ಪಶ್ಚಿಮೋತ್ಥಾನಾಸನ ಹಾಗೂ ಬದ್ಧಕೋನಾಸನ

Date: 18-09-2023

Location: ಬೆಂಗಳೂರು


'ಪಶ್ಚಿಮೋತ್ಥಾನಾಸನ ಮೂತ್ರಪಿಂಡದ ವ್ಯವಸ್ಥೆ ಮತ್ತು ಮೇದೋಜ್ಜೀರಕ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೂಡ ಸಹಾಯ ಮಾಡುತ್ತದೆ.' ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ ಅವರು ಬುಕ್ ಬ್ರಹ್ಮ ಪ್ರಕಟಿಸುವ ತಮ್ಮ ಯೋಗ ಯೋಗಾ ಅಂಕಣದಲ್ಲಿ ಈ ಬಾರಿ ಪಶ್ಚಿಮೋತ್ಥಾನಾಸನ ಹಾಗೂ ಬದ್ಧ ಕೋನಾಸನಗಳ ಕುರಿತು ವಿವರಿಸಿದ್ದಾರೆ.

ಪಶ್ಚಿಮೋತ್ಥಾನಾಸನವನ್ನು ಬ್ರಹ್ಮಚರ್ಯಾಸನ ಎಂದು ಕರೆಯುವರು. ತ್ರ್ಯಂಗಮುಖೈಕ ಪಶ್ಚಿಮೋತ್ಥಾನಾಸನ ಮತ್ತು ಅರ್ಧಬದ್ಧ ಪಶ್ಚಿಮೋತ್ಥಾನಾಸನಗಳೆಂಬ ಅರ್ಥ ಇದರಲ್ಲಿವೆ.

ಪಶ್ಚಿಮೋತ್ಥಾನಾಸನ ಮಾಡುವ ವಿಧಾನ:

1) ಮೊದಲು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ದಂಡಾಸನದಲ್ಲಿ ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಿ.

2) ನಂತರ ಎರಡೂ ಕೈಗಳನ್ನು ತೊಡೆಯ ಮೇಲಿರಿಸಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ, ಎರಡೂ ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆ ಎತ್ತಿ.

3)ನಂತರ ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ ಕೈ ಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ. ನೆನಪಿಡಿ, ಮೊಣಕಾಲು ನೇರವಾಗಿರಲಿ.

4) ಇದೇ ಸ್ಥಿತಿಯಲ್ಲಿ ನಾಲ್ಕೈದು ಬಾರಿ ಉಸಿರಾಡಿ, ನಂತರ ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಮೇಲಕ್ಕೆ ಬನ್ನಿ.

5) ನಂತರ ಉಸಿರನ್ನು ಹೊರಹಾಕುತ್ತಾ ನಿಧಾನವಾಗಿ ಕೈಗಳನ್ನು ಕೆಳಗೆ ಇಳಿಸಿ, ವಿಶ್ರಾಂತಿ ತೆಗೆದುಕೊಳ್ಳಿ.

ಪ್ರಯೋಜನಗಳು :

1) ​ಜಠರದ ಸ್ನಾಯುಗಳು ಬಲಗೊಳ್ಳುತ್ತವೆ.

2)​ಪಶ್ಚಿಮೋತ್ಥಾನಾಸನ ಮಾಡುವುದರಿಂದ ಹೊಟ್ಟೆಗೆ ಬಿಗಿಯಾದ ಅನುಭವವಾಗುತ್ತದೆ. ಇದರಿಂದ ಜಠರದ ಸ್ನಾಯುಗಳು ಬಲಗೊಳ್ಳುತ್ತವೆ.

3)ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗಲು ಸಾಧ್ಯವಾಗುತ್ತದೆ.

4) ಮಧುಮೇಹ, ರಕ್ತದೊತ್ತಡ ನಿಯಂತ್ರಣ ಮಾಡಬಹುದು.

5) ಪಶ್ಚಿಮೋತ್ಥಾನಾಸನ ಮೂತ್ರಪಿಂಡದ ವ್ಯವಸ್ಥೆ ಮತ್ತು ಮೇದೋಜ್ಜೀರಕ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೂಡ ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹ ಈ ಆಸನ ಸಹಾಯಕವಾಗಿದೆ.

6) ​ಹೊಟ್ಟೆಯ ಬೊಜ್ಜು ಕರಗುತ್ತದೆ.

7)ಈ ಆಸನದಲ್ಲಿ ದೇಹದ ಭಾಗ ಸಂಪೂರ್ಣವಾಗಿ ಮುಂದಕ್ಕೆ ಭಾಗುವುದರಿಂದ ಹೊಟ್ಟೆ ಮತ್ತು ಸೊಂಟದ ಭಾಗಗಳಲ್ಲಿನ ಬೊಜ್ಜು ಕರಗುತ್ತದೆ. ದೇಹದ ತೂಕ ಇಳಿಸಿಕೊಳ್ಳುವವರು ಈ ಆಸನವನ್ನು ಮಾಡುವುದು ಒಳ್ಳೆಯದು. ಅಲ್ಲದೆ ಬೊಜ್ಜಿನಿಂದ ಕೂಡಿದ ದೇಹ ತೆಳುವಾಗಿ ಸುಂದರವಾಗಿಯೂ ಕಾಣಲು ಸಹಾಯಕವಾಗಿದೆ.

