‘ವಾರದ ಮಾತು’ ಸರಣಿಯಲ್ಲಿ ಕಲಾವಿದ ಅಕ್ಷಯ ಮಾದರ


ಕರ್ನಾಟಕ ವಿಶ್ವವಿದ್ಯಾಲಯ, ದೃಶ್ಯಕಲಾ ಅಧ್ಯಯನ ವಿಭಾಗದಲ್ಲಿ ದಿನಾಂಕ 8 ಫೆಬ್ರುವರಿ 2024 ರಂದು ಮಧ್ಯಾಹ್ನ 3:30ಕ್ಕೆ 'ವಾರದ ಮಾತು' ಸರಣಿ ಕಾರ್ಯಕ್ರಮ ನಡೆಯಿತು. ನನ್ನ ಕಲೆ ನನ್ನ ಮಾತು ಎಂಬ ತಲೆ ಬರಹದಡಿ ಪ್ರತಿ ಗುರುವಾರ ಎಂ.ವಿ.ಎ ವಿದ್ಯಾರ್ಥಿಗಳು ತಾವು ರಚಿಸಿದ ಚಿತ್ರಕಲಾಕೃತಿಗಳ ಕುರಿತು ಮಾತನಾಡುವದು. ಕಲಾಕೃತಿಯ ಬಗೆಗಿನ ಮುಕ್ತವಾಗಿ ಚರ್ಚಿಸುವದು ಈ ಕಾರ್ಯಕ್ರಮದ ಉದ್ದೇಶ.

ಈ ಮೂರನೇ ವಾರದ ಮಾತುಗಾರರಾಗಿ ಎಂ.ವಿ ಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಯಾದ ಅಕ್ಷಯ ಮಾದರ ಅವರು ತಮ್ಮ ಕಲಾಕೃತಿಗಳ ಬಗೆಗೆ ಮಾತನಾಡಿದರು. ತಾವು ರಚಿಸಿದ ಕಲಾಕೃತಿಯಲ್ಲಿ ಮುಖವಾಡ ಹಾಕಿಕೊಂಡು ಬದುಕುವ ವ್ಯಕ್ತಿಗಳ ಆಂತರಿಕ ಸಂವೇದನೆಯನ್ನು ಬಹು ಸೂಕ್ಷ್ಮವಾಗಿ ಕಟ್ಟಿಕೊಟ್ಟ ಬಗೆಗೆ ತಿಳಿಸಿದರು. ಇವತ್ತಿನ ಸಂದರ್ಭದಲ್ಲಿ ಬಹುತೇಕರು ಒಳಗೊಂಡು ಹೊರಗೊಂದು ಮಾಡುವ ನೆಲೆಯಲ್ಲಿ ತಮ್ಮ ಮುಖವಾಡದ ಬದುಕನ್ನು ತೋರಿಸುತ್ತಿದ್ದಾರೆ. ಹಾಗಾಗಿ ಅಂತಹ ಸಂಗತಿಗಳನ್ನು ನನ್ನ ಕ್ಯಾನವಾಸ್ ನಲ್ಲಿ ಚಿತ್ರಿಸಿದ್ದೇನೆ ಎಂದು ಚರ್ಚಗೆ ಈಡಾದರು. ಇವರೊಂದಿಗೆ ವೇದಿಕೆಯ ಮೇಲೆ ಉಪಸ್ಥಿರಿರುವ ವಿಭಾಗದ ಅಧ್ಯಾಪಕರಾದ ಬಸವೇಶ ಕುಂಬಾರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಬಲ್ಲ ಮಾತುಗಳನ್ನಾಡಿದರು.ಅಲ್ಲದೆ ಮುಖವಾಡದ ವಸ್ತು ವಿಷಯದಲ್ಲಿಯೇ ಬಹು ಮುಖ್ಯವಾಗಿ ಚಿತ್ರಿಸುವ ಹಲವು ಕಲಾವಿದರ ಹೆಸರನ್ನು ಹೆಸರಿಸುವ ಮೂಲಕ ಕಲೆಯ ಬಗೆಗೆ ಚಿಂತನಾರ್ಹ ನೆಲೆಯಲ್ಲಿ ಮಾತನಾಡಿದರು. ಅಕ್ಷಯ ಮಾದರ ಅವರು ಕ್ರಿಯಾಶೀಲ ವಿದ್ಯಾರ್ಥಿ ಅವರು ಉತ್ತಮ ಮಾರ್ಗದರ್ಶನವಾಗಬಲ್ಲ ವಿಷಯವನ್ನು ತೆಗೆದುಕೊಂಡು ಕಲಾಕೃತಿ ರಚನೆಗೆ ಮುಂದಾಗಿದ್ದಾರೆ. ಅವರಿಗೆ ಶುಭಾಶಯಗಳು ಕೋರಿ ತಮ್ಮ ಮಾತಿಗೆ ವಿರಾಮ ನೀಡಿದರು.

