ಕೃಷಿ, ಪರಿಸರ, ವಿಜ್ಞಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯುಳ್ಳವರಾದ ಗಿರಿಮನೆ ಶ್ಯಾಮರಾವ್ ಸ್ವತಃ ಲೇಖಕರೂ ಆಗಿದ್ದು, ತಮ್ಮದೇ ಗಿರಿಮನೆ ಪ್ರಕಾಶನದ ಮೂಲಕ ಪುಸ್ತಕ ಪ್ರಕಟಣೆಯಲ್ಲೂ ಮಹತ್ವದ ಕೊಡುಗೆ ನೀಡಿದವರು. ಓದುಗರು ಮೆಚ್ಚುವಂಥ ಹಲವಾರು ಕೃತಿಗಳನ್ನು ಗಿರಿಮನೆ ಪ್ರಕಾಶನ ಹೊರತಂದಿದೆ.
ನಿಸರ್ಗ ಸಂಬಂಧಿತ ಹಲವು ವಿಚಾರಗಳು ಮತ್ತು ನಿಗೂಢತೆ ಕುರಿತ ಕಥನಗಳ ಹಲವು ಪುಸ್ತಕಗಳನ್ನು ಶ್ಯಾಮರಾವ್ ಅವರೇ ಬರೆದಿದ್ದು. ಇವು ಗಿರಿಮನೆ ಪ್ರಕಾಶನದ ಮಹತ್ವದ ಪ್ರಕಟಣೆಗಳಾಗಿವೆ.
ಮಾಲಿಕೆಯಾಗಿ ಪ್ರಕಟವಾಗಿರುವ ಮಲೆನಾಡಿನ ರೋಚಕ ಕಥೆಗಳು, ಅರಮನೆ ಗುಡ್ಡದ ಕರಾಳ ರಾತ್ರಿಗಳು, ಮರೆಯದ ಮಲೆನಾಡಿನ ನೆನಪುಗಳು, ಹೇಮಾವತಿ ತೀರದ ಕೌತುಕ ಕಥೆಗಳು ಇವಲ್ಲದೆ, ಒಂದು ಆನೆಯ ಸುತ್ತ, ಅನಾಥ ಹಕ್ಕಿಯ ಕೂಗು ಮೊದಲಾದ ಕುತೂಹಲಕಾರಿ ಕೃತಿಗಳು ಗಿರಿಮನೆ ಪ್ರಕಶನದಿಂದ ಬಂದಿವೆ.
©2023 Book Brahma Private Limited.