ವಾರದ ಲೇಖಕ ವಿಶೇಷದಲ್ಲಿ ವಚನ ಸಾಹಿತ್ಯ ಪಿತಾಮಹ ‘ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ’


ಬುಕ್ ಬ್ರಹ್ಮದ ವಾರದ ಲೇಖಕ ವಿಶೇಷದಲ್ಲಿ ಮೂಡಿಬಂದ ವಚನ ಸಾಹಿತ್ಯ ಪಿತಾಮಹ ‘ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ’ ಅವರ ಕುರಿತ ಒಂದು ನೀಳ ನೋಟ..

ಶಿಕ್ಷಕ ಗುರುಬಸಪ್ಪ ಹಾಗೂ ದಾನಾದೇವಿ ದಂಪತಿಗೆ 1880ರ ಜುಲೈ 2ರಂದು ಫಕೀರಪ್ಪ ಹಳಕಟ್ಟಿ ಅವರು ಜನಿಸಿದರು. ತಂದೆ ಗುರುಬಸಪ್ಪ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಆಗಿನ ಪ್ರಮುಖ ಪತ್ರಿಕೆಯಾದ 'ವಾಗ್ಬೂಷಣ'ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂತು.

1904ರಲ್ಲಿ ವಕೀಲಿ ವೃತ್ತಿಗಾಗಿ ಧಾರವಾಡದಿಂದ ವಿಜಯಪುರಕ್ಕೆ ಬಂದಿದ್ದ ಫಕೀರಪ್ಪ ವಕೀಲಿ ವೃತ್ತಿ ಜೊತೆಗೆನೇ ವಿಜಯಪುರ ನಗರಸಭೆ ಅಧ್ಯಕ್ಷರಾದರು. ಹೀಗೆ ಮರಾಠಿಮಯವಾಗಿದ್ದ ವಿಜಯಪುರದಲ್ಲಿ ಪ್ರಥಮವಾಗಿ ಕನ್ನಡ ಶಾಲೆಯನ್ನು ಕೂಡ ಆರಂಭಿಸಿದರು. ಅಖಿಲ ಭಾರತ ವೀರಶೈವ ಮಹಾಸಭೆಯ ಕರೆಯಂತೆ 1910ರಲ್ಲಿ ಬಿಜಾಪುರ ಲಿಂಗಾಯತ ಜಿಲ್ಲಾ ಶಿಕ್ಷಣ ಸಂಸ್ಥೆ ನೋಂದಣಿ ಮಾಡಿಸಿದರು. ನಂತರ ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ 1921ರಲ್ಲಿ ಭೂತನಾಳ ಕೆರೆಯನ್ನು ಕಟ್ಟಿಸಿದರು. 12ನೇ ಶತಮಾನದ ಶರಣ, ಕಾಯಕಯೋಗಿ ಸಿದ್ದರಾಮೇಶ್ವರರ ಸ್ಮರಣೆಯಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯನ್ನು ಧಾರ್ಮಿಕ ಚಟುವಟಿಕೆಗಳಿಗೆ ಆರಂಭಿಸಲು ಶುರು ಮಾಡಿದ್ರು. ಇದರ ಜೊತೆಗೆನೇ ಆರ್ಥಿಕ ಅನುಕೂಲತೆಗಾಗಿ ಶ್ರೀ ಸಿದ್ದೇಶ್ವರ ಬ್ಯಾಂಕ್‌ನ್ನು ಪ್ರಾರಂಭಿಸಿದರು ಫ.ಗು. ಹಳಕಟ್ಟಿಯವರು. ಇವರದು ವೈವಿಧ್ಯಮಯ ವ್ಯಕ್ತಿತ್ವ. ವಕೀಲರಾಗಿ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಅಷ್ಟಕ್ಕೆ ಸೀಮಿತರಾಗದೆ, ಸಮಾಜಮುಖಿ ಸಂಘ-ಸಂಸ್ಥೆಗಳನ್ನು ಆರಂಭಿಸುವ ಮೂಲಕ ಜನಮುಖಿಯಾದರು. ನಂತರದಲ್ಲಿ ಮುಂಬೈ ವಿಧಾನ ಪರಿಷತ್ತಿನ ಸದಸ್ಯ ಕೂಡ ಆಗಿದ್ದರು.

