“ಒಳಗಣ ಅನಂತ ಮತ್ತು ಹೊರಗಣ ಅನಂತ”

Date: 03-11-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಈಚೀಚೆ, ಇತ್ತೀಚೆ. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಇಂಗ್ಲೆಂಡ್ ನ ಇನ್ಸ್ಟಾಲೇಷನ್ ಆರ್ಟ್ ಕಲಾವಿದ ಆಂಟನಿ ಗೋಮ್ಲಿ ಅವರ ಕಲೆಯ ಕುರಿತು ಬರೆದಿದ್ದಾರೆ.

ಕಲಾವಿದ: ಆಂಟನಿ ಗೋಮ್ಲಿ (Antony Gormley)
ಜನನ: 30 ಆಗಸ್ಟ್, 1950
ಶಿಕ್ಷಣ: ಸ್ಲೇಡ್ ಸ್ಕೂಲ್ ಆಫ್ ಫೈನ್ ಆರ್ಟ್, ಲಂಡನ್
ವಾಸ: ಲಂಡನ್, ಇಂಗ್ಲಂಡ್
ಕವಲು: ಕಾನ್ಸೆಪ್ಚುವಲ್ ಆರ್ಟ್, ಡಿಜಿಟಲ್ ಕ್ಯೂಬಿಸಂ
ವ್ಯವಸಾಯ: ಇನ್ಸ್ಟಾಲೇಷನ್ ಆರ್ಟ್, ಪಬ್ಲಿಕ್ ಸ್ಕಲ್ಪ್ಚರ್ಸ್

ಆಂಟನಿ ಗೋಮ್ಲಿ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆಂಟನಿ ಗೋಮ್ಲಿ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲಾವಿದ ಮತ್ತು ನೋಡುಗ ಬೇರೆ ಬೇರೆ ಎನ್ನುವುದು ನಮ್ಮಕಾಲದ ಅತ್ಯಂತ ಗಂಭೀರ ತಪ್ಪು ಕಲ್ಪನೆ. ಸಂಸ್ಕೃತಿ ನಮ್ಮ ಮೇಲೆ ಸಾಂಸ್ಥಿಕವಾಗಿ ಹೇರಲ್ಪಡುತ್ತದೆ ಎಂಬುದು ಕಳೆದ 250 ವರ್ಷಗಳ ಹಿಂದಿನ ನಂಬಿಕೆ. ಅದು ತೀರಾ ಹೊಸದು. ಹಳೆಯ ಸ್ಟೋನ್ ಹೆಂಜ್, ಸಾರನಾಥದ ಸ್ಥೂಪ ಪೊಲನ್ನಾರುವದ ಮಲಗಿದ ಬುದ್ಧ ಕೂಡ ಕಲೆಯೇ. ಒಂದು ಜಾಗದ ಲಭ್ಯ ವಸ್ತುಗಳು, ಚೈತನ್ಯವನ್ನು ಬಳಸಿಕೊಂಡು ಒಂದು ಕಲಾಕೃತಿ ನಿರ್ಮಾಣ ಆಗಿ ಅದಲ್ಲಿ ನೆಲೆ ನಿಂತ ಬಳಿಕ, ಕಾಲಕಾಲಕ್ಕೆ ಅದನ್ನು ಸಂಧಿಸುವ ನೊಡುಗನೊಂದಿಗೆ ಆ ಕಲಾಕೃತಿಗೆ ಒಂದು ಸಂವಾದ ಬೆಳೆಯುತ್ತದೆ. ಹಾಗೆ ಸಮುದಾಯದ ಜೊತೆ ಹೆಚ್ಚು ಸ್ಪಂದಿಸುವ ನನ್ನ ಕಲಾಕೃತಿಗಳೆ ನನಗೆ ಮಹತ್ವದವು – ಇದೇ ಜುಲೈ ತಿಂಗಳಲ್ಲಿ (2020) ಹೀಗೆಂದದ್ದು ಮಹತ್ವದ ಬ್ರಿಟಿಷ್ ಕಲಾವಿದ ಆಂಟನಿ ಗೋಮ್ಲಿ. ಕಾಲಿಗೆ ಚಕ್ರಕಟ್ಟಿಕೊಂಡಂತೆ ಕಳೆದ 30 ವರ್ಷ ಜಗದಗಲ ಸುತ್ತಾಡುತ್ತಿದ್ದ ಗೋಮ್ಲಿ ಈಗ ನಾರ್ಫೊಕ್ ನಲ್ಲಿ ತನ್ನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲೇ ಹುಟ್ಟಿದ ಮೊಮ್ಮಗಳ ಚಟುವಟಿಕೆಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಗಡಿಬಿಡಿಯ ಬದುಕು ವಿನಾಶಕ ಅದು ಬದಲಾಗಬೇಕು ಎಂಬುದು ಅವರ ಕೊರೊನಾ ಕಾಲದ ಅರಿವು.

