Story/Poem

ಸಿ.ಬಿ. ಐನಳ್ಳಿ

ಸಿ.ಬಿ. ಐನಳ್ಳಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಕಾವ್ಯ ಅವರ ಸಾಹಿತ್ಯ ಪ್ರಕಾರ. ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

More About Author

Story/Poem

ನಮ್ಮವ್ವ

ನೀವು ಫಿಲಾಸಫಿ ಗಿಲಾಸಫಿ ಅಂತಾಡಿದರ ಪಿಂಜಾರ ಶಫಿ ಅಂದುಕೊಂಡಾಳು ! ಆಕಿ ನಮ್ಮವ್ವ ಫಿಲಾಸಫಿಯ ಮಾತೆಲ್ಲಿ ಬಂತು ಸಾಹಿತ್ಯ ಸಮಾಜಶಾಸ್ತ್ರ ಮನಶಾಸ್ತ್ರ ಮಾನವಶಾಸ್ತ್ರ ಅಂತಾಡಿದರ ಅವೆಲ್ಲ ಹುಡಿಯಕ್ಕಿಶಾಸ್ತ್ರ ಸುರಿಗೆ ಶಾಸ್ತ್ರ ಕುಬುಸದಶಾಸ್ತ್ರ ಅಂತಾದಾವು ! ಆಕಿ ನಮ್ಮವ್ವ ಶಾಸ್ತ್ರ...

Read More...