ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್

ಪುಸ್ತಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆವರೆಗೂ ಬೆಳೆಸುವ ಹಾಗೂ ಓದುವ ಅಭಿರುಚಿ-ಆಸಕ್ತಿಯನ್ನು ಹೆಚ್ಚಿಸುವ ಜೊತೆಗೆ ಉತ್ತಮ ಗುಣಮಟ್ಟದ ವಿವಿಧ ಪ್ರಕಾರದ ಸಾಹಿತ್ಯಕ ಕೃತಿಗಳನ್ನು ಪ್ರಕಟಿಸುವ ಉದ್ದೇಶದೊಂದಿಗೆ 'ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್' ಸಂಸ್ಥೆಯು 2011ರಲ್ಲಿ ಪ್ರಾರಂಭಗೊಂಡಿತು. ಕಳೆದ ಹತ್ತಾರು ವರ್ಷಗಳಿಂದ ಪ್ರಕಾಶನ, ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ದುಡಿದು ಅನುಭವವಿರುವ ಲೇಖಕರಾದ ಶ್ರೀಧರ ಬನವಾಸಿ ಅವರ ಮುಂದಾಳತ್ವದಲ್ಲಿ ಪಂಚಮಿ ಸಂಸ್ಥೆಯು ಸಾಗುತ್ತಿದೆ.

ಇದುವರೆಗೂ 35ಕ್ಕೂ ಮೌಲಿಕ ಕೃತಿಗಳು ಸಂಸ್ಥೆಯಿಂದ ಪ್ರಕಟಿತಗೊಂಡಿವೆ. ಕರ್ನಾಟಕ ಮಾತ್ರವಲ್ಲದೇ, ಹೊರರಾಜ್ಯ ಮತ್ತು ಹೊರರಾಷ್ಟ್ರಗಳಲ್ಲಿ ನೆಲೆಸಿರುವಂತಹ ಕನ್ನಡ ಓದುಗರಿಗೆ ಸದಭಿರುಚಿಯ ಪುಸ್ತಕಗಳನ್ನು ತಲುಪಿಸುವ ನಿಟ್ಟಿನಲ್ಲಿ ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ಸಂಸ್ಥೆಯು`ಪಂಚಮಿ ಆನ್ಲೈನ್ ವೇದಿಕೆಯ ಮೂಲಕ ಪುಸ್ತಕಗಳನ್ನು ಮಾರಾಟ ಮಾಡುತ್ತಿದೆ.

ಇದರ ಜೊತೆಗೆ ಪಂಚಮಿ ಪ್ರಕಾಶನದ ಪುಸ್ತಕಗಳನ್ನು ಮಾತ್ರವಲ್ಲದೇ, ಬೇರೆ ಪ್ರಕಾಶಕರು, ಲೇಖಕರ ಪುಸ್ತಕಗಳನ್ನು ಈ ವೇದಿಕೆಯ ಮೂಲಕ ಪರಿಚಯಿಸಿ ಆನ್ಲೈನ್ ಮಾರಾಟ ಮಾಡುವ ಪ್ರಯತ್ನಮಾಡುತ್ತಿದೆ. ಇದುವರೆಗಿನ ಪಂಚಮಿ ಬಳಗದ ಕೃತಿಗಳಿಗೆ ಹತ್ತಕ್ಕೂ ಹೆಚ್ಚು ಮೌಲಿಕ ಪ್ರಶಸ್ತಿಗಳು ಬಂದಿರುವುದು ಸಂಸ್ಥೆಯ ಹೆಮ್ಮೆಯಾಗಿದೆ.

ಪುಸ್ತಕ ಓದುವಿಕೆ ಮತ್ತು ಕೊಳ್ಳುವಿಕೆ ಕೂಡ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೆಂದು ನಂಬಿ ಪಂಚಮಿ ಮೀಡಿಯ ಪಬ್ಲಿಕೇಷನ್ಸ್ ಸದ್ಯ ಪ್ರಕಾಶನ ಕ್ಷೇತ್ರದಲ್ಲಿ ಸಕ್ರಿಯವಾಗಿದೆ.

BOOKS BY PANCHAMI MEDIA PUBLICATIONS

ಕೊಟ್ಟು ಹುಟ್ಟದವರ ಬದುಕು

ಸಹಿ ಹಾಕಲು ನೀ ಬೇಕಿದೆ

ಸರಸವಾಣಿಯ ಗಿಣಿಗಳು

ಅನ್ವೇಷಣೆ

ಮಣಿಹಾರ

ದೇವಚಂದ್ರನ ರಾಜಾವಳಿ ಕಥಾಸಾರ

ಬದುಕಿರುವುದೇ ಓದಿ ಬರೆಯಲಿಕ್ಕೆ

ಅರಮನೆಯಿಂದ ಅರಿವಿನರಮನೆಗೆ

Publisher Address

ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ #326, `ಚೈತ್ರ', ಮೊದಲನೇ ಮಹಡಿ, 5ನೇ ತಿರುವು, 5ನೇ ಬ್ಲಾಕ್, ಬನಶಂಕರಿ 3ನೇ ಹಂತ, ಭುವನೇಶ್ವರಿ ನಗರ, ಬೆಂಗಳೂರು-560085

Panchami Media Publications #326, Chitra, 1St floor, 5th Cross, 5th Block, BSK 3rd Stage, Bhuvaneshwari Nagar, Bangalore-560085.

Publisher Contact

9740069123 / 9739561334

Email

panchami.publications@gmail.com