ಐರಿಷ್ ತಂದೆ, ಜರ್ಮನ್ ತಾಯಿಗೆ ಜನಿಸಿದ ಏಳು ಮಕ್ಕಳಲ್ಲಿ ಅತ್ಯಂತ ಕಿರಿಯ ಆಂಟನಿ ಗೋಮ್ಲಿ. ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನಲ್ಲಿ ಕಲಾ ಇತಿಹಾಸ ಕಲಿತ ಬಳಿಕ ಬೌದ್ಧ ಧರ್ಮದಲ್ಲಿ ಆಸಕ್ತಿಯ ಕಾರಣದಿಂದಾಗಿ ಭಾರತ-ಶ್ರೀಲಂಕಾಗಳಲ್ಲಿ ವ್ಯಾಪಕವಾಗಿ ತಿರುಗಾಡಿದ (1971-74) ಗೋಮ್ಲಿ, ಹಿಂದಿರುಗಿ ಸ್ಲೇಡ್ ಸ್ಕೂಲ್ ಆಫ್ ಫೈನ್ ಆರ್ಟ್ ನಲ್ಲಿ ತಮ್ಮ ಕಲಾಪದವಿಯನ್ನು ಪೂರೈಸುತ್ತಾರೆ. ಅವರ ಮೊದಲ ಕಲಾಪ್ರದರ್ಶನ ನಡೆದುದು ಲಂಡನ್ ನ ವೈಟ್ ಚಾಪೆಲ್ ಕಲಾಗ್ಯಾಲರಿಯಲ್ಲಿ 1981ರಲ್ಲಿ.

ಮನುಷ್ಯ ದೇಹದ/ಮನಸ್ಸಿನ ಒಳಗಣ ಜಗತ್ತು ಮತ್ತು ಹೊರಗಣ ವಾಸ್ತವ ಜಗತ್ತುಗಳಲ್ಲಿರುವ ಜಾಗವಿಸ್ತಾರಗಳ ನಡುವಿನ ಸಂಬಂಧಗಳೇ ಗೋಮ್ಲಿ ಕಲಾಕೃತಿಗಳ ಮುಖ್ಯ ವಸ್ತು. ಕಬ್ಬಿಣ, ಉಕ್ಕು, ಸೀಸ, ಮಣ್ಣುಗಳನ್ನು ಬಳಸಿಕೊಂಡು ಗೋಮ್ಲಿ ರಚಿಸಿದ ಮನುಷ್ಯಾಕಾರಗಳು ಮತ್ತು ಬೃಹತ್ ಗಾತ್ರದ ಸಾರ್ವಜನಿಕ ಶಿಲ್ಪಗಳು ಜಗದ್ವಿಖ್ಯಾತ. 66ಅಡಿ ಎತ್ತರ, 177ಅಡಿ ಅಗಲದ THE ANGEL OF THE NORTH (1998) ಅವರ ಮಹತ್ವದ ಶಿಲ್ಪಗಳಲ್ಲೊಂದು ಮತ್ತು ಇಂಗ್ಲಂಡಿನ ಅತಿದೊಡ್ಡ ಶಿಲ್ಪ ಕೂಡ ಹೌದು.

