ಕರ್‍ನಾಟಕದ ಬಾಶಾ ನಕಾಶೆ

Author : ಬಸವರಾಜ ಕೋಡಗುಂಟಿ

Pages 150

₹ 150.00




Year of Publication: 2023
Published by: ಬಂಡಾರ ಪ್ರಕಾಶನ
Address: ಮಸ್ಕಿ-584124, ಜಿ. ರಾಯಚೂರು

Synopsys

‘ಕರ್‍ನಾಟಕದ ಬಾಶಾ ನಕಾಶೆ’ ಭಾಷಾತಜ್ಞ, ಲೇಖಕ ಬಸವರಾಜ ಕೋಡಗುಂಟಿ ಅವರ ಕೃತಿ. ಈ ಕೃತಿಯಲ್ಲಿ ವಿಷಯಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಬಾಗ 1ರಲ್ಲಿ : ಕರ‍್ನಾಟಕದ ಬಾಶೆಗಳು- ಸಂಕೀರ‍್ಣ ನಿರಿಗೆ ಎಂಬ ವಿಭಾಗವಿದೆ. ಬಾಗ 2ರಲ್ಲಿ : ಬಾಶೆಗಳು ಎಂಬ ವಿಭಾಗವಿದೆ. ಇಲ್ಲಿ ಕನ್ನಡ, ಉರ‍್ದು, ತೆಲುಗು, ತಮಿಳು, ಮರಾಟಿ, ತುಳು, ಲಂಬಾಣಿ, ಹಿಂದಿ, ಕೊಂಕಣಿ, ಮಲಯಾಳಂ, ಗುಜರಾತಿ, ಕೂರ‍್ಗಿ/ಕೊಡಗು, ಮಾರ‍್ವಾರಿ, ಬೆಂಗಾಲಿ, ಓಡಿಯಾ, ಆರೆ, ಟಿಬೆಟನ್, ಯರವ, ಪಂಜಾಬಿ, ರಾಜಸ್ತಾನಿ, ಇಂಗ್ಲೀಶು, ನೇಪಾಲಿ, ಕುರುಬ/ಕುರುಂಬ, ಸಿಂದಿ, ನವಾಯಿತಿ, ಆಸ್ಸಾಮಿ, ಕುಡುಬಿ, ಕುಳು, ಬೋಜ್ಪುರಿ, ಅಯ್ದು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು, ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳು, ಇತರ ಗುಂಪು, ವಿವಿದ ಬಾಶೆಗಳೊಳಗಿನ ‘ಇತರ’ ಗುಂಪುಗಳು ಎಂಬ ಅಧ್ಯಯನಾತ್ಮಕ ವಿವರಣೆಗಳಿವೆ. ಕರ್ನಾಟಕದಲ್ಲಿ ಎಷ್ಟು ಬಾಶೆಗಳು, ಯಾವ ಬಾಶೆಗಳು, ಯಾವ ಪ್ರದೇಶದಲ್ಲಿ ಹೇಗೆ ಹಂಚಿಕೊಂಡಿವೆ ಎಂಬುದನ್ನು ತಿಳಿದುಕೊಂಡಾಗ ಬಾಶಿಕ ಕರ್ನಾಟಕವನ್ನು ಸ್ತಳೀಯ ಹಂತದಿಂದ ತಿಳಿದುಕೊಳ್ಳಲು ಸಾದ್ಯವಾಗುತ್ತದೆ. ಇಂತದೊಂದು ಪ್ರಯತ್ನ ಈ ಪುಸ್ತಕ. ಇದರಲ್ಲಿ ಜನಗಣತಿಯ ಮಾಹಿತಿಯನ್ನು ಬಳಸಿಕೊಂಡು ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಆಯ್ದ ಒಂದೊಂದು ತಾಲೂಕು ಮಟ್ಟದ ಅಂಕಿಸಂಕೆಗಳನ್ನು ಕೊಟ್ಟು, ಅವುಗಳನ್ನು ತುಸು ಮಾತಾಡಿ, ವಿಶ್ಲೇಶಣೆ ಮಾಡಿ ತೋರಿಸಿದೆ. ಬಾಶೆಯ ಗುರ್ತಿಕೆಯನ್ನು(ಅಯ್ಡೆಂಡಿಟಿ) ಕೊಡಲಾರದ ಬಾಶೆಗಳನ್ನೂ ಇಲ್ಲಿ ಪ್ರತ್ಯೇಕವಾಗಿ ತೆಗೆದುಕೊಂದು ಬಾಶಿಕ ವಿವಿದತೆಯನ್ನು, ಬಾಶೆಗಳು ಪಸರಿಸಿಕೊಂಡಿರುವ ಬಗೆಯನ್ನು ತೋರಿಸಿದೆ. ತಾಯ್ಮಾತಿನ ಶಿಕ್ಶಣ, ಇರ್ಮಾತಿನ ತರಗತಿ ಕೋಣೆ, ತಳ ಹಂತದಲ್ಲಿ ಸಾಮಾನ್ಯ ಮಂದಿಯನ್ನು ತಲುಪುವುದು, ಸರಕಾರದ ವಿವಿದ ಪಾಲಸಿಗಳಿಗೆ ಪೂರಕವಾದಿರುವುದು, ವಿವಿದ ಸಾಮಾಜಿಕ ಚಟುವಟಿಕೆಗಳಿಗೆ ಸಹಾಯಕವಾಗುವುದು ಈ ಪುಸ್ತಕದ ವಿಶ್ಲೇಶಣೆಯಿಂದ ಸಾದ್ಯ ಎನ್ನಬಹುದಾಗಿದೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books