ಹಳಕಟ್ಟಿಯವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ನಿರಂತರ 35 ವರ್ಷಗಳ ಕಾಲ ಮನೆ-ಮಠಗಳಿಗೆ ತೆರಳಿ, ತಾಡೋಲೆಗಳನ್ನು ಸಂಗ್ರಹಿಸಿ. ಅದರಲ್ಲಿನ ಸಾಹಿತ್ಯವನ್ನು ಜನರಿಗೆ ತಲುಪಿಸಲು ಸ್ವತಃ 'ಹಿತಚಿಂತಕ ಮುದ್ರಣಾಲಯ' ಸ್ಥಾಪಿಸಿದರು. ತಾವೇ ಪೆಡಲ್ ಯಂತ್ರದಿಂದ ಕೈಯಾರೆ ಮುದ್ರಿಸಿದರು. 1926ರಲ್ಲಿ 'ಶಿವಾನುಭವ' ತ್ರೈಮಾಸಿಕ ಪತ್ರಿಕೆ ಹಾಗೂ 1927ರಲ್ಲಿ 'ನವಕರ್ನಾಟಕ' ವಾರಪತ್ರಿಕೆ ಹೊರತಂದರು. ಹಳಕಟ್ಟಿಯವರ 35 ವರ್ಷಗಳ ಪರಿಶ್ರಮದಿಂದ ವಿವಿಧ ಶರಣರ 10 ಸಾವಿರ ವಚನಗಳು ಹೊರಬಂದವು. ಇವರಿಗೆ ಸಾಹಿತ್ಯದ ಮೇಲೆ ಎಷ್ಟು ಪ್ರೀತಿ ಇತ್ತು ಅಂದ್ರೆ. ವಚನ ಸಾಹಿತ್ಯಕ್ಕೆ ಇವರ ಜೀವನ ಸಮರ್ಪಿತವಾದ ಮೇಲೆ ಪತ್ರಿಕೆ ನಡೆಸುವುದು, ಮುದ್ರಣಾಲಯದಲ್ಲಿ ಪ್ರಕಟಿಸಲು ಕಷ್ಟವಾದಾಗ ಇದ್ದ ಮನೆಯನ್ನು ಕೂಡ ಮಾರಿ, ಬಾಡಿಗೆಮನೆಯಲ್ಲಿದ್ದು, ತಮ್ಮ ಜೀವನನ್ನು ತ್ಯಾಗ ಮಾಡಿದವರಿವರು.

ಸ್ವಂತಕ್ಕೆ ಏನನ್ನು ಬಯಸದೆ ಸಮಾಜಕ್ಕೆ ಸರ್ವಸ್ವವನ್ನು ಧಾರೆ ಎರೆದ ಹಳಕಟ್ಟಿಯವರು, ಪ್ರತಿಕೋದ್ಯಮದ ದಿನಗಳಲ್ಲಿ ಬಡತನವನ್ನೇ ಮೈತುಂಬ ಹೊತ್ತುಕೊಂಡರು. 1964ರ ಜೂನ್ 29ರಂದು ಅಗಲಿದ ಹಳಕಟ್ಟಿ ಅವರ ಹೆಸರನ್ನು ಶಾಶ್ವತವಾಗಿರಿಸಲು ಅವರ ಸಮಾಧಿ ಇರುವ ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆ ಆವರಣದಲ್ಲಿಯೇ ಭವ್ಯ ಸ್ಮಾರಕ ನಿರ್ಮಿಸಲಾಗಿದೆ ಮತ್ತು ಅವರ ಹೆಸರಿನ ಸಂಶೋಧನಾ ಕೇಂದ್ರ ಇಡೀ ರಾಜ್ಯದಲ್ಲಿ ಅತ್ಯುತ್ತಮ ಮಾದರಿಯಾಗಿದೆ ಎಂದು ಹೇಳಬಹುದು. ಅಲ್ಲದೆ, ಇತ್ತೀಚೆಗೆ ಬೆಂಗಳೂರಿನಲ್ಲಿಯೂ ಕೇಂದ್ರ ಸ್ಥಾಪಿಸಲಾಗಿದ್ದು. ಅಲ್ಲಿಯೂ ವಚನಸಾಹಿತ್ಯ ಸಂಶೋಧನ ಕಾರ್ಯ ನಡೆಯುತ್ತಿದೆ.

- ಪೊನ್ನಮ್ಮ ಎಂ.ಕೆ

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...