ಲಂಡನ್ ನ ಟ್ರಫಾಲ್ಘರ್ ಚೌಕದಲ್ಲಿ ಪ್ರಸಿದ್ಧ 'Fourth Plinth'ಗೆ ತನ್ನ ONE & OTHER (2009) ಕಲಾಕೃತಿಯಾಗಿ, ಸಹಕಲಾವಿದರಿಗೆ ಆ ಪೀಠದ ಮೇಲೆ (ಈ ಪೀಠ ಮೂಲತಃ ಎರಡನೇ ಎಲಿಜಬೆತ್ ರಾಣಿ ಕುದುರೆ ಸವಾರಿ ಮಾಡುವ ಶಿಲ್ಪ ಇರಿಸಲು ಸಿದ್ಧಗೊಂಡದ್ದಂತೆ!) ಮನಸ್ಸಿಗೆ ಬಂದದ್ದು ಮಾಡಲು ಹೇಳಿದ್ದು ಕೂಡ ಅವರ ಪ್ರಸಿದ್ಧ ಕಲಾಯೋಜನೆಗಳಲ್ಲೊಂದು.

BED (1980 - 81), HORIZON FIELD HAMBURG (2012), MOULD (1989/1990), DOMAIN FIELD (2003) QUANTUM CLOUD (2000) ಗೋಮ್ಲಿ ಅವರ ಗಮನಾರ್ಹ ಕಲಾಕೃತಿಗಳಲ್ಲಿ ಕೆಲವು.

ವ್ಯಕ್ತಿಯ ಬಗ್ಗೆ ಇದ್ದಷ್ಟೇ ಕುತೂಹಲವನ್ನು ಸಮಷ್ಠಿಯ ಬಗ್ಗೆಯೂ ತೋರಿದ ಆಂಟನಿ ಅವರ 1900ರ FIELD ಸರಣಿಯ ಚಿತ್ರಗಳು ಕೂಡ ಕುತೂಹಲಕರ. ಜಗತ್ತಿನ ಎಲ್ಲೆಡೆಗಳಲ್ಲಿ ಸಾಂಪ್ರದಾಯಿಕ ಮಣ್ಣಿನ ಕೆಲಸಗಾರರನ್ನು ಕರೆಸಿ, ಅವರ ಕೈಗಳಿಂದ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಪ್ರದರ್ಶನಕ್ಕಿರಿಸಲು ಹೇಳಲಾಗುತ್ತದೆ. ಈ ತನಕ ಐದು ಬಾರಿ ಆಗಿರುವ ಈ ಸರಣಿಯ ಪ್ರದರ್ಶನದಲ್ಲಿ ಇತ್ತೀಚೆಗಿನದು ಚೀನಾದಲ್ಲಿ ನಡೆದದ್ದು (2013). ಅಲ್ಲಿ ನೂರಾರು ಮಂದಿ 125ಟನ್ ಆವೆಮಣ್ಣು ಬಳಸಿ, 2,10,000 ಮಣ್ಣಿನ ಮೂರ್ತಿಗಳನ್ನು ನಿರ್ಮಿಸಿದರು. ಹಳೆಯ CLAY AND THE COLLECTIVE BODY (2009) ಕಲಾಕೃತಿಯಲ್ಲಿ 1300ಮಂದಿ ಹತ್ತು ದಿನಗಳ ಕಾಲ 4 ಘನಮೀಟರ್ ಗಾತ್ರದ ಆವೆಮಣ್ಣಿನ ರಾಶಿಯಿಂದ ಲಕ್ಷಾಂತರ ಕಲಾಕೃತಿಗಳನ್ನು ರಚಿಸಿದರು. ಕಲಾಕೃತಿ ಎಂಬುದು ಪೂರ್ಣಗೊಂಡ ಸರಕು ಎಂಬ ಸಿದ್ಧ ಮಾದರಿಯನ್ನೇ ನಿರಾಕರಿಸುವ ಈ ಸರಣಿ ವ್ಯಕ್ತಿಯಲ್ಲಿರುವಷ್ಟೇ ತೀವ್ರವಾಗಿ ಸಮಷ್ಠಿಯ ನಡುವಿನ ರಾಜಕೀಯ-ಆರ್ಥಿಕ- ಈಸ್ಥೆಟಿಕ್ಸ್ ನ ಸಂಬಂಧಗಳನ್ನೂ ಗಾತ್ರ-ಸಂಖ್ಯೆಗಳನ್ನು ಮುಖಾಮುಖಿಯಾಗಿಸುತ್ತದೆ. ಕಳೆದ ನವೆಂಬರ್ ನಲ್ಲಿ (2019) ಎಸ್ಸೆಕ್ಸ್ ನಲ್ಲಿ ನಡೆದ ಫೀಲ್ಡ್ ಸರಣಿಯ ಪ್ರದರ್ಶನದಲ್ಲಿ ಆಂಟನಿ ಗೋಮ್ಲಿ ಕೇಳಿದ್ದು ಹೀಗೆ “We live in a time of mass migration and the issues of how we are going to achieve social justice in a time when money and goods are allowed absolute free passage globally and yet somehow people are not … why are we going backwards?”

