ನಮ್ಮ ದೈನಂದಿನ ಬದುಕಿನಲ್ಲಿ ಒಂದು ಸಣ್ಣ ಸರಳವಾದ ಸಂಗತಿಯನ್ನು ಕೈಗೊಂಡರೂ ನಮ್ಮ ಬದುಕು ನಾವಂದುಕೊಂಡಂತೆ ಬದಲಾಗುವುದಿದೆ. ಯಾವುದಕ್ಕೂ ಮೊದಲು ನಾವು ಕ್ರಮ ಕೈಗೊಳ್ಳಬೇಕಿದೆ. ಮೊದಲು ನಾವು ಕ್ರಿಯಾಶೀಲರಾಗಬೇಕಿದೆ. ಕಾರ್ಯ ಚಟುವಟಿಕೆಯನ್ನು ನಿರ್ವಹಿಸುತ್ತಲೇ ಸಾಗಬೇಕಿದೆ. ಅದು ಎಷ್ಟು ಸರಳ ಸಣ್ಣ ಸಂಗತಿಯನ್ನು ನಿಯಮಿತವಾಗಿ ಅಭ್ಯಸಿದಂತೆ ಕೈಗೊಂಡರೂ ನಮಗೆ ಆದರೆ ಪ್ರತಿಫಲ ಲಭಿಸಿಯೇ ತೀರುತ್ತದೆ. ಇದು ಯಶಸ್ಸಿನ ದಾರಿ. ಕೆಲವರು ಬದುಕಿನಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಅವರು ನಮ್ಮ ಜೊತೆಗೆ ಇರುವವರು. ನಮ್ಮಂತೆಯೇ ಕಾಣುವವರು. ನಾವೂ ಅವರಂತೆಯೇ ಆಗಬಹುದಾಗಿದೆ. ಬದುಕು ಎಲ್ಲರಿಗೂ ಸಮಾನ ಅವಕಾಶಗಳನ್ನೇ ನೀಡಿದೆ ಇದನ್ನು ನಾವು ನಮ್ಮ ಸೀಮಿತ ಚೌಕಟ್ಟಿನಿಂದ ಹೊರಬಂದು ಗಮನಿಸಬೇಕಿದೆ. ಈ ಯಾತ್ರೆಯಲ್ಲಿ `ಅನ್ವೇಷಣೆ' ಪುಸ್ತಕವು ನಮ್ಮ ಜೊತೆಗಿದೆ.
©2023 Book Brahma Private Limited.