ನವರಸಗಳು ಕಲಾತ್ಮಕತೆಯ ಅಭಿವ್ಯಕ್ತಿಗಳನ್ನು ವಿಸ್ತರಿಸುತ್ತದೆ: ಟಿ.ಎಸ್.‌ ನಾಗಾಭರಣ

Date: 18-03-2023

Location: ಬೆಂಗಳೂರು


ಬೆಂಗಳೂರಿನ ಇನ್ಫೋಸಿಸ್‌ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ವತಿಯಿಂದ ಶನಿವಾರದಂದು ‘ಬೊಂಬೆಹಬ್ಬ- ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಏಳನೇ ದಿನದ ಸಮಾರೋಪ ಕಾರ್ಯಕ್ರಮವು ಭಾರತೀಯ ವಿದ್ಯಾಭವನದಲ್ಲಿ ನಡೆಯಿತು.

ನಟ, ನಿರ್ದೇಶಕ ಟಿ.ಎಸ್.‌ ನಾಗಾಭರಣ ಅವರು ‘ಸಿನಿಮಾಗಳಲ್ಲಿ ನವರಸಗಳ ಅಭಿವ್ಯಕ್ತಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ನವರಸಗಳ ಪ್ರಕಾರವೇ ಕಲಾತ್ಮಕತೆಯ ಜೀವಾಳ’: ಟಿ.ಎಸ್.‌ ನಾಗಾಭರಣ, ‘ಭಾರತೀಯ ಸಿನಿಮಾರಂಗ ಎಂಬುವುದೇ ಬಹಳ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಭಾರತೀಯ ಸಿನಿಮಾ ಎಂದರೇ, ಕೇವಲ ಹಿಂದಿ ಸಿನಿಮಾಗಳು ಎಂಬ ಅಪನಂಬಿಕೆ ಇದೆ ಇದನ್ನು ನಾವು ಮೊದಲು ತೊಲಗಿಸಬೇಕು. ನವರಸಗಳ ಪ್ರಕಾರವೇ ಕಲಾತ್ಮಕತೆಯ ಜೀವಾಳವಾಗಿದೆ. ಹಾಸ್ಯ, ಭೀಭತ್ಸ, ರೌದ್ರ, ಭಯನಕ, ವೀರ, ಶೃಂಗಾರ, ಶಾಂತ ಈ ನವರಸಗಳು ಕಲಾತ್ಮಕತೆಯ ಅಭಿವ್ಯಕ್ತಿಗಳನ್ನು ವಿಸ್ತರಿಸುವ ಪಾತ್ರವನ್ನು ಶಕ್ತಿಯುತವಾಗಿ ನಿರ್ವಹಿಸಿದೆ. ಜೀವ ಸಾಧ್ಯತೆ ಒಳಗಡೆ ಕಂಡುಬರುವ ಅತ್ಯಂತ ಸರಳ ರಸಗಳೇ ಈ ನವರಸಗಳು’ ಎಂದರು.

‘ಪ್ರದರ್ಶನ ಕಲೆಗಳು ಜನರ ಜೀವನದಲ್ಲಿ ವಿಭಿನ್ನ ಪಾತ್ರವನ್ನು ವಹಿಸುತ್ತದೆ. ಸಿನಿಮಾದಂತಹ ನೂತನ ತಂತ್ರಜ್ಞಾನ ಬಂದಾಗ ಈ ಪ್ರದರ್ಶನ ಕಲೆಗಳಿಗೆ ಹೊಸ ಆಯಾಮಗಳು ಬಂದವು. ಆದರೂ ಸಿನಿಮಾಗಳಲ್ಲಿಯು ನವರಸಗಳ ಪಾತ್ರ ಅಪಾರವಾಗಿದೆ. ಪೌರಾಣಿಕ ಸಿನಿಮಾಗಳ ಕಾಲ ಮುಗಿದ ಮೇಲೆ ಪ್ರಾರಂಭವಾದದ್ದು ಸಾಮಾಜಿಕ ಸಿನಿಮಾಗಳ ಕಾಲ. ಈ ಕಾಲದಲ್ಲಿ ನವರಸಗಳ ಬಳಕೆ ಹೆಚ್ಚಿದ್ದವು. ಹೀಗೆ ಸಿನಿಮಾ ರಂಗಗಳಲ್ಲಿ ಬೆಳವಣಿಗೆ ಆದ ಹಾಗೆ ಶೃಂಗಾರ ರಸಗಳ ಬಳಕೆಯು ಜಾಸ್ತಿಯಾಯಿತು. ಇತ್ತೀಚಿನ ದಿನಗಳಲ್ಲಿ ಶೃಂಗಾರ ರಸಗಳ ಬಳಕೆ ಜಾಸ್ತಿಯಾಗಿದ್ದು, ಭಾವಗಳ ಬಳಕೆ ಕಡಿಮೆಯಾಗಿರುವುದು ವಿಷಾದನೀಯ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ನಿರ್ದೇಶಕಿ ಶ್ರುತಿ ಕುರಾನ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ‘ದೇವಿ ಮಹಾತ್ಮೆ ಯಕ್ಷಬೊಂಬೆಯಾಟ’ವು ಕಾಸರಗೋಡಿನ ಕೆ.ವಿ. ರಮೇಶ್‌ ಅವರ ನಿರ್ದೆಶನದಲ್ಲಿ ಮೂಡಿಬಂತು.

ಕಾರ್ಯಕ್ರಮವನ್ನು ಫೇಸ್ ಬುಕ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...
ಕಾರ್ಯಕ್ರಮವನ್ನು ಯುಟ್ಯೂಬ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...




MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...