ತುಳುಕು

Author : ಒಕ್ಕುಂದ ಎಂ.ಡಿ.

Pages 52

₹ 35.00




Year of Publication: 2001
Published by: ಲಡಾಯಿ ಪ್ರಕಾಶನ
Address: #21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

‘ತುಳುಕು’ ಎಂ.ಡಿ. ಒಕ್ಕುಂದ ಅವರ ಕವನ ಸಂಕಲನವಾಗಿದೆ. ನಿಸರ್ಗದ ಯಾವ ಕೊಡುಗೆಯೂ ನಮಗೆ ಪ್ರಿಯವಾಗದೆ ಕೃತಕತೆಗೆ ನಾವು ಶರಣಾಗಿದ್ದೇವೆ. ಇಂಥ ಕಡೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳುವಂಥ ಕವನಗಳನ್ನು ಒಕ್ಕುಂದ ನಮಗೆ ಕೊಟ್ಟಿದ್ದಾರೆ. ಕಾವ್ಯದ ಪ್ರತಿಮೆಯಲ್ಲಿ ನಾವು ಮುಖ ನೋಡಿಕೊಂಡು ಗುರುತಿಸಬಹುದಾದ ನುಣುವು ಹೊಳಪು ಕೊಟ್ಟಿದ್ದಾರೆ.

About the Author

ಒಕ್ಕುಂದ ಎಂ.ಡಿ.
(15 January 1967)

ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರಾಗಿದ್ದಾರೆ. ಅವರು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ 1967 ರ ಜೂನ್ 15 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನವಾಗಿದೆ.    ...

READ MORE

Reviews

ಹೊಸತು ಜುಲೈ- 2001

ನಮ್ಮ ಬದುಕಿನಲ್ಲಿ ಆಗಾಗ ಬಂದು ಎಲ್ಲಿ ಬೇಕೋ ಅಲ್ಲಿ ಸಂತೈಸ ಬೇಕಾದ ಅದೆಷ್ಟೋ ಶಕ್ತಿ ಚೇತನಗಳನ್ನು ಕಳೆದುಕೊಂಡಿದ್ದೇವೆ. ಗಾಢ ಮೌನ ನಮ್ಮ ಮಿತ್ರನಾಗಿದ್ದಾನೆ. ನಿಸರ್ಗದ ಯಾವ ಕೊಡುಗೆಯೂ ನಮಗೆ ಪ್ರಿಯವಾಗದೆ ಕೃತಕತೆಗೆ ನಾವು ಶರಣಾಗಿದ್ದೇವೆ. ಇಂಥ ಕಡೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳುವಂಥ ಕವನಗಳನ್ನು ಒಕ್ಕುಂದ ನಮಗೆ ಕೊಟ್ಟಿದ್ದಾರೆ. ಕಾವ್ಯದ ಪ್ರತಿಮೆಯಲ್ಲಿ ನಾವು ಮುಖ ನೋಡಿಕೊಂಡು ಗುರುತಿಸಬಹುದಾದ ನುಣುವು ಹೊಳಪು ಕೊಟ್ಟಿದ್ದಾರೆ.

Related Books