Story/Poem

ಮಂಜುಳಾ ಹುಲಿಕುಂಟೆ

ಸಂವಾದ ಸಂಸ್ಥೆಯಲ್ಲಿ ‘ಯುವಜನರ ಹಕ್ಕುಗಳು’ ಎಂಬ ವಿಷಯದಡಿ ನಡೆಸಿದ ಸಾಕ್ಷ್ಯ ಕಾರ್ಯದ ಫಲವಾಗಿ ‘ಹೆಡ್ಡಿಂಗ್‌ ಕೊಡಿ’ ಹೆಸರಿನ ಕೃತಿ ಸಂಪಾದನೆ ಮತ್ತು ದೀಪದುಳುವಿನ ಕಾತರ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಉದಯೋನ್ಮಕ ಕವಯತ್ರಿಯರಿಗೆ ನೀಡುವ 2016ನೇ ಸಾಲಿನ ಡಾ.ಸಿ.ವಿ.ವತ್ಸಲಾದೇವಿ ಸ್ಮಾರಕ ಪ್ರಶಸ್ತಿ, ವಿಜಯಪುರದ ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದಿಂದ 2018ನೇ ಸಾಲಿನ ಯುವ ಸಾಹಿತಿ ಪುರಸ್ಕಾರ ಪಡೆದಿದ್ದಾರೆ. ಇವರ ಹಲವು ಕವಿತೆ, ಲೇಖನಗಳು ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆ, ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author

Story/Poem

ಕವಿತೆ ಕೈಜಾರುತ್ತದೆ

ಯುದ್ಧಭೂಮಿಯಲಿ ನಿಂತು ಪ್ರೇಮದ ಕವಿತೆ ಓದುವಂತೆ ನಿಟ್ಟುಸಿರಿನ ಜೊತೆ ಬದುಕಿನ ಕನಸ ಬೆರೆಸಿ ಒಂದೊಂದೇ ತುತ್ತು ಗಂಟಲಿಗಿಳಿಸುತ್ತೇನೆ… ಕವಿತೆ ಕೈಜಾರುತ್ತದೆ.. ಧರ್ಮದ ಮಾತು..! ಸುಮ್ಮನೆ ಎದೆಗಿರಿಯುತ್ತದೆ ಅಲ್ಲೆಲ್ಲೋ ... ನಿಂತ ನೆಲಕ್ಕಾಗಿ ಹೋರಾಡುವವರ ಕೊಂದು, ದೋಚಿದವರ...

Read More...

ಕ್ಷಮಿಸಿ

ಕ್ಷಮಿಸಿ ನಾನೀಗ ನಿಮ್ಮ ದ್ವೇಷವನ್ನ ಬದುಕುವ ಹಂತದಲ್ಲಿಲ್ಲ ಎದೆಗಪ್ಪಿಕೊಳ್ಳುವ ಪ್ರೇಮಕ್ಕೆ ಶರಣಾಗಿದ್ದೇನೆ.. ಬೆನ್ನಿಗೆ ಇರಿದು ಹಲ್ಲುಕಿರಿಯುವ ನಿಮ್ಮೆಲ್ಲಾ ಕ್ರೌರ್ಯ ಗೆಲುವೆನಿಸಿದರೆ ಸಂಭ್ರಮಿಸಿ ನನ್ನ ಅಂಗೈಗಂಟಿದ ನನ್ನದೇ ನೆತ್ತರಿನಲ್ಲಿ ನವಿಲಿನ ಚಿತ್ರಬರೆಯಬೇಕಿದೆ.. ...

Read More...

ಕಾಲ ಮಾಗಿಸದ ಗಾಯಗಳೇ ಇಲ್ಲಾ..

ಕಾಲ ಮಾಗಿಸದ ಗಾಯಗಳೇ ಇಲ್ಲ ಹುಡುಗಿ ಸ್ವಲ್ಪ ಕಾಯು.. ಎದೆಯೊಳಗೆ ಉರಿವ ಜ್ವಾಲಾಗ್ನಿಯೂ ಹೆಪ್ಪುಗಟ್ಟುತ್ತದೆ ತಿದ್ದುಕೋ ನಿನ್ನ ನಿನಗೆ ಬೇಕಾದಂತೆ.. ಮರೆಯದ ಒಲವೆಂದು ದಿನವಿಡೀ ತಳಮಳಿಸುವೆಲ್ಲಾ ಕೂತು ನೋಡು ಅಗಾಧ ಪ್ರೇಮವೂ ಕರಗಿಹೋಗುತ್ತದೆ ಅವನ ಬದಲಾವಣೆಯೊಂದಿಗೆ… ನೀನು ...

Read More...

ಇಲ್ಲಿ ಎಲ್ಲವೂ ಬದಲಾಗುತ್ತವೆ... 

ಇಲ್ಲಿ ಎಲ್ಲವೂ ಬದಲಾಗುತ್ತವೆ... ಬದಲಾಗುವುದೇ ನಿಯಮ ಎನ್ನುತ್ತದೆ ಜಗತ್ತು ತೊಟ್ಟು ಕಳಚಿಬೀಳುವ ಹೂವಿನಂತೆ ಎಲ್ಲವೂ ಕಳಚಿ ಬೀಳುತ್ತವೆ… ಇಲ್ಲೊಂದು ಹೂವಿತ್ತು, ನನ್ನ ಪಾಲಿಗದು ಪ್ರೇಮವೆಂದುಕೊಳ್ಳಿ... ಅದರ ಕುರುಹೂ ಇಲ್ಲದಂತೆ ಎಲ್ಲವೂ ಸರಿದುಹೋಗುತ್ತವೆ ಮತ್ತೆ ಹೂ ಅರಳುತ್ತದೆ...

Read More...