ಸಸಾರ ಅಲ್ಲವೋ ಸಂಸಾರ

Author : ರಾಧಿಕಾ ಕಾಖಂಡಿಕಿ

Pages 80

₹ 100.00




Year of Publication: 2023
Published by: ಮನೋಹರ ಗ್ರಂಥಮಾಲಾ

Synopsys

ಸಸಾರ ಅಲ್ಲವೋ ಸಂಸಾರ ರಾಧಿಕಾ ಕಾಖಂಡಿಕಿ ಅವರ ಅನುವಾದಿತ ಕೃತಿಯಾಗಿದೆ ಉಮರ್ಜಿಕರರ ಈ ನಾಟಕ ಮುಖ್ಯವಾಗಿ ಒಂದು ವಿಘಟಿತ ಕುಟುಂಬದ ನೋವುಗಳ ಕತೆ ಹೇಳುತ್ತಿದೆ. ಆದರೂ ಅದು ಆಧುನಿಕ ಬಗೆಯ ಪಶ್ಚಿಮ ಪ್ರಣೀತ ಕಣ್ಣುಗಳಿಂದ ಕಂಡ ದೃಶ್ಯಗಳು ಆಗಿಲ್ಲ. ಪ್ರೊ. ರಾಜೆನನ್ನು ಬಿಟ್ಟು ಹೋಗುವ ರೇಖಾ ಸ್ತ್ರೀವಾದಿ ನಿಲುವಿನ ಮಾದರಿಯ ರೋಷ ಉಳ್ಳವಳೂ ಆಗಿಲ್ಲ. ತಾಯಿಯಿಂದಲೂ ಪ್ರೀತಿ ದಕ್ಕದ ಗೀತಾಳ ಸಿಟ್ಟು ಕೂಡ ಒಂದು ಭಾವ ಜಗತ್ತಿನ ಸಹಜ ಪ್ರಕ್ರಿಯೆ ಆಗಿದೆಯೇ ವಿನಃ ಅದು ಆಧುನಿಕ ಅರ್ಥದ ವಿದ್ರೋಹವಾಗಿಲ್ಲ. ಕೇಡು ಅನ್ನೋ ಪ್ರವೃತ್ತಿಯು ಸ್ತ್ರೀಯ ಒಳಗೂ ಇರುತ್ತದೆ. ಪುರುಷರಲ್ಲಿಯೂ ಇರುತ್ತದೆ. ಅದರ ಸಂಘರ್ಷದಲ್ಲಿ ಹುಟ್ಟುವ ದುಃಖವು ಅದು ಸಂಸಾರದ ದುಃಖದ ಕತೆಯೇ ಹೊರತು ವಾದ - ವಿವಾದಗಳಿಂದ ಹುಟ್ಟಿದ ಪ್ರಕರಣವಲ್ಲ. ಈ ಸಾರಸ್ವತ ಅರಿವು ಈ ಮೂಲ ಕೃತಿಯಲ್ಲಿಯೇ ಇದೆ.

About the Author

ರಾಧಿಕಾ ಕಾಖಂಡಿಕಿ

ರಾಧಿಕಾ ಕಾಖಂಡಿಕಿ ಅವರು ಬಿ ಎಸ್ಸಿ, ಎಮ್ ಎ (ಸಂಸ್ಕೃತ) ಪದವಿ ಪಡೆದಿರುವ ಅವರು ಶಾಸ್ತ್ರೀಯ ಮತ್ತು ಲಘು ಸಂಗೀತ ಕಲಾವಿದರು. ಸಂಗೀತದಲ್ಲಿ 'ಅಲಂಕಾರ' ಹಾಗೂ 'ಸೀನಿಯರ್' ಪದವೀಧರೆ, ಭಾರತೀಯ ಸ್ಟೇಟ್‌ಬ್ಯಾಂಕ್ ಸ್ವಯಂ ನಿವೃತ್ತ ಉದ್ಯೋಗಿಯಾಗಿದ್ದರು. ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣತಿ ಪಡೆದಿರುವ ಅವರು ವಚನ, ದಾಸರ ಪದಗಳು, ಅನೇಕ ಹಿರಿಯ ಕವಿಗಳ ಭಾವಗೀತೆಗಳಿಗೆ ಸ್ವತಃ ಸ್ವರ ಸಂಯೋಜನೆಯನ್ನು ಮಾಡಿ ಪ್ರಸ್ತುತ ಪಡಿಸುತ್ತಾರೆ. ಬೇಂದ್ರೆಯವರ ಭಾವಗೀತೆಗಳ ವಿಶೇಷ ಅಧ್ಯಯನ. "ನಾದಲೋಲ ಬೇಂದ್ರೆ" ಮತ್ತು "ರಾಗ ಭೂಪ ಬೇಂದ್ರೆ" ಪ್ರಬಂಧಗಳ ಮಂಡನೆ. ಬೇಂದ್ರೆಯವರ "ಕೊಳಲನೂದಿದನೇನ ಕೃಷ್ಣ" ...

READ MORE

Related Books