ತ ಉತ್ಕಟಾಸನ ಆಸನವು ಜಠರದುರಿತ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಉತ್ತಮವಾದ ಆಸನವಾಗಿದೆ,” ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ವಿವರಿಸಿದ್ದಾರೆ.''
ನಾವಾಸನ
ನಾವ ಎಂದರೆ ದೋಣಿ
ಆಸನ ಎಂದರೆ ಭಂಗಿ
ನಾವಾಸನ ಮಾಡುವ ವಿಧಾನ :
1) ಎರಡು ಕಾಲುಗಳನ್ನು ಮುಂದೆ ಚಾಚಿ ನೇರವಾಗಿ ಕುಳಿತುಕೊಳ್ಳಬೇಕು.
2) ನಂತರ ಎರಡು ಕೈಗಳನ್ನು ಪೃಷ್ಠಕ್ಕಿಂತ ಹಿಂದೆ ತೆಗೆದುಕೊಂಡು ನೆಲಕ್ಕೆ ಒತ್ತಬೇಕು. ಮುಂದೆ ಚಾಚಿರುವ ಎರಡು ಕಾಲುಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಿ 60 ಡಿಗ್ರಿಯಷ್ಟು ತೆಗೆದುಕೊಂಡ ನಂತರ ಒಂದೊಂದೇ ಕೈಯನ್ನು ಮಂಡಿಯ ಕಡೆಗೆ ಮುಂದೆ ಚಾಚಬೇಕು.
3) ಈಗ ಕೇವಲ ಎರಡು ಪೃಷ್ಠಗಳ ಮೇಲೆ ಮಾತ್ರ ಕುಳಿತುಕೊಳ್ಳಬೇಕು. ಶರೀರ ದೋಣಿಯ ಆಕೃತಿಯಲ್ಲಿ ಬರಬೇಕು. ಈ ಸ್ಥಿತಿಯಲ್ಲಿ ಸಹಜವಾದ ಉಸಿರಾಟ ಕ್ರಿಯೆ ಇರಬೇಕು.
4) ನಂತರ ಎರಡು ಕಾಲುಗಳನ್ನು ಕೆಳಗಿಳಿಸಿ ಕೈಗಳನ್ನು ಮುಂದೆ ಚಾಚಿ, ವಿಶ್ರಾಂತಿ ಪಡೆಯಬಹುದು.
ನಾವಾಸನ ಪ್ರಯೋಜನಗಳು:
1) ನಾವಾಸನದಿಂದ ನಾಭಿಯ ಭಾಗದ ಎಲ್ಲಾ ಅವಯವಗಳು ಉತ್ತೇಜನಗೊಳ್ಳುತ್ತವೆ.
2) ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
3) ಒತ್ತಡದಿಂದ ನಿರಾಳವಾಗಲು ನೆರವಾಗುತ್ತದೆ.
4) ಕಿಬ್ಬೊಟ್ಟೆಯಲ್ಲಿನ ಕೊಬ್ಬಿನಂಶ ಕರಗಲು ಸಹಾಯಕವಾಗಿದೆ.
5) ಮಲಬದ್ಧತೆ ದೂರವಾಗಿಸುತ್ತದೆ.
6) ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸುತ್ತದೆ.
....
ಪರಿವೃತ್ತ ಉತ್ಕಟಾಸನ
ಪರಿವೃತ್ತ - ತಿರುಗಿದ ಅಥವಾ ತಿರುಚಿದ
ಉತ್ಕಟ - ಶಕ್ತಿಯುತ ಅಥವಾ ಉಗ್ರ ಅಥವಾ ತೀವ್ರ
ಆಸನ - ಭಂಗಿ
ಪರಿವೃತ್ತ ಉತ್ಕಟಾಸನ ಮಾಡುವ ವಿಧಾನ :
1) ಮೊದಲು ತಾಡಾಸನದಲ್ಲಿ ನಿಂತುಕೊಳ್ಳಬೇಕು.
2) ನಂತರ ಎರಡೂ ಕಾಲುಗಳನ್ನು ಕೂಡಿಸಿ ಮೊಣಕಾಲನ್ನು ಮಡಚಿ ಎಡಬದಿಗೆ ದೇಹದ ಭಾಗವನ್ನು ತಿರುಗಿಸಬೇಕು.
3) ಮೊಣಕಾಲಿಗೆ ಮೊಣಕೈ ತಾಗಿರಬೇಕು
4) ದೇಹದ ಸಂಪೂರ್ಣ ಭಾಗವನ್ನು ತಿರುಗಿಸಬೇಕು.
5) ನಂತರ ಎರಡೂ ಕೈಗಳು ನಮಸ್ಕಾರ ಮುದ್ರೆಯಲ್ಲಿ ಇರಬೇಕು.
6) ನಂತರ ಎರಡೂ ಭುಜಗಳು ಸಮನಾಗಿರಬೇಕು.
7) ಉಸಿರಾಟದ ಕ್ರಿಯೆ ಸಹಜವಾಗಿರಬೇಕು.
8) ಎರಡೂ ಮೊಣಕಾಲುಗಳು ಚಿತ್ರದಲ್ಲಿರುವಂತೆ ಮಡಚಿರಬೇಕು.
ಪರಿವೃತ್ತ ಉತ್ಕಟಾಸನದ ಪ್ರಯೋಜನಗಳು:
1) ಕಾಲುಗಳು ಬಲಿಷ್ಠಗೊಳ್ಳುತ್ತವೆ.
2) ಬೆನ್ನುಮೂಳೆ ಶಕ್ತಿಯುತವಾಗುತ್ತದೆ.
3) ಜಠರದುರಿತ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಉತ್ತಮವಾದ ಆಸನವಾಗಿದೆ.
4) ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ.
-ಚೈತ್ರ ಹಂಪಿನಕಟ್ಟಿ
chaitrah8989@gmail.com
''ಕನ್ನಡ ಪದಕೋಶದ ಬಗೆಗೆ ತುಸು ಪರಿಚಯವನ್ನು ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಕನ್ನಡದ ಪದಕೋಶ ಎಶ್ಟು ದೊಡ್ಡದು? ...
''ಸೋಜಿಗದ ಸಂಗತಿ ಎಂದರೆ ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ತತ್ವಪದಗಳ ಮಹೋನ್ನತ ಕಾಲಘಟ್ಟವನ್ನು ಗುರುತಿ...
“ಕಾವ್ಯವೇ ಎಲ್ಲ ಪ್ರಕಾರಗಳನ್ನು ಬ್ಲಾಕ್‌ಹೋಲ್ ಥರ ನುಂಗಿ ಬಿಟ್ಟಿದೆ. ನಮ್ಮ ಸೂಕ್ತಿ ಸುಧಾರ್ಣವ, ಕಾವ್ಯ ಸಾರ...
©2023 Book Brahma Private Limited.