Date: 20-11-2023
Location: ಬೆಂಗಳೂರು
ಬೆಂಗಳೂರು: ಸಮನ್ವಿತ ಪ್ರಕಾಶನದಿಂದ ಲೇಖಕ ರಾಜಶೇಖರ ಜೋಗಿನ್ಮನೆ ಅವರ ‘ಕೇಳು ಧನಂಜಯ’ ಕಾದಂಬರಿಯ ಲೋಕಾರ್ಪಣಾ ಕಾರ್ಯಕ್ರಮವು 2023 ನ. 20 ಸೋಮವಾರದಂದು ನಗರದಲ್ಲಿ ನಡೆಯಿತು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, “ಒಬ್ಬ ಮನುಷ್ಯನು ನಕಾರಾತ್ಮಕ ಸಂಗತಿಗಳಿಂದ ದೂರವಿದ್ದಷ್ಟು ಆತ ಒಳ್ಳೆಯ ಮನುಷ್ಯನ್ನಾಗಿ ರೂಪುಗೊಳ್ಳಲು ಸಾಧ್ಯ. ನೆಮ್ಮದಿಯನ್ನು ಹರಸಿ ಹೋಗಬೇಕಾದರೆ ಪೂರ್ವಗ್ರಹ ಪೀಡಿತ ಅಂಶಗಳನ್ನು ದೂರವಿರಿಸಿ. ಅವುಗಳನ್ನು ಆವಾಹನೆ ಮಾಡಿಕೊಳ್ಳುತ್ತಾ ಹೋದರೆ ಮನಸ್ಸು ಕಲ್ಮಶವಾಗುತ್ತದೆ. ಇನ್ನು ಸಾಹಿತ್ಯದ ಓದು ಇದ್ದರೆ ಪೂರ್ವ ಗ್ರಹದಿಂದ ಹೊರಬಂದು ನೆಮ್ಮದಿಯನ್ನು ಕಾಣಲು ಸಾಧ್ಯ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃತಿಕಾರ ರಾಜಶೇಖರ ಜೋಗಿನ್ಮನೆ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕಥೆಗಾರ ಅಬ್ದುಲ್ ರಶೀದ್, ಪ್ರಕಾಶಕ ರಾಧಾಕೃಷ್ಣ ಕೌಂಡಿನ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು: ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಅವರ ಪರಿಕಲ್ಪನೆಯ ಡಾ. ರಾಜಶೇಖಕರ ಮಠಪತಿ (ರಾಗಂ) ಅವರ ಸಹಭಾಗಿತ್ವ...
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ ಪ್ರಕಟವಾಗಿದ್ದು, 2022ನೇ ಸಾಲಿಗೆ ಸಂಶ...
ಸಂವಿಧಾನ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಇಎಲ್ ಪರಿಶಿಷ್ಟಜಾತಿ/ವರ್ಗ ಕ್ಷೇಮಾಭಿವೃದ್ಧಿಸಂಘ ಆಯೋಜಿಸಿದ್ದ ಸಂವಿಧಾನ ದಿನಾಚರ...
©2023 Book Brahma Private Limited.