ಧಾರವಾಡದಲ್ಲಿ ಜಿ.ಬಿ. ಜೋಷಿಯವರಿಂದ ಸ್ಥಾಪಿತವಾದ ಕನ್ನಡದ ಮಹತ್ವದ ಪ್ರಕಟಣಾ ಸಂಸ್ಥೆ ಮನೋಹರ ಗ್ರಂಥಮಾಲಾ. 1933ರಲ್ಲಿ ಪ್ರಾರಂಭವಾಯಿತು. 90 ವರ್ಷಗಳನ್ನೆ ಸಮೀಪಿಸುತ್ತಿರುವ ಅಪರೂಪದ ಮತ್ತು ಅಭಿಮಾನದ ಪ್ರಕಾಶನ ಸಂಸ್ಥೆಯಾಗಿದೆ ಮನೋಹರ ಗ್ರಂಥಮಾಲಾ.
ಕನ್ನಡ ನಾಡು-ನುಡಿಯನ್ನು ಕಟ್ಟಿ ಬೆಳೆಸುವಲ್ಲಿ, ಉತ್ತಮ ಅಭಿರುಚಿಯ ಸಾಹಿತ್ಯವನ್ನು ಉಣಬಡಿಸುವಲ್ಲಿ ಮಹತ್ತರ ಸಾಧನೆ ಮನೋಹರ ಗ್ರಂಥಮಾಲೆಯದ್ದು. ಕನ್ನಡದ ಹಲವಾರು ಮಹತ್ವದ ಲೇಖಕರ ಕೃತಿಗಳನ್ನು ಪ್ರಕಟಿಸಿದೆ. ಗಿರೀಶ್ ಕಾರ್ನಾಡರ ಆಡಾಡತಾ ಆಯುಷ್ಯ, ಬಿ. ಜಯಶ್ರೀ ಅವರ ಕಣ್ಣಾ ಮುಚ್ಚೆ ಕಾಡೆ ಗೂಡೇ, ಎ.ಕೆ. ರಾಮಾನುಜನ್ ಅವರ ಸಮಗ್ರ ಸಂಪುಟ ಅತ್ಯಧಿಕ ಮಾರಾಟ ಕಂಡ ಮನೋಹರ ಗ್ರಂಥಮಾಲಾ ಪ್ರಕಟಣೆಗಳು.
ನವದೆಹಲಿಯ ಭಾರತೀಯ ಪ್ರಕಾಶಕರ ಸಂಘದ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕನ್ನಡ ಲೇಖಕರು ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ ಇಂಥ ಹಲವಾರು ಗೌರವಗಳಿಗೆ ಮನೋಹರ ಗ್ರಂಥಮಾಲಾ ಪಾತ್ರವಾಗಿದೆ.
©2024 Book Brahma Private Limited.