ಜೀವಪರ ಮತ್ತು ವೈಚಾರಿಕ ಸಾಹಿತ್ಯವನ್ನು ಸಹೃದಯ ಓದುಗ ಸಮುದಾಯಕ್ಕೆ ತಲುಪಿಸಬೇಕೆಂಬ ಕಾಳಜಿಯಿಂದ, ಅಕ್ಷರಲೋಕದ ಜೀವದನಿಯಾಗಬೇಕೆಂಬ ಉದ್ದೇಶದಿಂದ ಕಥೆಗಾರರೂ ಆದ ಲೇಖಕ ಡಾ.ಸರ್ಜಾಶಂಕರ್ ಹರಳಿಮಠ ಅವರು ಶಿವಮೊಗ್ಗದಲ್ಲಿ ಆರಂಭಿಸಿದ ಪ್ರಕಾಶನ ಸಂಸ್ಥೆ “ಅಂತಃಕರಣ ಪ್ರಕಾಶನ”. ಈವರೆಗೆ ಅದು ವಿಚಾರ ಸಾಹಿತ್ಯದೊಂದಿಗೆ ಕಥೆ ಮತ್ತು ಕವನ ಸಂಕಲನವನ್ನೂ ಪ್ರಕಟಿಸಿದೆ. ಸಂಸ್ಕೃತಿ ಚಿಂತಕರಾದ ಡಾ.ರಹಮತ್ ತರೀಕೆರೆ ಅವರ ಅತ್ಯುತ್ತಮ ಚಿಂತನೆಗಳ ಗುಚ್ಛ “ತನ್ನತನದ ಹುಡುಕಾಟ”, ಕಥೆಗಾರ ಡಾ.ಮಿರ್ಜಾ ಬಶೀರ್ ಅವರ “ಬಟ್ಟೆ ಇಲ್ಲದ ಊರಿನಲ್ಲಿ” ಕಥಾಸಂಕಲನ, ಕವಿ ಡಾ.ಮರ್ಗನಳ್ಳಿ ಪ್ರಕಾಶ್ ಅವರ “ಬಯಲು ತಬ್ಬುವ ಪರಿ” ಕವನ ಸಂಕಲನ, ಡಾ.ಸರ್ಜಾಶಂಕರ್ ಹರಳಿಮಠ ಅವರ ವಿಚಾರ ಸಾಹಿತ್ಯದ ಕೃತಿಗಳಾದ “ಬೆಚ್ಚಿ ಬೀಳಿಸಿದ ಬೆಂಗಳೂರು”, “ಜೀವದನಿ”, “ಸುಡುಹಗಲ ಸೊಲ್ಲು” ಈ ಪ್ರಕಾಶನದಿಂದ ಪ್ರಕಟಗೊಂಡಿರುವ ಪ್ರಮುಖ ಕೃತಿಗಳಾಗಿವೆ.
©2024 Book Brahma Private Limited.