ಬಟ್ಟೆ ಇಲ್ಲದ ಊರಿನಲ್ಲಿ

Author : ಮಿರ್ಜಾ ಬಷೀರ್

Pages 152

₹ 110.00
Year of Publication: 2013
Published by: ಅಂತಃಕರಣ ಪ್ರಕಾಶನ
Address: "ಶ್ರೇಯಸ್ ನಿಲಯ", ಅಪ್ಪಾಜಿ ರಾವ್ ಕಾಂಪೌಂಡ್, ಕೋಟೆ ರಸ್ತೆ, ಶಿವಮೊಗ್ಗ - 577 202
Phone: 8884562600

Synopsys

‘ಬಟ್ಟೆ ಇಲ್ಲದ ಊರಿನಲ್ಲಿ’ ಮಿರ್ಜಾ ಬಷೀರ್ ಕಥಾಸಂಕಲನ. ಈ ಕೃತಿಗೆ ರಹಮತ್ ತರೀಕೆರೆ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ. ‘ಅನುಭವದ ಒಂದು ಚಿಕ್ಕ ಎಳೆಯನ್ನೂ ಪಾತ್ರದ ಒಂದು ವರ್ತನೆಯನ್ನೂ ಇಟ್ಟುಕೊಂಡು ಹುಟ್ಟುವ ಇಲ್ಲಿನ ಚಿಕ್ಕಚಿಕ್ಕ ಕತೆಗಳು ಸರಳವಾಗಿವೆ ಮತ್ತು ಆಪ್ತವಾಗಿವೆ. ವಿಶೇಷವೆಂದರೆ, ಪಶುಪಕ್ಷಿಗಳು ಸಹ ಇಲ್ಲಿ ಮನುಷ್ಯರಂತೆ ಪಾತ್ರಗಳಾಗಿರುವುದು.

ಕೆಲವೊಮ್ಮೆ ಕತೆಗಳು ಪ್ರಾಣಿ ಮತ್ತು ಪಕ್ಷಿಲೋಕದ ಬದುಕನ್ನು ಕಪಟ, ಕ್ರೌರ್ಯ ತುಂಬಿದ ಮನುಷ್ಯ ಬದುಕಿನ ಜತೆ ಮುಖಾಮುಖಿ ಮಾಡಿಸಿ, ಮಾನವ ಬದುಕಿನ ಬೆಲೆಗಟ್ಟುವ ಕೆಲಸವನ್ನೂ ಮಾಡುತ್ತವೆ. ಈ ಕತೆಗಳು ಬದುಕಿನಲ್ಲಿ ಅಸ್ತಿತ್ವಕ್ಕಾಗಿ ಹೋರಾಡುವ ಜೀವಗಳ ಕಥನಗಳಾಗಿವೆ. ಹೀಗಾಗಿ ಆದರ್ಶ ಮತ್ತು ವಾಸ್ತವಗಳ ನಡುವಿನ ಸಂಘರ್ಷವು ಇಲ್ಲಿನ ಮಜಲಾಗಿದೆ. ಆದರೆ ಈ ಸಂಘರ್ಷ ಮಾಡುವ ಜೀವಿಗಳಿಗೆ ಕೊನೆಯಲ್ಲಿ ಜಯ ಸಿಗುವುದಿಲ್ಲ. ಅವು ದಾರುಣ ಅಂತ್ಯವನ್ನು ಕಾಣುತ್ತವೆ. ಹೀಗಾಗಿ ಅಪಾರ ಹಾಸ್ಯಪ್ರಜ್ಞೆಯಿರುವ ಈ ಕತೆಗಳಲ್ಲಿ ದುರಂತ ಪ್ರಜ್ಞೆಯೂ ಗಾಢವಾಗಿದೆ. ಲೇಖಕರು ವೈದ್ಯರಾಗಿರುವುದು ಕಾರಣ, ರೋಗ ಮತ್ತು ಸಾವು ಮತ್ತು ಆರೈಕೆಗಳ ವಿವರಗಳು ಇಲ್ಲಿ ಬಾಳಿನ ಪರಿಯನ್ನು ಶೋಧಿಸುವ ಪರಿಕರಗಳಾಗಿವೆ.

