ಕರ್‍ನಾಟಕದ ಬಾಶಾ ಹಂಚಿಕೆ

Author : ಬಸವರಾಜ ಕೋಡಗುಂಟಿ

Pages 276

₹ 400.00




Year of Publication: 2023
Published by: ಬಂಡಾರ ಪ್ರಕಾಶನ
Address: ಮಸ್ಕಿ-584124, ರಾಯಚೂರು ಜಿಲ್ಲೆ
Phone: 9886407011

Synopsys

‘ಕರ್‍ನಾಟಕದ ಬಾಶಾ ಹಂಚಿಕೆ’ ಲೇಖಕ ಬಸವರಾಜ ಕೋಡಗುಂಟಿ ಅವರ ಕೃತಿ. ಕೃತಿಯ ಕುರಿತು ತಿಳಿಸುತ್ತಾ ‘ಕರ್‍ನಾಟಕ ಹಲವು ಬಾಶೆಗಳ ತವರು. ಇದರಲ್ಲಿ ಕೆಲವು ಬಾಶೆಗಳು ಕನಿಷ್ಟ ಹತ್ತಾರು ಸಾವಿರ ವರುಶಗಳಿಂದ ಈ ನೆಲದಲ್ಲಿ ಬದುಕಿವೆ, ಇನ್ನು ಕೆಲವು ಕಾಲಾನುಕ್ರಮದಲ್ಲಿ ಈ ಹಳೆಯ ಬಾಶೆಗಳಿಂದ ಒಡೆದುಕೊಂಡು ಬೆಳೆದಿವೆ. ಕಾಲಾಂತರದಲ್ಲಿ ಈ ನೆಲದ ಸಮುದಾಯದ ಸಂಬಂದಗಳು ಕಾರಣವಾಗಿ, ಹೊರಗಿನಿಂದ ಹಲವಾರು ಬಾಶಾ ಸಮುದಾಯಗಳು ನಿರಂತರ ವಲಸೆ ಬಂದು ಇಲ್ಲಿ ನೆಲೆ ನಿಂದು ಇಲ್ಲಿಯವರೆ ಆಗಿದ್ದಾರೆ. ಈಗ ಕರ್‍ನಾಟಕ ನೂರಾರು ಬಾಶೆಗಳ ತವರು. ಈ ಬಾಶೆಗಳು ಕಾಟಕದ ತುಂಬ ಪಸರಿಸಿಕೊಂಡಿರುವ ಬಗೆಯೂ ವಿಚಿತ್ರ ವಿವಿಧತೆಯದು. ಪ್ರತಿ ಜಿಲ್ಲೆಯೂ ಇನ್ನೊಂದು ಜಿಲ್ಲೆಗಿಂತ ಹಲವು ವಿಚಾರಗಳಲ್ಲಿ ಬಿನ್ನ, ವಿಬಿನ್ನ. ಈ ಬಾಶಾ ಹಂಚಿಕೆಯನ್ನು ಅರಿತುಕೊಂಡಾಗಲೆ ಒಂದು ನಾಡಿನ, ನೆಲದ ಸಮುದಾಯವನ್ನು ಅರಿಯಲು ಸಾದ್ಯ. ಬಾಶೆ ಮಂದಿಯ ಮತ್ತು ಸಮಾಜದ ನಾಡಿಮಿಡಿತವೆ ಆಗಿರುತ್ತದೆ. ಹಾಗಾಗಿ, ಕರ್‍ನಾಟಕವನ್ನು ತುಂಬಿಕೊಂಡಿರುವ ಬಾಶೆಗಳನ್ನು, ಆ ಬಾಶೆಗಳ ಹಂಚಿಕೆಯನ್ನು ತಿಳಿದುಕೊಳ್ಳುವುದು ಇಂದಿನ ಕರ್‍ನಾಟಕವನ್ನು ತಿಳಿದುಕೊಳ್ಳುವ ಪ್ರಕ್ರಿಯೆಯಲ್ಲಿ ಒಂದು ಅವಶ್ಯ ಮತ್ತು ಮಹತ್ವದ ದಾರಿ, ಈ ಪುಸ್ತಕ ಇಂತ ಪ್ರಯತ್ನವನ್ನು ಮಾಡಿದೆ. ಬಣ್ಣಬಣ್ಣವಾಗಿ ಕಾಣುವ ಬಾಶಿಕ ಕರ್‍ನಾಟಕವನ್ನು ಹಿಡಿದು ತೋರಿಸುವ ಪ್ರಯತ್ನ ಇಲ್ಲಿದೆ. ಜನಗಣತಿ ಒದಗಿಸುವ ಸಾಂಕಿಕ ಮಾಹಿತಿಯನ್ನು ಬಳಸಿಕೊಂಡು ಈ ಪ್ರಯತ್ನವನ್ನು ಮಾಡಿದೆ. ಈ ಪುಸ್ತಕ ಅತ್ಯಂತ ಬೆರಗಿನ ಹಲವಾರು ಅಂಶಗಳನ್ನು ತೋರಿಸುತ್ತದೆ ಎಂದಿದ್ದಾರೆ. ಇತಿಹಾಸದಲ್ಲಿ ಇಂದಿನ ಮುಂಬಯ್ ಕರ್‍ನಾಟಕ ಬಾಗವನ್ನು ಹೊರತುಪಡಿಸಿ ಇದುವರೆಗೆ ಕರ್‍ನಾಟಕ ಪ್ರದೇಶದಲ್ಲಿ ಎಲ್ಲಿಯೂ ಬಾಶಾ ಸರ್ವೆ ನಡೆದಿಲ್ಲ. ಇದು ಕರ್‍ನಾಟಕವನ್ನು ಅರಿತುಕೊಳ್ಳುವಲ್ಲಿನ ಬಹುದೊಡ್ಡ ಕೊರತೆ, ಬಾಶಾ ಸರ್ವೆಯೊಂದು ಒಟ್ಟು ಕರ್‍ನಾಟಕದ ತಿಳುವಳಿಕೆಯನ್ನೆ ಆಮೂಲಾಗ್ರವಾಗಿ ಬದಲಿಸುತ್ತದೆ, ಸರಕಾರದ ಹಲವಾರು ಕಾನೂನುಗಳನ್ನು ಪ್ರಭಾವಿಸುತ್ತದೆ, ಕರಾಟಕದ ಮಂದಿಯ ಬದುಕಿಗೆ ಅವಶ್ಯವಾದ, ಕರ್‍ನಾಟಕದ ಬೆಳವಣಿಗೆಗೆ ಅವಶ್ಯವಾದ ಹಲವಾರು ದಾರಿಗಳನ್ನು ಇದು ತೋರಿಸುತ್ತದೆ. ಈಗಿನ ಪುಸ್ತಕ ಇಂತಾ ಕರ್‍ನಾಟಕ ಬಾಶಾ ಸರ್ವೆ ನಡೆಸಬೇಕಾದ ಅವಶ್ಯಕತೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಈ ಪುಸ್ತಕದಲ್ಲಿ ಪ್ರಸ್ತುತಪಡಿಸಿದ ವಾಸ್ತವಾಂಶಗಳು ಸಾಮಾಜಿಕ ಮತ್ತು ಆರ್ತಿಕ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳುವಂತಿವೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books