ಜಿದ್ದು

Author : ಅನು ಬೆಳ್ಳೆ (ರಾಘವೇಂದ್ರರಾವ)

Pages 176

₹ 230.00
Year of Publication: 2023
Published by: ಮನೋಹರ ಗ್ರಂಥಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: +91 9845447002 / 0836-2441822

Synopsys

‘ಜಿದ್ದು’ ಅನುಬೆಳ್ಳೆ ಅವರ ಕಾದಂಬರಿಯಾಗಿದೆ. ಬಹಳ ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಮನೆಮಾಡಿಕೊಂಡಿದ್ದ ಒಂದು ಕಥೆಯ ಎಳೆ ಈಗ ಕಾದಂಬರಿಯಾಗಿ ರೂಪುಗೊಂಡು, ನಾಡಿನ ಹೆಮ್ಮೆಯಪ್ರಕಾಶನ ಸಂಸ್ಥೆ ಮನೋಹರ ಗ್ರಂಥಮಾಲಾ ದಿಂದ ಹೊರ ಬರುತ್ತಿರುವುದು ತುಂಬಾ ಸಂತೋಷವಾಗಿದೆ. ಇದು ನನ್ನ ಬಹು ದಿನಗಳ ಕನಸು ಕೂಡ. ಇದರ ಹಿಂದೆ ಬಹು ಜನರ ಪ್ರೀತಿ ಮತ್ತು ಪರಿಶ್ರಮವಿದೆ. ಈ ಕಾದಂಬರಿಯ ಕಥಾವಸ್ತು ವಿಭಿನ್ನ ರೀತಿಯಾಗಿದ್ದು ನನ್ನ ಓದುಗರಿಗೆ ಇಷ್ಟವಾಗಬಹುದು ಎಂದಿದ್ದಾರೆ ಲೇಖಕ ಅನುಬೆಳ್ಳೆ.

About the Author

ಅನು ಬೆಳ್ಳೆ (ರಾಘವೇಂದ್ರರಾವ)

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...

READ MORE

Related Books