ಮಾಯಕಾರತಿ

Author : ಶರಣಪ್ಪ ವಡಿಗೇರಿ

Pages 60

₹ 50.00
Year of Publication: 2011
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

‘ಮಾಯಕಾರತಿ’ ಕೃತಿಯು ಶರಣಪ್ಪ ವಡಿಗೇರಿ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕತೆಗಳ ಭಾಷೆಯು ಹೈದರಾಬಾದ್ ಕರ್ನಾಟಕದ ಜವಾರಿ ಭಾಷೆಯ ಸೊಗಡಿನಿಂದ ಕೂಡಿದೆ. ಸ್ವತಂತ ಭಾರತದ ಹಳ್ಳಿಗಳ ನೈಜಸ್ಥಿತಿಯನ್ನು ಚಿತ್ರಿಸುವ ಈ ಕಥೆಗಳು ಗ್ರಾಮಗಳಲ್ಲಿ ಅಲುಗಾಡದೆ ಸ್ತೂಪಗಳಂತೆ ನಿಂತಿರುವ ಜಾತಿಪದ್ದತಿ, ಭೂ ಒಡೆಯರ ಯಜಮಾನಿಕ ದರ್ಪ, ಶೋಷಣೆ, ಹಾದರ, ಮೌಡ್ಯಗಳ, ವಿರಾಟ್ ಸ್ವರೂಪವನ್ನು ಬಿಡಿಸಿಡುತ್ತದೆ. ಅಷ್ಟೇ ಅಲ್ಲದೆ ಕುಟುಂಬ ಹಿಂಸೆ, ದಾಯಾದಿ ಕಲಹ, ಶೋಷಣೆ, ದೇವದಾಸಿ ಪದ್ಧತಿ, ಗುಳೆ ಹೋಗುವ ಅನಿವಾದ್ಯತೆಗಳನ್ನು ಬಂಡಾಯ ದಿಂದಲ್ಲದೆ ಸೌಮ್ಯವಾಗಿ ನಿರ್ವಹಿಸುವ ಇಲ್ಲಿನ ಕಥೆಗಳು ಪ್ರತಿಭಟನೆಯ ಇನ್ನೊಂದು ಆಯಾಮವನ್ನೇ ತಡೆಯುತ್ತದೆ. ಕರ್ನಾಟಕದ ಜನತೆಯ ಒಡಲೊಳಗಿನ ಸಂಕಟವನ್ನು ಎಳೆ ಎಳೆಯಾಗಿ ಚಿತ್ರಿಸುವ ಇಲ್ಲಿನ ಕತೆಗಳ ಪಾತ್ರಗಳು ಬಹುಮುಖ್ಯವಾಗಿದೆ. 

About the Author

ಶರಣಪ್ಪ ವಡಿಗೇರಿ

ಶರಣಪ್ಪ ವಡಿಗೇರಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಅವರು ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿಯೂ ನೇಮಕಗೊಂಡಿದ್ದಾರೆ. ಕೃತಿಗಳು: ಮಾಯಕಾರತಿ ...

READ MORE

Reviews

(ಹೊಸತು, ಅಕ್ಟೋಬರ್ 2012, ಪುಸ್ತಕದ ಪರಿಚಯ)

ಜನಪದ ಶೈಲಿಯ ಇಲ್ಲಿನ ಕಥೆಗಳು ಹೈದರಾಬಾದ್ ಕರ್ನಾಟಕದ ಜವಾರಿ ಭಾಷೆಯಿಂದ ಕೂಡಿದ್ದು, ಆತ್ಮೀಯವೆನಿಸುತ್ತವೆ. ಸ್ವತಂತ ಭಾರತದ ಹಳ್ಳಿಗಳ ನೈಜಸ್ಥಿತಿಯನ್ನು ಚಿತ್ರಿಸುವ ಈ ಕಥೆಗಳು ಗ್ರಾಮಗಳಲ್ಲಿ ಅಲುಗಾಡದೆ ಸ್ತೂಪಗಳಂತೆ ನಿಂತಿರುವ ಜಾತಿಪದ್ದತಿ, ಭೂ ಒಡೆಯರ ಯಜಮಾನಿಕ ದರ್ಪ, ಶೋಷಣೆ, ಹಾದರ, ಮೌಡ್ಯಗಳ, ವಿರಾಟ್ ಸ್ವರೂಪವನ್ನು ಬಿಡಿಸಿಡುತ್ತದೆ. ಅಷ್ಟೇ ಅಲ್ಲದೆ ಕುಟುಂಬ ಹಿಂಸೆ, ದಾಯಾದಿ ಕಲಹ, ಶೋಷಣೆ, ದೇವದಾಸಿ ಪದ್ಧತಿ, ಗುಳೆ ಹೋಗುವ ಅನಿವಾದ್ಯತೆಗಳನ್ನು ಬಂಡಾಯ ದಿಂದಲ್ಲದೆ ಸೌಮ್ಯವಾಗಿ ನಿರ್ವಹಿಸುವ ಇಲ್ಲಿನ ಕಥೆಗಳು ಪ್ರತಿಭಟನೆಯ ಇನ್ನೊಂದು ಆಯಾಮವನ್ನೇ ತಡೆಯುತ್ತದೆ. ನಿರ್ಲಕ್ಷ್ಯಕ್ಕೆ ಒಳಗಾಗಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ನೆನವಾಗುವ ಹೈದರಾಬಾದ್ ಕರ್ನಾಟಕದ ಜನತೆಯ ಒಡಲೊಳಗಿನ ಸಂಕಟಗಳನ್ನು ಎಳೆ ಎಳೆಯಾಗಿ ಬಿಡಿಸಿಡುವಲ್ಲಿ ಕಥೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ ಬಡತನ, ಹಸಿವು, ದಾರಿದ್ರಗಳಿಂದ ತುಂಬಿ ತುಳುಕುತ್ತಿರುವ ಭಾರತೀಯ ಹಳ್ಳಿಗಳ ನಿಜಸ್ಥಿತಿಯನ್ನು ಕಟ್ಟಿಕೊಡುವುದರ ಜೊತೆಗೆ ಒಂದು ಸರ್ಕಾರ ಮಾಡಬೇಕಾದ ಗ್ರಾಮಗಳ ಸಮೀಕ್ಷೆಯ ಕೆಲಸವನ್ನು ಇಲ್ಲಿನ ಕಥೆಗಳು ಮಾಡುತ್ತದೆ. ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ, ಇಲ್ಲಿನ ಕಥೆಗಳ ಮೂಲಧಾತು ಸಮಾಜವಿಮರ್ಶೆಯಾಗಿದೆ. ಬಹುಪಾಲ ಕಥೆಗಾರರು. ನಗರ ಬದುಕಿನ ಹಿಸೆಯನ್ನೇ ವೈಭವೀ ಕರಿಸುತ್ತಾ ಗ್ರಾಮ ಬದುಕನ್ನು ಸ್ವರ್ಗವೆಂಬಂತೆ ಭಾವಿಸುತ್ತಿರುವ ಈ ಸಮಯದಲ್ಲಿ ಗ್ರಾಮಗಳ ನಿಜಬದುಕನ್ನು ಕಟ್ಟಿಕೊಡುವ ಮೂಲಕ ಇವು ಜೀವಂತಿಕೆಯನ್ನು ಪಡೆಯುತ್ತವೆ.

 

Related Books