ಚರ್ಚೆಯಲ್ಲಿ ವಿಭಾಗದ ಅಧ್ಯಾಪಕರಾದ ಡಾ.ಮಧುಮತಿ ಶಿವಪೂಜಿ, ವೆಂಕಟೇಶಕುಮಾರ ಕೆ.ಎಚ್,ಡಾ.ಬಸವರಾಜ ಎಸ್.ಕಲೆಗಾರ ಭಾಗಿಯಾಗಿ ವಿದ್ಯಾರ್ಥಿಯೊಂದಿಗೆ ಚರ್ಚಿಸಿದರು. ಅಲ್ಲದೆ ವಿಭಾಗದ ಕ್ರಿಯಾಶೀಲ ಸಂಯೋಜಕರಾದ ಡಾ.ನಿಂಗಪ್ಪ ಮುದೇನೂರ ಅವರು ತಮ್ಮ ಅಧ್ಯಕ್ಷತೆ ಮಾತಿನಲ್ಲಿ ವಿದ್ಯಾರ್ಥಿ ಅಕ್ಷಯ ಮಾದರ ಅವರ ಕ್ರಿಯಾಶೀಲ ಗುಣವನ್ನು ಕಂಡು ಪ್ರೋತ್ಸಾಹದ ಮಾತುಗಳನ್ನಾಡಿ ಈ ವಾರದ ಮಾತು ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ನಮ್ಮ ವಿಭಾಗದ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಕಲಾಕೃತಿ ರಚನೆಯೊಂದಿಗೆ ಕಲೆಯ ಕುರಿತು, ಕಲಾಕೃತಿಯ ಕುರಿತು ಮುಕ್ತವಾಗಿ, ನಿರರ್ಗಳವಾಗಿ ಮಾತಾಡುವದನ್ನು ರೂಢಿಸಿಕೊಂಡು ಕಲೆಯನ್ನು ಗ್ರಹಿಸುವವರಿಗೆ ಕಲಾಕೃತಿಯ ಅಂತರ್ಗತ ಅರಿವಾದರೆ ನಮ್ಮ ಈ ಪ್ರಯತ್ನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಮಾತನಾಡಿದರು. ಹಾಗೆಯೇ ವಿಭಾಗವು ಸೃಜನಶೀಲ ಆಯಾಮದೊಂದಿಗೆ ವಿಶ್ವವಿದ್ಯಾಲಯದ ಕೀರ್ತಿಗೆ ಭಾಜನರಾಗಲಿ ಎಂಬುದು ನಮ್ಮೆಲ್ಲರ ಅಶಯವಾಗಬೇಕು ಎಂದು ಕಿವಿ ಮಾತು ಹೇಳಿದರು.

ಈ ಚರ್ಚೆಯಲ್ಲಿ ವಿದ್ಯಾರ್ಥಿಗಳಾದ ಮಹೇಶ ಕಮ್ಮಾರ, ಉಮೇಶ, ಸವಿತಾ ಬೆಣಗಿ, ಭೀಮಪ್ಪ, ಮನಿಷಾ ಯಾದವ್, ಮೀನಾಕ್ಷಿ ಸೇರಿದಂತೆ ವಿದ್ಯಾರ್ಥಿಗಳ ಸಮೂಹ ಭಾಗವಹಿಸಿತ್ತು . ಇದೊಂದು ವಿಭಾಗದ ಕ್ರಿಯಾಶೀಲತೆಯುಳ್ಳ ಮಹತ್ವದ ಕಾರ್ಯಕ್ರಮ.

ಮುಂದಿನ ವಾರ ಮತ್ತೆ ಗುರುವಾರ ಮಧ್ಯಾಹ್ನ 3: 30 ಕ್ಕೆ ಆರಂಭವಾಗಲಿದೆ.

ಡಾ.ಬಸವರಾಜ ಎಸ್.ಕಲೆಗಾರ
ಸಹಾಯಕ ಅಧ್ಯಾಪಕರು
ದೃಶ್ಯಕಲಾ ಅಧ್ಯಯನ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...