ಲಡಾಯಿ ಪ್ರಕಾಶನ

ಪ್ರಗತಿಪರ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿರುವ ಗದಗಿನ ಲಡಾಯಿ ಪ್ರಕಾಶನವು ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. ಪತ್ರಕರ್ತ-ಲೇಖಕ ಬಸವರಾಜ ಸೂಳಿಭಾವಿ ಅವರು ಆರಂಭಿಸಿದ ಈ ಪ್ರಕಾಶನವು ಕಳೆದ ಎರಡು ದಶಕಗಳ ಅವಧಿಯಲ್ಲಿ 270ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಮೊದಲಿಗೆ ನಾಲ್ಕು ಕವನ ಸಂಕಲನ ಮೂಲಕ ಪ್ರಕಾಶನ ತನ್ನ ಕೆಲಸ ಆರಂಭಿಸಿತು. 
ಬಾಯಾರಿಕೆ - ಡಾ. ವಿನಯಾ, ಬಿಳಿಮುಗಿಲ ಕೆಳಗೆ- ಸಿ. ಜಿ. ಹಿರೇಮಠ, ತುಳುಕು ಡಾ. ಎಂ.ಡಿ. ಒಕ್ಕುಂದ, ಬಂದೂಕಿನ ಮನುಷ್ಯ - ಬಸವರಾಜ ಕುಂಬಾರ ಇವು ಆರಂಭದ ಪ್ರಕಟಣೆಗಳು. ಜನರ ಪ್ರೀತಿಯ ಜತೆಗೆ ನಿಂತದ್ದು ಲಡಾಯಿ ಪ್ರಕಾಶನಕ್ಕೆ  ಸಿಕ್ಕಿರುವ ಮನ್ನಣೆ. ಪ್ರಕಾಶನದ ಪುಸ್ತಕಗಳಿಗೆ ಕೇಂದ್ರ ಮತ್ತು ರಾಜ್ಯ ಅಕಾಡೆಮಿಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿ ಲಭಿಸಿವೆ. ಇತ್ತೀಚೆಗೆ ತಮಿಳುನಾಡು ಸರ್ಕಾರ ತನ್ನ ಕ್ಲಾಸಿಕ್ ಕೃತಿಗಳನ್ನು ತಮಿಳುನಾಡು ಶಿಕ್ಷಣ ಇಲಾಖೆಯಿಂದ ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಯೋಜನೆ ಹಮ್ಮಿಕೊಂಡಿದೆ. ಕನ್ನಡದಿಂದ ಲಡಾಯಿ ಪ್ರಕಾಶನವನ್ನು ಯೋಜನೆಯ ಭಾಗವಾಗಿಸಿಕೊಂಡಿದ್ದಾರೆ. ಇದರಡಿಯಲ್ಲಿ ಗುಡಿಗಂಟೆ ಕಥಾಸಂಕಲವನ್ನು ಪ್ರಕಟಗೊಂಡಿದೆ.

BOOKS BY LADAYI PRAKASHANA

ತುಳುಕು

ಕೋಮುಹಿಂಸೆ ನಿಯಂತ್ರಣಾ ಮಸೂದೆ 2011

ವಿದ್ಯುತ್ ಕ್ಷೇತ್ರದ ರಾಜಕಾರಣ

ಮಾಯಕಾರತಿ

ರಾಮದುರ್ಗಾ ಸಂಸ್ಥಾನ: ವಿಮೋಚನಾ ಹೋರಾಟ

ಮಾನವತವಾದಿ ಬಸವಣ್ಣ

ದೇಶ ವಿಭಜನೆಯ ವಾಸ್ತವ ಸತ್ಯಗಳು

ಒಡೆದ ಬಣ್ಣದ ಚಿತ್ರಗಳು

Publisher Address

ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101

Ladai Prakashan, 21, Prasad Hostel, Gadag- 582101

Publisher Contact

9480286844