ಬಯಲ ತಬ್ಬುವ ಪರಿ

Author : ಮರ್ಗನಳ್ಳಿ ಪ್ರಕಾಶ

Pages 60

₹ 40.00




Year of Publication: 2009
Published by: ಅಂತಃಕರಣ ಪ್ರಕಾಶನ
Address: "ಶ್ರೇಯಸ್ ನಿಲಯ", ಅಪ್ಪಾಜಿ ರಾವ್ ಕಾಂಪೌಂಡ್, ಕೋಟೆ ರಸ್ತೆ, ಶಿವಮೊಗ್ಗ - 577 202
Phone: 9448780144

Synopsys

‘ಬಯಲ ತಬ್ಬುವ ಪರಿ’ ಮರ್ಗನಳ್ಳಿ ಪ್ರಕಾಶ ಅವರ ಕವನ ಸಂಕಲನ. ಈ ಸಂಕಲನಕ್ಕೆ ಹಿರಿಯ ಲೇಖಕ ಡಾ. ಬಂಜಗೆರೆ ಜಯಪ್ರಕಾಶ್ ಅವರ ಬೆನ್ನುಡಿ ಬರಹವಿದೆ. ಇಲ್ಲಿನ ಕವಿತೆಗಳ ಕುರಿತು ಬರೆಯುತ್ತಾ ‘ನಮ್ಮ ಸಮಾಜವನ್ನು ಎಂದಿನಿಂದಲೋ ಅವರಿಸಿರುವ ಮೋಸ, ದುರಾಚಾರ, ಅನ್ಯಾಯ, ಜಾತಿ ಅಸಮಾನತೆ, ದಬ್ಬಾಳಿಕೆಗಳನ್ನು ತೊಡೆಯಬೇಕೆಂದು ಆಶಿಸುವುದು, ಜನಸಾಮಾನ್ಯರ ನೋವು-ನಲಿವುಗಳೊಂದಿಗೆ ತನ್ನನ್ನು ಏಕೀಭವಿಸಿಕೊಳ್ಳುವುದು ಯಾವುದೇ ಬರಹಗಾರನ ಸ್ವಭಾವವಾಗಿದ್ದರೆ ಅದು ಒಳ್ಳೆಯ ಗುಣ. ಅದು ಹೃದಯವಂತ ಸ್ಪಂದನದ ಲಕ್ಷಣ. ಅದನ್ನು ಇಲ್ಲಿನ ಕವಿತೆಗಳಲ್ಲಿ ನಾವು ಧಾರಾಳವಾಗಿ ಕಾಣಬಹುದಾಗಿದೆ.

ಈ ಕವಿಗಿರುವ ಸಾಮಾಜಿಕ ತಿಳಿವಳಿಕೆ, ಎಚ್ಚರ ಮತ್ತು ಶೋಷಕ ವ್ಯವಸ್ಥೆಯ ಬಗೆಗಿನ ತಿರಸ್ಕಾರವನ್ನು ಈ ಸಂಕಲನದ ಕವಿತೆಗಳು ವ್ಯಕ್ತಪಡಿಸುತ್ತಿವೆ. ವಿಚಾರ ಹಾಗೂ ಆಶಯಗಳನ್ನು ಸಾರ್ವಜನಿಕರಿಗೆ ತಲುಸಬೇಕು ಎಂಬ ಅವರ ಉದ್ದೇಶವನ್ನು ಇವು ಚೆನ್ನಾಗಿ ನಿರ್ವಹಿಸುತ್ತಿವೆ ಎನ್ನುತ್ತಾರೆ ಬಂಜಗೆರೆ ಜಯಪ್ರಕಾಶ್. ಹಾಗೇ ಪ್ರಕಾಶ ಅವರಿಗೆ ಸ್ವಸ್ಥ ಸಮಾಜದ ಬಗ್ಗೆ ಕನಸುಗಳಿವೆ. ಬಡವರು, ದಮನಿತರು, ದಲಿತರು, ಎಲ್ಲಾ ಧಾರ್ಮಿಕ ಪಂಗಡದ ಜನರು ಉತ್ತಮ ಬದುಕನ್ನು ಪಡೆಯಲೆಂಬ ಆಶಯಗಳವೆ. ಯಾರಾದರೊಬ್ಬರು ಕವಿಯಾಗಿ ಬಿಡುವುದೇ ಮುಖ್ಯವಲ್ಲ. ಅತ ಯಾತಕ್ಕಾಗಿ ಕವಿಯಾದ, ಕವಿಯಾದ ಮೇಲೆ ಏನು ಮಾಡಿದ ಎಂಬುದು ಕೂಡ ಮುಖ್ಯ ಎಂದಿದ್ದಾರೆ.

About the Author

ಮರ್ಗನಳ್ಳಿ ಪ್ರಕಾಶ

ಮರ್ಗನಳ್ಳಿ ಪ್ರಕಾಶ ಅವರು ಮೂಲತಃ ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕಿನ ಮರಿಗೊಂಡನಹಳ್ಳಿ (ಮ‌ರ್ಗನಳ್ಳಿ)ಯವರು. ಕುವೆಂಪು ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಅವರು, ಕಾಲೇಜು ದಿನಗಳಲ್ಲಿ ಜನಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದು, ಆ ನಂತರ ಅದರ ಮುಂದುವರಿಕೆಯಾಗಿ ಪತ್ರಿಕೋದ್ಯಮದತ್ತ ಹೊರಳಿದರು. ಸ್ವಲ್ಪಕಾಲ ಅಂಕಣಕಾರರಾಗಿಯೂ ಗಮನ ಸೆಳೆದರು. ಪ್ರಸ್ತುತ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರಕಾಶ್ ತಮ್ಮ ಕುಟುಂಬದೊಂದಿಗೆ ಲವಲವಿಕೆಯ ಬದುಕಿನಲ್ಲಿದ್ದಾರೆ. ...

READ MORE

Related Books