ಕನ್ನಡಮೆನಿಪ್ಪನಾಡು

Author : ಬಸವರಾಜ ಕೋಡಗುಂಟಿ

Pages 96

₹ 125.00




Year of Publication: 2024
Published by: ಬಂಡಾರ ಪ್ರಕಾಶನ
Address: ಮಸ್ಕಿ-584124, ರಾಯಚೂರು ಜಿಲ್ಲೆ
Phone: 9886407011

Synopsys

‘ಕನ್ನಡಮೆನಿಪ್ಪನಾಡು’ ಕನ್ನಡ ಬಾಶೆಯ ಹಂಚಿಕೆ ಲೇಖಕ ಬಸವರಾಜ ಕೊಡಗುಂಟಿ ಅವರ ಕೃತಿ. ಇಲ್ಲಿ ಜನಗಣತಿಯ ಮಾಹಿತಿಯನ್ನು ಬಳಸಿಕೊಂಡು ಕನ್ನಡ ಬಾಶೆ ದೇಶದಲ್ಲಿ ಪಸರಿಸಿಕೊಂಡಿರುವ ಚಿತ್ರವನ್ನು ಇಲ್ಲಿ ತಯಾರಿಸಿಕೊಟ್ಟಿದ್ದಾರೆ. ಕವಿರಾಜಮಾರ‍್ಗ ಹೇಳುವ ಕನ್ನಡ ನಾಡಿಗಿಂತ ತುಸು ವಿಸ್ತಾರವಾದ ನಕಾಶೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಅಂಕಿಸಂಕೆಗಳನ್ನು ಪಟ್ಟಿಸಿ, ನಕಾಶೆ ಹಾಕಿ ಅವುಗಳನ್ನು ವಿಬಿನ್ನ ನೋಟದಲ್ಲಿ ಚರ‍್ಚಿಸುತ್ತಾರೆ. ಇದರಲ್ಲಿ ಎರಡು ಲಕ್ಶ ಮಂದಿ ಕನ್ನಡ ಮಾತುಗರು ಇರುವ ಕರ‍್ನಾಟಕದ ಎರಡು ಜಿಲ್ಲೆಗಳನ್ನು ಹೊರತುಪಡಿಸಿ 31 ಜಿಲ್ಲೆಗಳು, ಒಂದು ಲಕ್ಶ ಮಂದಿ ಇರುವ 40 ಜಿಲ್ಲೆಗಳು, 50.000 ಮಂದಿ ಇರುವ 46 ಜಿಲ್ಲೆಗಳು, 10.000 ಮಂದಿ ಇರುವ 67 ಜಿಲ್ಲೆಗಳು ಇರುವುದು ಗಮನ ಸೆಳೆಯುತ್ತದೆ. ಕನ್ನಡ ಬಾಶಾ ಸರ‍್ವೆ, ಕನ್ನಡ ಬಾಶೆಯ ಅದ್ಯಯನ ಮೊದಲಾಗಿ ಹಲವು ಆಯಾಮಗಳಲ್ಲಿ ಆಗಬೇಕಾಗಿರುವ ಕೆಲಸಗಳನ್ನು, ಸಾದ್ಯವಿರುವೆಡೆಯಲ್ಲೆಲ್ಲ ಕನ್ನಡ ಮಾದ್ಯಮದಲ್ಲಿ ಶಿಕ್ಶಣ ಮೊದಲಾದವನ್ನು ಕೊಡುವುದರ ಬಗೆಗೆ ಮಾತನಾಡುತ್ತದೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books