ಬದ್ಧ ಕೋನಾಸನ

ಈ ಪದವು ಸಂಸ್ಕೃತ ಬದ್ಧದಿಂದ ಬಂದಿದೆ, ಅಂದರೆ “ಬಂಧಿತ” ಕೋನ, ಅಂದರೆ “ಕೋನ” ಮತ್ತು ಆಸನ, ಅಂದರೆ “ಭಂಗಿ”

ಬದ್ಧಕೋನಾಸನ ಮಾಡುವ ವಿಧಾನ :

1) ಮೊದಲು ನೇರವಾಗಿ ಕುಳಿತುಕೊಂಡು ಎರಡು ಕಾಲುಗಳನ್ನು ಮಡಿಸಿ ತೊಡೆಯ ಹತ್ತಿರಕ್ಕೆ ತೆಗೆದುಕೊಳ್ಳಿ. ತೊಡೆಯ ಮೂಲದ ಹತ್ತಿರ ಹಿಮ್ಮಡಿಗಳು ಬರಬೇಕು.

2) ಎರಡು ಪಾದಗಳ ಅಂಗಾಲುಗಳನ್ನು ಮೇಲ್ಮುಖವಾಗಿ ತಿರುಗಿಸಬೇಕು. ಎರಡು ತೊಡೆಗಳು ಮತ್ತು ಮಂಡಿಗಳು ನೆಲಕ್ಕೆ ತಾಗಿರಬೇಕು. ಬೆನ್ನು ನೇರವಾಗಿರಬೇಕು. ದೃಷ್ಟಿ ನೇರವಾಗಿರಬೇಕು.

3) ನಂತರ ಕೈಗಳನ್ನು ಬಿಟ್ಟು ನಿಧಾನವಾಗಿ ಕಾಲುಗಳನ್ನು ಮುಂದೆ ಚಾಚಿ.

ಪ್ರಯೋಜನಗಳು:

1)ಬದ್ದ ಕೋನಾಸನವನ್ನು ಮಹಿಳೆಯರಿಗೆ ಆ ಭಗವಂತ ನೀಡಿದ ವರವೆಂದೇ ಹೇಳಬಹುದು. ಗರ್ಭಿಣಿಯರು ನಿತ್ಯ ಈ ಆಸನ ಮಾಡುವುದರಿಂದ ಸಹಜ ಹೆರಿಗೆ ಆಗುವುದು ಮತ್ತು ಪ್ರಸವ ವೇದನೆ ತುಸು ಕಮ್ಮಿ ಆಗುವುದು.

2) ಅಧಿಕ ರಕ್ತಸ್ರಾವ ನಿವಾರಣೆ ಆಗುವುದು. ಅಸಹಜ ಮುಟ್ಟಿನಿಂದ ಮುಕ್ತಿ ಪಡೆಯಬಹುದು. ಕಿಬ್ಬೊಟ್ಟೆ ಮತ್ತು ಕಟಿಯ ಭಾಗದಲ್ಲಿನ ಕೊಬ್ಬಿನಂಶ ಕರಗಿ ಹುರುಪು ಪಡೆಯಬಹುದಾಗಿದೆ.

3) ವೆರಿಕೋಸ್‌ ವೇಯನ್ಸ್‌ ದೂರ ಆಗುವುದು.

4) ಮೂತ್ರಪಿಂಡದ ಸಮಸ್ಯೆ ನಿವಾರಣೆ ಆಗುವುದು.

5) ಬೆನ್ನುಮೂಳೆ ಸಹ ಬಲಿಷ್ಠವಾಗುತ್ತದೆ.

~ಚೈತ್ರಾ ಹಂಪಿನಕಟ್ಟಿ
chaitrah8989@gmail.com

MORE NEWS

ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ

27-09-2023 ಬೆಂಗಳೂರು

''ಉರ್ದುವಿನ ಗಂಧಗಾಳಿಯೇ ಇಲ್ಲದ ಬೆಂಗಳೂರಿನಲ್ಲಿ ಅದಕ್ಕೇನು ಕೆಲಸ.? ಹೀಗೆ‌ ಇನ್ನೂ ಅನೇಕ ಅಕಾಡೆಮಿಗಳ ವಿಕ...

ಪಾದಹಸ್ತಾಸನ ಮತ್ತು ಶಶಾಂಕಾಸನ

26-09-2023 ಬೆಂಗಳೂರು

''ಶಶಾಂಕಾಸನವು ಸರಳವಾದ ಕ್ರಿಯಾತ್ಮಕ ಮುಂದಕ್ಕೆ ಬಾಗುವ ಭಂಗಿಯಾಗಿದ್ದು ಅದು ದೇಹ ಮತ್ತು ಮನಸ್ಸನ್ನು ವಿಶ್ರಾಂತಿ...

ರವಿ ನವಲಹಳ್ಳಿ ಅವರ ಅಂಬೇಡ್ಕರ್ ಅರಿವಿನ ಶಾಲೆ

25-09-2023 ಬೆಂಗಳೂರು

''ಬಡತನ, ಹಸಿವು, ಅನಕ್ಷರತೆ ಸ್ವಾನುಭಾವವಾದ ಮೇಲೆ ಅದನ್ನು ಹೋಗಲಾಡಿಸಲು ಪ್ರಯತ್ನಿಸುವುದು ಒಳ್ಳೆಯ ಕೆಲಸ ಆದರೆ ...