Story/Poem

ಕೆ.ವಿ. ತಿರುಮಲೇಶ್‌

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ಅವರ ತಮ್ಮ ಕಾವ್ಯಕ್ಕೆ ಹಲವು ಪರಂಪರೆಗಳಿಂದ ತಾತ್ವಿಕತೆ, ಅನುಭವ ಮತ್ತು ಪ್ರತಿಮೆಗಳನ್ನು ತಂದಿದ್ದಾರೆ. ಶಬ್ದಗಳನ್ನು ಸಾಧ್ಯವಾದಷ್ಟೂ ನಿರಾಭರಣಗೊಳಿಸಿ ಬಳಲೆತ್ನಿಸಿದ ಎ.ಕೆ. ರಾಮಾನುಜನ್ ತರಹದ ಕನ್ನಡ ಕವಿಗಳ ಜೊತೆಗೆ ತಿರುಮಲೇಶ್ ಕೂಡ ಇದ್ದರು.

More About Author

Story/Poem

‘ಅಕ್ಷಯ ಕಾವ್ಯ’ದಿಂದ ಆಯ್ದ ಕವಿತೆ

ತನ್ನ ಮನೆ ತನ್ನ ವಠಾರ ತನ್ನ ಸ್ವಾತಂತ್ಯ್ರ ಕಳಕೊಂಡು ಆತನು ತೀರ ಅಸ್ವಸ್ಥನಾಗಿಬುಡುತ್ತಾನೆ ಊಟ ಸೇರುವುದಿಲ್ಲ ನಿದ್ದೆ ಬರುವುದಿಲ್ಲ ಮಾತು ಮರೆತಂತೆ ಅನಿಸುವುದು ಸುರ್ಧೀಘ ಕಾಲ ಯಾರೊಂದಿಗೂ ಮಾತಾನಾಡದ ಕಾರಣ ಶಬ್ದಗಳು ಕಳೆದುಹೋದವು ನೆನಪು ಮಾಯತೊಡಗಿತು ಅವರು ಹೇಗಿದ್ದರು ಇವರು ಹೇಗಿದ್...

Read More...

ಪೆಂಟಯ್ಯನ ಅಂಗಿ

ಇದ್ದಿಲಂಗಡಿ ಕೆಲಸದ ಪೆಂಟಯ್ಯನಿಗೆ ಇದ್ದುದು ಒಂದೇ ಒಂದು ಅಂಗಿ. ಗಿರಾಕಿಗಳ ಮನೆಗೆ ಇದ್ದಿಲು ಸಪ್ಲೈ ಮಾಡುವಾಗಲೂ ರಾತ್ರಿ ನಿದ್ದೆ ಮಾಡುವಾಗಲೂ, ಪೇಟೆಕಡೆ ಹೋಗುವಾಗಲೂ ಇದೇ ಅಂಗಿ. ಮೂಸಿನದಿಯ ಕೊಚ್ಚೆಯಲ್ಲಿ ಅದ್ದಿ ತೆಗೆದಂಥ ಬಣ್ಣ, ಇದರಿಂದ ಬೇಸರಗೊಂಡ ಪೆಂಟಯ್ಯ ಕಾಸಿಗೆ ಕಾಸು ಸ...

Read More...

ಹೇಳಬೇಕೆಂದದ್ದು

ಕ್ಷಣ ನೋಟದ ಸಂಪರ್ಕದಲ್ಲಿ ಆಗ ಎದ್ದ ಸ್ತರದಲ್ಲಿ ಚಾಚಿ ತಲುಪಬೇಕೆಂದಿದ್ದೆ ಆಗ ಬೇರೆ ಯಾರೋ ಹೆಲೋ ಎಂದು ಹಿಡಿದೆಳೆದರು ಕುಶಲ ವಿಚಾರಿಸಿದರು ಕೆಲಸ ಕ್ಯಾಂಪು ಸಂಬಳ ಮದುವೆ ಅಷ್ಟರಲ್ಲಿ ಜನ ಬಂದರು ಜನರ ಓಡಾಟದಲ್ಲಿ ಮಾತಿನ ಕಪ್ಪು-ಸಾಸರಿನ ಸೀರೆಯ ಸಂಗೀತದ ಗದ್ದಲದಲ್ಲಿ ಹೇಳಬ...

Read More...