ಅನಂತದ ಬಗ್ಗೆ ತನ್ನ ಕಲ್ಪನೆಗಳನ್ನು ಟೆಡ್ ಟಾಕ್ ನಲ್ಲಿ ಆಂಟನಿ ಗೋಮ್ಲಿ ವಿವರಿಸಿದ್ದು ಹೀಗೆ:

2019ರಲ್ಲಿ ಸ್ವಿಸ್ ಕಲಾವಿಮರ್ಶಕ ಹಾನ್ಸ್ ಅಲ್ರಿಕ್ ಆಬ್ರಿಸ್ತ್ ಅವರಿಗೆ ತನ್ನ ಕಲಾಪ್ರದರ್ಶನವೊಂದನ್ನು ವಿವರಿಸುತ್ತಿರುವ ಆಂಟನಿ ಗೋಮ್ಲಿ.

ಚಿತ್ರಗಳು:
ಆಂಟನಿ ಗೋಮ್ಲಿ ಅವರ ಫೋರ್ತ್ ಪ್ಲಿಂತ್ ಪ್ರಾಜೆಕ್ಟ್ ಭಾಗವಾಗಿ ಲೋಂಡ್ರಾ ಅವರ ಪ್ರದರ್ಶನ (2009). ಚಿತ್ರ: ಕ್ಲೇರ್ ರಿಚರ್ಡ್ಸನ್

ಆಂಟನಿ ಗೋಮ್ಲಿ ಅವರ ಏಂಜಲ್ ಆಫ್ ದಿ ನಾರ್ತ್ (1998)

ಆಂಟನಿ ಗೋಮ್ಲಿ ಅವರ ಸ್ಟಾಚ್ಯೂಸ್ ಅಟ್ ದ ಕ್ರಾಸ್ ಬಿ, ಚಿತ್ರ ಡಾನ್ ಮೆಕ್ ಫೀ

ಆಂಟನಿ ಗೋಮ್ಲಿ ಅವರ ಕ್ಲಿಯರಿಂಗ್ ಸರಣಿಯ ಕಲಾಕೃತಿ 4 (2005)

ಆಂಟನಿ ಗೋಮ್ಲಿ ಅವರ ಫೀಲ್ಡ್ ಸರಣಿಯ ಕಲಾಕೃತಿ ಸರಣಿಯ ಕಲಾಕೃತಿ (2003)

ಆಂಟನಿ ಗೋಮ್ಲಿ ಅವರ ಮ್ಯಾಟ್ರಿಕ್ಸ್ ಸರಣಿಯ ಕಲಾಕೃತಿ 3 (2019)

ಆಂಟನಿ ಗೋಮ್ಲಿ ಅವರ ಕ್ವಾಂಟಂ ಕ್ಲೌಡ್ XX (2000)

ಆಂಟನಿ ಗೋಮ್ಲಿ ಅವರ ಫೀಲ್ಡ್ ಸರಣಿಯ ಸ್ಲೀಪಿಂಗ್ ಫೀಲ್ಡ್ (2016)

ಆಂಟನಿ ಗೋಮ್ಲಿ ಅವರ ಸ್ಟೇ (2014)

ಈ ಅಂಕಣದ ಹಿಂದಿನ ಬರಹಗಳು:

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...