Story/Poem

ಸು.ರಂ. ಎಕ್ಕುಂಡಿ

ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು  20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು. 

More About Author

Story/Poem

ಆಕಾಶ ಬುಟ್ಟಿ

ತೂಗಿ ಬಿಡುವೆನು ದೂರ ನಡೆದವರಿಗೆಂದು ಬಣ್ಣ ಬಣ್ಣದ ಮುಗಿಲ ಬುಟ್ಟಿಯಿದನಿಂದು ಹಸಿರು ಕನಸನು ಹೊದ್ದ ನೆಲದ ಕಿವಿಯಲ್ಲಿಂದು ಗಾಳಿ ಹಾಡಿದೆ ಹಾಲು ತೆನೆಯ ಹಾಡು ರತ್ನದೀಪದ ಸಾಲು ನಕ್ಷತ್ರ ಮಾಲೆಗಳ ಕಂಡು ತಲೆಯೆತ್ತಿಹುದು ಮುಗಿಲ ಗೂಡು ಕಾಲವೆ ಕತ್ತಲೆಯ ಕೋಲೂರಿ ನಿಲ್ಲಿಸಿದೆ ಹಲವು ಹಂಬ...

Read More...