ಬಂಡಾರ ಪ್ರಕಾಶನ

2006ರಲ್ಲಿ ’ಬಿಸ್ಲಪದ’ ಕವನ ಸಂಕಲನ ಪ್ರಕಟಣೆ ಆರಂಭಿಸಿದ ರಾಯಚೂರು ಜಿಲ್ಲೆಯ ಮಸ್ಕಿಯ ಬಂಡಾರ ಪ್ರಕಾಶನವು ಕೇವಲ ಸೃಜನಾತ್ಮಕ ಪ್ರಕಟಣೆಗಳಿಗೆ ಸೀಮಿತವಾಗಿಲ್ಲ. ಸಂಶೋಧನೆಗೆ ಸಂಬಂಧಿಸಿದ ಅದರಲ್ಲೂ ಕಡೆಗಣನೆಗೆ ಒಳಗಾದ ಪ್ರದೇಶ, ವಿಷಯಕ್ಕೆ ಸಂಬಂಧಿಸಿದ ಸಂಗತಿಗಳ ಕುರಿತ ಸಂಶೋಧನಾತ್ಮಕ ಪಠ್ಯಗಳನ್ನು ಪ್ರಕಟಿಸುತ್ತ ಬಂದಿದೆ. ಹೈದರಾಬಾದ್‌ ಕರ್ನಾಟಕದ ಸಂಸ್ಕೃತಿ, ಭಾಷೆ, ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಪ್ರಕಟಿಸಿದೆ. 

ಬಂಡಾರ ಪ್ರಕಾಶನ, ಮಸ್ಕಿ ಇದು ಹಯ್ದರಾಬಾದ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಮಸ್ಕಿಯಿಂದ ೨೦೦೬ರಲ್ಲಿ ಕನ್ನಡ ಮತ್ತು ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮತ್ತು ಹಯ್ದರಾಬಾದ ಕರ್ನಾಟಕ ಪ್ರದೇಶದ ಅದ್ಯಯನದ ಆಶಯದಿಂದ ಕೆಲಸವನ್ನು ಆರಂಬಿಸಿದೆ. ಸಂಶೋದನಾತ್ಮಕ ಪುಸ್ತಕಗಳನ್ನು ಹೆಚ್ಚು ಪ್ರಕಟಿಸುವುದು ಎಂಬುದು ಮುಕ್ಯವಾದ ಆಶಯ. ಇದುವರೆಗೆ ಸುಮಾರು ಅಯವತ್ತರಶ್ಟು ಪುಸ್ತಕಗಳನ್ನು ಪ್ರಕಾಶನ ಪ್ರಕಟ ಮಾಡಿದೆ. ಇದರಲ್ಲಿ ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಎಂ.ಎಂ. ಕಲಬುರ್ಗಿ, ಪ್ರೊ. ಎಚ್.ಎಸ್. ಅನಂತನಾರಾಯಣ, ಪ್ರೊ. ಬಿ.ಬಿ. ರಾಜಪುರೋಹಿತ ಮೊದಲಾದ ಹಲವಾರು ಹಿರಿಯ ವಿದ್ವಾಂಸರ ಸಂಶೋದನಾ ಪುಸ್ತಕಗಳನ್ನು ಪ್ರಕಟಿಸಿದೆ. ಕನ್ನಡ ಮತ್ತು ಕರ್ನಾಟಕಗಳಿಗೆ ಸಂಬಂದಿಸಿದ ಗುಣಾತ್ಮಕ ಸಂಶೋದನೆಯನ್ನು ಮತ್ತು ಯುವ ಸಂಶೋದಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರಕಾಶನದ ಮಹತ್ವದ ಆಶಯ, ಆದ್ದರಿಂದ ಬಂಡಾರ ಪ್ರಕಾಶನ ಯುವ ಸಂಶೋದಕರ ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂದಿಸಿದ ಉತ್ತಮ ಪಿಎಚ್.ಡಿ. ಸಂಶೋದನಾ ಪ್ರಬಂದಗಳನ್ನು ಆರಿಸಿ 'ಕನ್ನಡ ಆರಯ್ಪು' ಸರಣಿಯಲ್ಲಿ ಸುಮಾರು ಎಂಟು ಸಂಪುಟಗಳನ್ನು ಪ್ರಕಟಿಸಿದೆ. ಹಯ್ದರಾಬಾದ ಕರ್ನಾಟಕ ಅದ್ಯಯನಕ್ಕೆ ಪೂರಕವಾಗಿ ಹಯ್ದರಾಬಾದ ಕರ್ನಾಟಕ ಸರಣಿಯನ್ನು ಶುರು ಮಾಡಿದ್ದು ಇದರಲ್ಲಿ ಇದುವರೆಗೆ ಒಂಬತ್ತು ಸಂಪುಟಗಳನ್ನು ಪ್ರಕಟಿಸಿದೆ. 
ಬಂಡಾರ ಪ್ರಕಾಶನದ ಪ್ರಕಾಶಕರಾಗಿ ಪರಶುರಾಮ ಕೋಡಗುಂಟಿ ಇದ್ದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಬಸವರಾಜ ಕೋಡಗುಂಟಿ ಮತ್ತು ರೇಣುಕಾ ಕೋಡಗುಂಟಿ ಇವರು ಅಕಡೆಮಿಕ್ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ಪ್ರಕಾಶನದ ವಿವಿದ ಆಯಾಮಗಳ ಕೆಲಸಗಳನ್ನು ಮಸ್ಕಿಯ ಕೋಡಗುಂಟಿ ಕುಟುಂಬ ನೋಡಿಕೊಳ್ಳುತ್ತಿದೆ. ಪ್ರಕಾಶನವು ಇನ್ನೂ ಹತ್ತು ಹಲವು ಹೊಸ ಯೋಜನೆಗಳನ್ನೂ ಮಾಡುವ ಯೋಚನೆಯನ್ನು ಇಟ್ಟುಕೊಂಡಿದೆ.

BOOKS BY BANDARA PRAKASHANA

ಕನ್ನಡಮೆನಿಪ್ಪನಾಡು

ಒಡಲ ಕಡಲು

ಕರ್‍ನಾಟಕದ ಬಾಶಾ ಹಂಚಿಕೆ

ಕಲ್ಯಾಣ ಚಾಲುಕ್ಯರ ಕನ್ನಡ ಶಾಸನಗಳ ವರ್ಣನಾತ್ಮಕ ವ್ಯಾಕರಣ

ಕರ್‍ನಾಟಕದ ಬಾಶಾ ನಕಾಶೆ

ಬಾಶಾನಿರ್‍ವಹಣೆ

ಕರ್ನಾಟಕದ ಜನಪದ ಆಟಗಳು

ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ

Publisher Address

ಮಸ್ಕಿ-584124, ರಾಯಚೂರು ಜಿಲ್ಲೆ

Muski-584124, Raichur District

Publisher Contact

9886407011

Email

bandaraprakashana@gmail.com