ಇಲ್ಲಿನ ಕತೆಗಳಲ್ಲಿ ಆತ್ಮಕಥನಾತ್ಮಕ ಶೈಲಿ ಮತ್ತೆಮತ್ತೆ ಬಳಕೆಯಾಗಿದೆ. ಆದರೆ ಘಟನೆಯನ್ನು ದಾಖಲಿಸುವ ಈ ಆತ್ಮಕಥನಾತ್ಮಕ ವಿಧಾನವನ್ನು ತೊರೆದು ವಿವರಗಳನ್ನು ರೂಪಕವಾಗಿ ಮಾರ್ಪಡಿಸುವ ಕಡೆ ತನ್ನ ಸಮೃದ್ಧ ಕಲ್ಪನಾಶಕ್ತಿಯಿಂದ ಕತೆಗಾರಿಕೆ ಹೊಸತನದಿಂದ ಮಿರುಗುತ್ತದೆ. ಕತೆಗಳು ತಾತ್ವಿಕ ಆಯಾಮ ಪಡೆದುಕೊಳ್ಳುತ್ತವೆ. ಈ ಸಂಕಲನದ 'ಬಟ್ಟೆ ಇಲ್ಲದ ಊರಿನಲ್ಲ' 'ಒಂದು ಸಾವಿನ ಸುತ್ತ' ಒಳ್ಳೆಯ ಕತೆಗಳಾಗಿರುವುದು ಹೀಗೆ. 'ಬಟ್ಟೆ ಇಲ್ಲದ ಊರಿನಲ್ಲ' ಕತೆಯು ಮಿರ್ಜಾ ಅವರ ಕತೆಗಾರಿಕೆಯ ನಾಟಕೀಯತೆ, ವಿಡಂಬನ ಪ್ರಜ್ಞೆ ಹಾಗೂ ದಾರ್ಶನಿಕತೆಯನ್ನು ಒಳಗೊಂಡು ಬೆರಗುಹುಟ್ಟಿಸುತ್ತದೆ ಎಂದಿದ್ದಾರೆ ರಹಮತ್ ತರೀಕೆರೆ.

About the Author

ಮಿರ್ಜಾ ಬಷೀರ್

ಲೇಖಕ ಡಾ. ಮಿರ್ಜಾ ಬಷೀರ್ ಅವರು ತುಮಕೂರು ನಿವಾಸಿ.   ‘ಬಟ್ಟೆಯಿಲ್ಲದ ಊರಿನಲ್ಲಿ’, ‘ಜಿನ್ನಿ’, ‘ಹಾರುವ ಹಕ್ಕಿ ಮತ್ತು ಇರುವೆ’ ಪ್ರಕಟಿತ ಕತಾಸಂಕಲನಗಳು. ಅನೇಕ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೂರು ಬಾರಿ ಪ್ರಜಾವಾಣಿ ದೀಪಾವಳಿ ಕತಾ ಸ್ಪರ್ಧೆ ಹಾಗೂ  ಒಂದು ಬಾರಿ ಕನ್ನಡಪ್ರಭ ಸಂಕ್ರಾಂತಿ ಕತಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇವರ ಕೆಲವು ಕತೆಗಳು ಪದವಿ ತರಗತಿಗಳ ಪಠ್ಯಗಳಾಗಿವೆ. ಒಂದು ಕತೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ 9ನೇ ತರಗತಿಯ ಭಾಷಾ ಅಲ್ಪಸಂಖ್ಯಾತ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ನಾಟಕ ‘ತಬ್ಬಲಿಗಳು’ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ...

READ MORE

Related Books